ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟಿ ಖುಷ್ಬೂ; ಈಗ ಹೇಗಿದೆ ಪರಿಸ್ಥಿತಿ?

ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊವನ್ನು ಸ್ವತಃ ಖುಷ್ಬೂ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನಾರೋಗ್ಯಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.
"ಚೇತರಿಕೆಯ ಹಾದಿಯಲ್ಲಿ! ನನ್ನ ಬೆನ್ನು ಮೂಳೆಗೆ (ಬಾಲ ಮೂಳೆ) ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ನಡೆದಿದೆ ಹಾಗೂ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಭಾವಿಸುತ್ತೇವೆ" ಎಂದು ಬರೆದುಕೊಳ್ಳುವ ಮೂಲಕ ಖುಷ್ಬು ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಖುಷ್ಬು ಅವರ ಈ ಪೋಸ್ಟ್‌ಗೆ ಸಿನಿಮಾ ತಾರೆಯರು, ರಾಜಕೀಯ ಕ್ಷೇತ್ರದ ನಾಯಕರು ಹಾಗೂ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಆದಷ್ಟು ಬೇಗ ಖುಷ್ಬು ಅವರು ಚೇತರಿಸಿಕೊಳ್ಳಲಿ ಎಂದು ಕಾಮೆಂಟ್ ಮಾಡಿದ್ದಾರೆ.
English summary
Kushbu Sundare underwent coccyxbone operation and recovering from it


Click it and Unblock the Notifications