ಕುರುಕ್ಷೇತ್ರದ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಮುನಿರತ್ನ, ರಿಲೀಸ್ ಬಗ್ಗೆ ಸುಳಿವು

Recommended Video

Kurukshetra Movie: ಕುರುಕ್ಷೇತ್ರ ಸಿನಿಮಾ ರಿಲೀಸ್ ಬಗ್ಗೆ ಮುನಿರತ್ನ ಬಿಚ್ಚಿಟ್ಟ ಕುತೂಹಲಕಾರಿ ಮಾಹಿತಿ

ಮಂಡ್ಯ ಕುರುಕ್ಷೇತ್ರ ಮುಗಿಯುತ್ತಿದ್ದಂತೆ ಈಗ 'ಮುನಿರತ್ನ ಕುರುಕ್ಷೇತ್ರ' ಸದ್ದು ಮಾಡ್ತಿದೆ. ಕನ್ನಡ ಚಿತ್ರರಂಗದ ಬಹುದೊಡ್ಡ ಸಿನಿಮಾ ಎಂದು ಗುರುತಿಸಿಕೊಂಡಿರುವ ಕುರುಕ್ಷೇತ್ರ ಸಿನಿಮಾ ಬಗ್ಗೆ ನಿರ್ಮಾಪಕ ಮುನಿರತ್ನ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

ಈಗಾಗಲೇ ಐದು ಭಾಷೆಯಲ್ಲಿ ದರ್ಶನ್ ಕುರುಕ್ಷೇತ್ರ ತೆರೆಕಾಣುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಎಂದು ಸ್ವತಃ ಮುನಿರತ್ನ ಬಹಿರಂಗಪಡಿಸಿದ್ದಾರೆ.

ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಎಂದು ಹೇಳುತ್ತಿರುವ ಮುನಿರತ್ನ ಸಿನಿಮಾದ ಬಗ್ಗೆ ತಾಜಾ ಸುದ್ದಿಗಳನ್ನ ಕೂಡ ಬಿಟ್ಟುಕೊಟ್ಟಿದ್ದಾರೆ. ಇಷ್ಟು ದಿನ ಅಭಿಮಾನಿಗಳು ಕೇಳುತ್ತಿದ್ದ ಬಹುತೇಕ ಪ್ರಶ್ನೆಗಳಿಗೆ ಇದು ಉತ್ತರವಾಗಿದೆ. ಹಾಗಿದ್ರೆ, ಕುರುಕ್ಷೇತ್ರದ ಲೇಟೆಸ್ಟ್ ಮಾಹಿತಿ ಏನಿದೆ? ಮುಂದೆ ಓದಿ.....

ಇಡೀ ವಿಶ್ವದಲ್ಲಿ ಕುರುಕ್ಷೇತ್ರ ರಿಲೀಸ್

ಇಡೀ ವಿಶ್ವದಲ್ಲಿ ಕುರುಕ್ಷೇತ್ರ ರಿಲೀಸ್

ಪ್ರಪಂಚಾದ್ಯಂತ ಐದು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆಕಾಣಲಿದ್ದು, ಎಲ್ಲ ಭಾಷೆಯಲ್ಲೂ 3ಡಿ ರೂಪದಲ್ಲಿ ಬರುತ್ತಂತೆ.

ನಾಲ್ಕು ಭಾಷೆ ಸಿದ್ಧವಾಗಿದೆ.!

ನಾಲ್ಕು ಭಾಷೆ ಸಿದ್ಧವಾಗಿದೆ.!

ಈಗಾಗಲೇ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಸಿದ್ಧವಾಗಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡ ಆಗಿದೆಯಂತೆ. ಉಳಿದ ಮೂರು ಭಾಷೆ ಮುಂದಿನ ವಾರ ಸೆನ್ಸಾರ್ ಗೆ ಹೋಗುತ್ತಿದೆ. ಹಿಂದಿ ವರ್ಷನ್ ಹದಿನೈದು ದಿನದಲ್ಲಿ ಮುಗಿಯುತ್ತೆ. ಅಮೇರಿಕಾ ಒಂದರಲ್ಲೇ ಐದು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆಯಂತೆ.

ಹಿಂದಿ ಡಬ್ಬಿಂಗ್ ಹಕ್ಕು 9.5 ಕೋಟಿಗೆ ಸೇಲ್.!

ಹಿಂದಿ ಡಬ್ಬಿಂಗ್ ಹಕ್ಕು 9.5 ಕೋಟಿಗೆ ಸೇಲ್.!

ನಿರ್ಮಾಪಕ ಮುನಿರತ್ನ ಅವರೇ ಹೇಳಿರುವ ಪ್ರಕಾರ, ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಬರೋಬ್ಬರಿ 9.5 ಕೋಟಿಗೆ ಸೇಲ್ ಆಗಿದೆಯಂತೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಇದು ಕೇವಲ ಟಿವಿಗೆ ಮಾತ್ರ ಮಾರಾಟ ಮಾಡಿರುವುದು. ಥಿಯೇಟರ್ ಗೆ ಸೇಲ್ ಮಾಡಿಲ್ಲ. ಓವರ್ ಸೀಸ್ ಕೂಡ ಯಾವ ಭಾಷೆಯ ಹಕ್ಕು ಕೂಡ ಮಾರಾಟ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ.

ರಿಲೀಸ್ ಯಾವಾಗ?

ರಿಲೀಸ್ ಯಾವಾಗ?

ಐದು ಭಾಷೆಯ ಪ್ರಿಂಟ್ 3ಡಿ ವ್ಯವಸ್ಥೆಯಲ್ಲಿ ಸಿದ್ಧವಾಗಿ ಮುನಿರತ್ನ ಅವರ ಕೈ ಸೇರಿದ ಮೇಲಷ್ಟೇ ಬಿಡುಗಡೆಯ ದಿನಾಂಕವನ್ನ ಪ್ರಕಟ ಮಾಡಲಿದ್ದಾರಂತೆ. ಬಹುಕೋಟಿಯಲ್ಲಿ ತಯಾರಾಗಿರುವ ಕುರುಕ್ಷೇತ್ರ ಸಿನಿಮಾವನ್ನ ನಾಗಣ್ಣ, ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಅರ್ಜುನ್ ಸರ್ಜಾ, ಸೋನು ಸೂದ್, ಮೇಘನಾ ರಾಜ್, ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.

More from Filmibeat

English summary
Kannada movie kurukshetra will release in five language. already movie has ready to release in four language, except hindi. according to munirathna hindi tv rights sold out for 9.5 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X