For Quick Alerts
  ALLOW NOTIFICATIONS  
  For Daily Alerts

  ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಸಿಹಿಕಹಿ ಚಂದ್ರು ಪುತ್ರಿ

  By Naveen
  |

  ಇದು ಪಿಯುಸಿ ಪರೀಕ್ಷೆಯ ಪಲಿತಾಂಶ ಬಂದಿದೆ. ಇಷ್ಟು ದಿನ ರಿಸಲ್ಟ್ ಏನಾಗುತ್ತದೆಯೋ ಎನ್ನುವ ವಿದ್ಯಾರ್ಥಿಗಳ ಕುತೂಹಲಕ್ಕೆ ಅಂತು ತೆರೆ ಬಿದ್ದಿದೆ. ಇನ್ನೂ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದವರ ಪಟ್ಟಿಯಲ್ಲಿ ನಟ ಸಿಹಿ ಕಹಿ ಚಂದ್ರು ಅವರ ಎರಡನೇ ಪುತ್ರಿ ಖುಷಿ ಚಂದ್ರಶೇಖರ್ ಕೂಡ ಇದ್ದು, ಈಗ ಅವರು ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.

  ಸಿಹಿ ಕಹಿ ಚಂದ್ರು ಅವರ ಮೊದಲ ಪುತ್ರಿ ಹಿತಾ ಚಂದ್ರಶೇಖರ್ ಈಗಾಗಲೇ ಸಿನಿಮಾ ಮಾಡಿರುವುದರಿಂದ ಅನೇಕರಿಗೆ ಪರಿಚಯ ಇದ್ದಾರೆ. ಆದರೆ ಖುಷಿ ಚಂದ್ರಶೇಖರ್ ಕ್ಯಾಮರಾ ಮುಂದೆ ಬಂದಿರುವುದು ತೀರಾ ಕಡಿಮೆ. ಅಂದಹಾಗೆ, ಬೆಂಗಳೂರಿನ ಕ್ರೈಸ್ತ್ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ (ಎಚ್ ಹಿ ಪಿ ಸಿ) ಓದುತ್ತಿದ್ದ ಖುಷಿ ಈಗ ಶೇಖಡ 88 ಅಂಕ ತೆಗೆದುಕೊಂಡಿದ್ದಾರೆ.

  ಇಟ್ಟಿಗೆ ಕಾರ್ಖಾನೆ ಕೂಲಿ ಕಾರ್ಮಿಕನ ಮಗಳು ರಾಜ್ಯಕ್ಕೇ ಫಸ್ಟ್‌

  ಖುಷಿ ಅವರ ಪಲಿತಾಂಶ ನೋಡಿ ತಂದೆ, ತಾಯಿ, ಅಕ್ಕ ಎಲ್ಲರೂ ಖುಷಿ ಆಗಿದ್ದಾರೆ. ಸೈಕಾಲಜಿ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಖುಷಿ ಮುಂದೆ ಚೈಲ್ಡ್ ಸೈಕಾಲಜಿ ಮಾಡುವ ಪ್ಲಾನ್ ನಲ್ಲಿ ಇದ್ದಾರೆ. ಅಪ್ಪ, ಅಮ್ಮ ಇಬ್ಬರು ಖುಷಿಗೆ ಇಷ್ಟೆ ಅಂಕ ತೆಗೆಯಬೇಕು ಎಂಬ ಒತ್ತಡ ನೀಡುತ್ತಿರಲಿಲ್ಲವಂತೆ. ಚೆನ್ನಾಗಿ ಓದು, ಓದಿದನ್ನು ಅರ್ಥ ಮಾಡಿಕೋ ಎಂದು ಹೇಳುತ್ತಿದ್ದರಂತೆ. ಇದರಿಂದ ಕೂಲ್ ಆಗಿ ಓದಿದ ಖುಷಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಇನ್ನು ಚೆನ್ನಾಗಿ ಓದುತ್ತಿರುವ ಖುಷಿ ಚಂದ್ರಶೇಖರ್ ಸದ್ಯಕ್ಕೆ ಚಿತ್ರರಂಗಕ್ಕೆ ಬರುವ ಯಾವುದೇ ಆಲೋಚನೆ ಹೊಂದಿಲ್ಲ.

  English summary
  Kannada actor Sihi Kahi Chandru daughter Kushi Chandrashekar passed with 88 percentage in second PUC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X