'ಕುರುಕ್ಷೇತ್ರ' ಚಿತ್ರದ 5 ಲೇಟೆಸ್ಟ್ ಸುದ್ದಿಗಳು
ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿರುವ ಚಿತ್ರತಂಡ ಗ್ರಾಫಿಕ್ಸ್ ವರ್ಕ್ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನದಿಂದ ವೇಗವಾಗಿ ಕೆಲಸ ಮಾಡುತ್ತಿದೆ ನಾಗಣ್ಣ ಮತ್ತು ತಂಡ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ನಿಖಿಲ್ ಕುಮಾರ್, ಅಂಬರೀಶ್, ಸೋನು ಸೂದ್, ಶಶಿಕುಮಾರ್, ಸ್ನೇಹಾ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಡ್ಯಾನಿಶ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
ಈಗಾಗಲೇ ನಿಖಿಲ್ ಕುಮಾರ್, ರವಿಚಂದ್ರನ್, ಅಂಬರೀಶ್, ಹರಿಪ್ರಿಯಾ, ಸೇರಿದಂತೆ ಹಲವರ ಶೂಟಿಂಗ್ ಅಂತ್ಯವಾಗಿದೆ. 'ಹಾಗಿದ್ರೆ, ಕುರುಕ್ಷೇತ್ರ ಚಿತ್ರದ ಲೇಟೆಸ್ಟ್ ಸಂಗತಿಗಳು ಏನು ಇದೆ ಎಂದು ತಿಳಿದುಕೊಳ್ಳಲು? ಮುಂದೆ ಓದಿ.....

ಶೂಟಿಂಗ್ ಮುಗಿಸಿದ ಭಾನುಮತಿ
'ಕುರುಕ್ಷೇತ್ರ' ಚಿತ್ರದಲ್ಲಿ ಭಾನುಮತಿ ಪಾತ್ರ ನಿರ್ವಹಿಸಿರುವ ನಟಿ ಮೇಘನಾ ರಾಜ್ ತಮ್ಮ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಪೌರಾಣಿಕ ಚಿತ್ರದಲ್ಲಿ ದುರ್ಯೋಧನ ದರ್ಶನ್ ಗೆ ಪತ್ನಿಯಾಗಿ ಮೇಘನಾ ಬಣ್ಣ ಹಚ್ಚಿದ್ದರು.

ಕರ್ಣನ ಹೊಸ ಫೋಟೋ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಚಿತ್ರದಲ್ಲಿ ಕರ್ಣನ ಪಾತ್ರ ನಿರ್ವಹಿಸಿದ್ದಾರೆ. ಇದುವರೆಗೂ ಕರ್ಣನ ಪೂರ್ತಿ ಲುಕ್ ಎಲ್ಲೂ ಬಹಿರಂಗವಾಗಿರಲಿಲ್ಲ. ಇದೀಗ, ಯುದ್ಧದ ಸನ್ನಿವೇಶದಲ್ಲಿ ಕರ್ಣನ ಗೆಟಪ್ ರಿವಿಲ್ ಆಗಿದೆ.

ದುರ್ಯೋಧನನ ವಿಡಿಯೋ
ಕುರುಕ್ಷೇತ್ರ ಸೆಟ್ ನಲ್ಲಿ ದುರ್ಯೋಧನ ದರ್ಶನ್ ಮತ್ತು ಭಾನುಮತಿ ಮೇಘನಾ ರಾಜ್ 'Boomerang' ವಿಡಿಯೋ ಮಾಡಿದ್ದಾರೆ. ದರ್ಶನ್ ಇದೇ ಮೊದಲ ಭಾರಿಗೆ ಇಂತಹ ವಿಡಿಯೋ ಮಾಡಿರುವುದು ವಿಶೇಷ.

ಅಭಿಮನ್ಯು ಹೊಸ ಪೋಸ್ಟರ್
ಜನವರಿ 22 ರಂದು ನಿಖಿಲ್ ಕುಮಾರ್ ಅವರ 28ನೇ ಹುಟ್ಟುಹಬ್ಬ ಸಂಭ್ರಮ. ಈ ವಿಶೇಷವಾಗಿ 'ಕುರುಕ್ಷೇತ್ರ' ಚಿತ್ರತಂಡ ಅಭಿಮನ್ಯವಿನ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದಕ್ಕು ಮುಂಚೆ ಅಭಿಮನ್ಯವಿನ ಸಾಹಸ ದೃಶ್ಯಗಳ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗೊಂದು ರೊಮ್ಯಾಂಟಿಕ್ ಪೋಸ್ಟರ್ ಅನಾವರಣಗೊಳಿಸಿದೆ.

20 ಲಕ್ಷ ದಾಟಿದ 'ಕುರುಕ್ಷೇತ್ರ' ಟೀಸರ್
'ಕುರುಕ್ಷೇತ್ರ' ಚಿತ್ರದ ಮೊದಲ ಟ್ರೈಲರ್ ಯೂಟ್ಯೂಬ್ ನಲ್ಲಿ 20 ಲಕ್ಷ ವೀಕ್ಷಕರನ್ನ ಹೊಂದಿದೆ. ಅಭಿಮನ್ಯು ಟೀಸರ್ 32 ಲಕ್ಷ ವೀಕ್ಷಕರನ್ನ ಹೊಂದಿದೆ.


Click it and Unblock the Notifications











