ಅರ್ಜುನ್ ಸರ್ಜಾ ಗೆ ಧೈರ್ಯ ತುಂಬಿದ ಸ್ನೇಹಿತೆ ನಟಿ ಖುಷ್ಬೂ

Recommended Video

Kushboo stands in favour of Arjunsarja #MeToo | Filmibeat kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪರವಾಗಿ ಕನ್ನಡದ ಹಿರಿಯ ನಟಿಯರು ನಿಂತಿದ್ದಾರೆ. ತಾರಾ, ಬಿ ಸರೋಜಾ ದೇವಿ, ಸುಧಾರಾಣಿ ಹಾಗೂ ಯುವನಟಿ ಹರ್ಷಿಕಾ ಪೂಣಚ್ಛ ಸೇರಿದಂತೆ ಹಲವರು ಸರ್ಜಾ ಪರವಾಗಿದ್ದಾರೆ.

ಇದೀಗ, ಬಹುಭಾಷಾ ನಟಿ ಖುಷ್ಬೂ ಅವರು ಸರ್ಜಾ ಕುಟುಂಬ ಹಾಗೂ ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ್ದಾರೆ. ಶ್ರುತಿ ಹರಿಹರನ್ ಅವರು ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದು, ಅರ್ಜುನ್ ಅವರ ವ್ಯಕ್ತಿತ್ವ ಸರಿಯಿಲ್ಲ, ನಟಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

ಆದ್ರೆ, ಅರ್ಜುನ್ ಸರ್ಜಾ ಅಂತಹ ವ್ಯಕ್ತಿಯಲ್ಲ. ಅವರು ಮಹಿಳೆಯರಿಗೆ ರಕ್ಷಕನಾಗಿ ಇರ್ತಾರೆ ಹೊರತು, ಮಹಿಳೆಯರಿಗೆ ಎಂದೂ ಕೆಟ್ಟದ್ದು ಬಯಸಲ್ಲ ಅಂತ ನಟಿ ಖುಷ್ಬೂ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ......

34 ವರ್ಷದಿಂದ ಸರ್ಜಾ ಗೊತ್ತು..

34 ವರ್ಷದಿಂದ ಸರ್ಜಾ ಗೊತ್ತು..

'ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಸುಮಾರು 34 ವರ್ಷಗಳಿಂದ ಅವರು ನನಗೆ ಗೊತ್ತು. ಸೌತ್ ಇಂಡಸ್ಟ್ರಿಯಲ್ಲಿ ನಾನು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಇದೇ ಅರ್ಜುನ್ ಸರ್ಜಾ ಸಿನಿಮಾದಲ್ಲಿ. ನನ್ನ ಚೊಚ್ಚಲ ಸಿನಿಮಾವನ್ನ ನಾನು ಅವರೊಂದಿಗೆ ಮಾಡಿದ್ದೇನೆ. ನನಗೆ ಆಗ 14 ವರ್ಷ, ಅವರಿಗೆ 21 ವಯಸ್ಸಾಗಿರಬಹುದು'

ಅರ್ಜುನ್ ಅಂತಹ ವ್ಯಕ್ತಿಯಲ್ಲ

ಅರ್ಜುನ್ ಅಂತಹ ವ್ಯಕ್ತಿಯಲ್ಲ

'1984ರಿಂದ ಇಲ್ಲಿಯವರೆಗೂ ಅರ್ಜುನ್ ನನಗೆ ಚೆನ್ನಾಗಿ ಪರಿಚಯ. ಆಗಿನಿಂದ ಈಗನಿವರೆಗೂ ಒಂದೇ ಒಂದು ದೂರು ಅವರ ಮೇಲೆ ಬಂದಿಲ್ಲ. ನನಗೆ ಆ ರೀತಿಯ ಅವಕಾಶವೇ ಕೊಟ್ಟಿಲ್ಲ. ನನ್ನೊಂದಿಗೆ ಯಾವತ್ತು ಅಸಭ್ಯವಾಗಿ ನಡೆದುಕೊಂಡಿಲ್ಲ. ಅವರು ಅಂತಹ ಸ್ವಭಾವದವರಲ್ಲ'

ಅರ್ಜುನ್ ಮಹಿಳಾ ರಕ್ಷಕ

ಅರ್ಜುನ್ ಮಹಿಳಾ ರಕ್ಷಕ

'ಅರ್ಜುನ್ ನನ್ನ ಜೊತೆಯಲ್ಲಿದ್ದಾರೆ ಅಂದ್ರೆ ನನಗೆ ಯಾವುದೇ ಭಯವಿಲ್ಲ. ಯಾಕಂದ್ರೆ, ಸಾವಿರ ಜನರ ಮಧ್ಯೆ ನಾನಿದ್ದರೂ ನನ್ನ ರಕ್ಷಣೆಗೆ ಅರ್ಜುನ್ ಇರ್ತಾರೆ ಎಂಬ ಧೈರ್ಯ. ಅವರನ್ನ ನನ್ನ ರಕ್ಷಿಸುತ್ತಾರೆ ಎಂಬ ನಂಬಿಕೆ. ಅದನ್ನ ಅವರು ಮಾಡಿ ಕೂಡ ತೋರಿಸಿದ್ದಾರೆ. ನಾನು ಅವರ ಜೊತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರ ಜೊತೆ ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲಾ ಕಡೆಯೂ ಮಹಿಳೆಯರನ್ನ ರಕ್ಷಿಸುತ್ತಾ ಬಂದಿದ್ದಾರೆ'

ನೀವು ಎಲ್ಲರಿಗೂ ನೋವು ನೀಡುತ್ತಿದ್ದೀರಾ

ನೀವು ಎಲ್ಲರಿಗೂ ನೋವು ನೀಡುತ್ತಿದ್ದೀರಾ

'ಆದ್ರೀಗ, ಕೇಳಿ ಬಂದಿರುವ ಆರೋಪ ನನಗೆ ಅಚ್ಚರಿ ನೀಡಿದೆ. ಈಗ ಆ ನಟಿ ಮಾಡುತ್ತಿರುವ ಆರೋಪ ಕೇವಲ ಒಬ್ಬ ವ್ಯಕ್ತಿಯನ್ನಲ್ಲ. ಅವರ ಕುಟುಂಬವನ್ನ ನೋವಿಗೆ ತಳ್ಳಿದ್ದಾರೆ. ನಮ್ಮ ತಂದೆ ಗ್ರೇಟ್ ನಂಬಿರುವ ಇಬ್ಬರು ಮಕ್ಕಳ ನಂಬಿಕೆಯನ್ನ ಮೋಸ ಮಾಡ್ತಿದ್ದೀರಾ. ಇದು ನನ್ನನ್ನೇ ಅವಮಾನ ಮಾಡಿರುವಷ್ಟು ಬೇಸರ ತಂದಿದೆ'

ಸರ್ಜಾ ವ್ಯಕ್ತಿತ್ವಕ್ಕೆ ನಾನೇ ಗ್ಯಾರೆಂಟಿ

ಸರ್ಜಾ ವ್ಯಕ್ತಿತ್ವಕ್ಕೆ ನಾನೇ ಗ್ಯಾರೆಂಟಿ

'ಅರ್ಜುನ್ ಸರ್ಜಾ ಅವರು ಯಾವತ್ತು ಹಾಗೆ ಮಾಡುವುದಿಲ್ಲ. ಅದಕ್ಕೆ ನಾನೇ ಗ್ಯಾರೆಂಟಿ. ಅವರಿಗೂ ಮಾತನಾಡಲು ಅವಕಾಶ ಕೊಡಿ, ಯಾರನ್ನ ನೋಯಿಸಿದೇ ಇರುವ ವ್ಯಕ್ತಿಗೆ ನೋವು ನೀಡಬೇಡಿ. ಅವರೊಬ್ಬ ವೃತ್ತಿಪರ ವ್ಯಕ್ತಿ, ವೃತ್ತಿಪರ ನಟ, ಒಳ್ಳೆಯ ನಿರ್ದೇಶಕ ಮತ್ತು ನನ್ನ ಆತ್ಮೀಯ ಸ್ನೇಹಿತ'

ನಾನು ನಿನ್ನ ಜೊತೆ ಇದ್ದೇನೆ

'ಇದು ನನಗೆ ಅವಮಾನ ಮಾಡಿದಂತೆ ಭಾಸವಾಗುತ್ತಿದೆ. ಇಂತಹ ಸಮಯದಲ್ಲಿ ನಾನು ನಿನ್ನೊಂದಿಗೆ ಇಲ್ಲ ಎಂಬ ನೋವು ಕಾಡುತ್ತಿದೆ. ಇದು ನಮ್ಮ ಇಷ್ಟು ವರ್ಷದ ಸ್ನೇಹಕ್ಕೆ ಆಗುತ್ತಿರುವ ಅಪಮಾನ. ನಾನು ದೂರದಲ್ಲಿದ್ದೇನೆ. ಆದ್ರೂ, ನಾವು ಒಂದೇ ಕುಟುಂಬ, ಒಂದೇ ಮನಸ್ಸು, ನಾನು ಇಲ್ಲಿಂದನೇ ನಿನಗೆ ಸಪೋರ್ಟ್ ಮಾಡ್ತೀನಿ. ನಾನು ನಿನ್ನ ಜೊತೆ ಇದ್ದೀನಿ'' ಎಂದು ನಟಿ ಖುಷ್ಬೂ ವಿಡಿಯೋ ಮಾಡಿದ್ದಾರೆ.

More from Filmibeat

English summary
Actress Sruthi Hariharan accused actor Arjun Sarja of sexually harassing her on the sets of a film in 2016. now, actress kushboo stands in favour of arjun sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X