ಗಲ್ಫ್ ದೇಶಗಳಲ್ಲಿ ಅಬ್ಬರಿಸಲಿದೆ ದರ್ಶನ್ 'ಕುರುಕ್ಷೇತ್ರ'

Recommended Video

Kurukshetra movie : ಗಲ್ಫ್ ದೇಶಗಳಲ್ಲಿ ಅಬ್ಬರಿಸಲಿದೆ ದರ್ಶನ್ 'ಕುರುಕ್ಷೇತ್ರ' | FILMIBEAT KANNADA

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಸಿನಿಮಾ ಈಗ ಗಲ್ಫ್ ದೇಶಕ್ಕೆ ಎಂಟ್ರಿಯಾಗಿದೆ. ಯುಎಸ್, ಕೆನಡಾ ಸೇರಿದಂತೆ ವಿಶ್ವದ ಹಲವು ಕಡೆ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಈಗ ಗಲ್ಫ್ ದೇಶಗಳಲ್ಲಿ ತೆರೆಕಾಣುತ್ತಿದೆ.

ಸೆಪ್ಟೆಂಬರ್ 5 ರಂದು ಗಲ್ಪ್ ದೇಶಗಳಲ್ಲಿ ಮುನಿರತ್ನ ಕುರುಕ್ಷೇತ್ರ ಪ್ರದರ್ಶನ ಆರಂಭಿಸಲಿದೆ. ದುಬೈ, ಅಬುದಾಬಿ, ಶಾರ್ಜಾ, ಅಜ್ಮಾನ್, ಅಲ್ ಐನ್, ಒಮಾನ್, ಬಹರೇನ್, ಫುಜೈರಾದಲ್ಲಿ ಒಟ್ಟು 21 ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 11ರ ವರೆಗೂ ಪ್ರತಿದಿನವೂ ಕುರುಕ್ಷೇತ್ರ ಶೋ ಇರಲಿದೆ. 3ಡಿ ಯಲ್ಲಿ ತಯಾರಾಗಿರುವ ಮೊದಲ ಪೌರಾಣಿಕ ಚಿತ್ರ ಇದಾಗಿದ್ದು, ಗಲ್ಫ್ ದೇಶದ ಪ್ರೇಕ್ಷಕರಿಗೂ ಇದು ಹೊಸ ಅನುಭವವಾಗಲಿದೆ.

Kurukshetra Will Release In Gulf Country

ಆಗಸ್ಟ್ 9 ರಂದು ದೇಶಾದ್ಯಂತ ಬಿಡುಗಡೆಯಾಗಿದ್ದ ಕುರುಕ್ಷೇತ್ರ ನೂರು ಕೋಟಿ ಗಳಿಸಿದೆ ಎಂದು ಹೇಳಲಾಗ್ತಿದೆ. ಈ ಸಂಭ್ರಮವನ್ನ ಡಿ ಬಾಸ್ ಅಭಿಮಾನಿಗಳ ಜೊತೆ ದರ್ಶನ್ ಆಚರಿಸಿದ್ದಾರೆ.

ದರ್ಶನ್ ದುರ್ಯೋಧನ, ರವಿಚಂದ್ರನ್ ಕೃಷ್ಣ, ಅರ್ಜುನ್ ಸರ್ಜಾ ಕರ್ಣ, ಸೋನು ಸೂದ್ ಅರ್ಜುನ, ಸ್ನೇಹಾ ದ್ರೌಪದಿ, ಮೇಘನಾ ರಾಜ್ ಭಾನುಮತಿ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗಣ್ಣ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ.

More from Filmibeat

English summary
Kannada actor Darshan starrer 50th movie Kurukshetra will release in gulf country on september 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X