twitter
    For Quick Alerts
    ALLOW NOTIFICATIONS  
    For Daily Alerts

    ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ

    |

    ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ದರ್ಶನ್ ಮತ್ತು ನಿಖಿಲ್ ಅವರ ಎರಡು ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಈಗ ಮೂರನೇ ಟೀಸರ್ ಬಂದಿದ್ದು, ಬಹುತೇಕ ಎಲ್ಲ ಪಾತ್ರಗಳ ಅನಾವರಣ ಆಗಿದೆ.

    ಇಷ್ಟು ದಿನ ದುರ್ಯೋಧನ ದರ್ಶನ್ ಮತ್ತು ಅಭಿಮನ್ಯು ನಿಖಿಲ್ ಪಾತ್ರಗಳಷ್ಟೇ ಅಧಿಕೃತವಾಗಿ ಅನಾವರಣವಾಗಿತ್ತು. ಈಗ ಭೀಷ್ಮ, ಕರ್ಣ, ಅರ್ಜುನ, ಧರ್ಮರಾಯ, ಕುಂತಿ, ದ್ರೌಪದಿ, ಕೃ‍ಷ್ಣ, ಶಕುನಿ ಪಾತ್ರಗಳ ದರ್ಶನವಾಗಿದೆ.

    'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು? 'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?

    ದುರ್ಯೋಧನನ ಇನ್ನೊಂದು ಝಲಕ್ ಈ ಟೀಸರ್ ನಲ್ಲಿ ಸಿಕ್ಕಿದೆ. ಅರ್ಜುನನಿಗೆ (ಸೋನು ಸೂದ್) ಸಾರಥಿಯಾಗಿ ಕೃ‍ಷ್ಣ (ರವಿಚಂದ್ರನ್), ರಣರಂಗದಲ್ಲಿ ಕರ್ಣ (ಅರ್ಜುನ್ ಸರ್ಜಾ) ಹಾಗೂ ಭೀಷ್ಮ (ಅಂಬರೀಶ್) ಅವರ ಗೆಟಪ್ ಬಹಿರಂಗವಾಗಿದೆ.

    ಇವರ ಜೊತೆಯಲ್ಲಿ ಶಕುನಿ (ರವಿಶಂಕರ್) ದ್ರೌಪದಿ (ಸ್ನೇಹ), ಕುಂತಿ (ಭಾರತಿ ವಿಷ್ಣುವರ್ಧನ್), ಧರ್ಮರಾಯ (ಶಶಿಕುಮಾರ್) ಲುಕ್ ಕೂಡ ಅನಾವರಣವಾಗಿದೆ.

    Kuruskhetra new teaser release

    'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ? 'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?

    ಮುನಿರತ್ನ ನಿರ್ಮಿಸಿ, ನಾಗಣ್ಣ ನಿರ್ದೇಶನ ಮಾಡಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.

    English summary
    Muniratna Kurukshetra new teaser has released. Ambareesh, Darshan, Ravichandran, ArjunSarja, NikhilKumar are in the lead. directed by Naganna. produced by Muniratna.
    Monday, May 20, 2019, 20:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X