ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ
ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ದರ್ಶನ್ ಮತ್ತು ನಿಖಿಲ್ ಅವರ ಎರಡು ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಈಗ ಮೂರನೇ ಟೀಸರ್ ಬಂದಿದ್ದು, ಬಹುತೇಕ ಎಲ್ಲ ಪಾತ್ರಗಳ ಅನಾವರಣ ಆಗಿದೆ.
ಇಷ್ಟು ದಿನ ದುರ್ಯೋಧನ ದರ್ಶನ್ ಮತ್ತು ಅಭಿಮನ್ಯು ನಿಖಿಲ್ ಪಾತ್ರಗಳಷ್ಟೇ ಅಧಿಕೃತವಾಗಿ ಅನಾವರಣವಾಗಿತ್ತು. ಈಗ ಭೀಷ್ಮ, ಕರ್ಣ, ಅರ್ಜುನ, ಧರ್ಮರಾಯ, ಕುಂತಿ, ದ್ರೌಪದಿ, ಕೃಷ್ಣ, ಶಕುನಿ ಪಾತ್ರಗಳ ದರ್ಶನವಾಗಿದೆ.
ದುರ್ಯೋಧನನ ಇನ್ನೊಂದು ಝಲಕ್ ಈ ಟೀಸರ್ ನಲ್ಲಿ ಸಿಕ್ಕಿದೆ. ಅರ್ಜುನನಿಗೆ (ಸೋನು ಸೂದ್) ಸಾರಥಿಯಾಗಿ ಕೃಷ್ಣ (ರವಿಚಂದ್ರನ್), ರಣರಂಗದಲ್ಲಿ ಕರ್ಣ (ಅರ್ಜುನ್ ಸರ್ಜಾ) ಹಾಗೂ ಭೀಷ್ಮ (ಅಂಬರೀಶ್) ಅವರ ಗೆಟಪ್ ಬಹಿರಂಗವಾಗಿದೆ.
ಇವರ ಜೊತೆಯಲ್ಲಿ ಶಕುನಿ (ರವಿಶಂಕರ್) ದ್ರೌಪದಿ (ಸ್ನೇಹ), ಕುಂತಿ (ಭಾರತಿ ವಿಷ್ಣುವರ್ಧನ್), ಧರ್ಮರಾಯ (ಶಶಿಕುಮಾರ್) ಲುಕ್ ಕೂಡ ಅನಾವರಣವಾಗಿದೆ.

ಮುನಿರತ್ನ ನಿರ್ಮಿಸಿ, ನಾಗಣ್ಣ ನಿರ್ದೇಶನ ಮಾಡಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.


Click it and Unblock the Notifications











