ಜೂನ್ 17ಕ್ಕೆ ದುನಿಯಾ ವಿಜಿ ಪುತ್ರನ ತಾಕತ್ ಪ್ರದರ್ಶನ
Recommended Video

ನಟ ದುನಿಯಾ ವಿಜಯ್ ಪುತ್ರ ಸಿನಿಮಾರಂಗಕ್ಕೆ ಕಾಲಿಡುತ್ತಿರುವುದು ಗೊತ್ತಿರುವ ವಿಚಾರ. ಸಣ್ಣ ವಯಸ್ಸಿನಲ್ಲೇ ಅಪ್ಪನಂತೆ ದೇಹವನ್ನು ದಂಡಿಸುತ್ತಿರುವ ಸಾಮ್ರಾಟ್ ಈಗ ಫಿಟ್ ಅಂಡ್ ಫೈನ್ ಆಗಿದ್ದಾರೆ.
ಜೂನ್ 17 ರಂದು ಸಾಮ್ರಾಟ್ ಹುಟ್ಟುಹಬ್ಬ, ಇದೇ ಸಂದರ್ಭದಲ್ಲಿ 'ಕುಸ್ತಿ' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ಸ್ಯಾಂಡಲ್ ವುಡ್ ನ ಕರಿಚಿರತೆ. ಫಸ್ಟ್ ಲುಕ್ ಟೀಸರ್ ನಲ್ಲಿ ಸಾಮ್ರಾಟ್ ಇಷ್ಟು ದಿನಗಳು ಕಲಿತಿರುವ ಸಾಹಸಗಳ ಝಲಕ್ ಅನ್ನು ಸೆರೆ ಹಿಡಿದು ಅಭಿಮಾನಿಗಳಿಗೆ ನೀಡಲಿದ್ದಾರೆ.

ಶಾಲೆಯ ಬೇಸಿಗೆ ರಜೆಯಲ್ಲಿ ಮಜಾ ಮಾಡದೆ ಅಪ್ಪನ ಆಸೆಯಂತೆ ಪ್ರತಿ ನಿತ್ಯ ನಾಲ್ಕು ಗಂಟೆಗಳ ಕಾಲ ವ್ಯಾಯಾಮ, ವರ್ಕ್ ಔಟ್ ಅಂತಲೇ ಕಾಲ ಕಳೆದಿರುವ ಸಾಮ್ರಾಟ್ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳಲಿ ಎನ್ನುವುದು ಅಪ್ಪ ದುನಿಯಾ ವಿಜಿಯ ಆಸೆ.

'ಕುಸ್ತಿ' ಸಿನಿಮಾವನ್ನ ಚೂರಿ ಕಟ್ಟೆ ಖ್ಯಾತಿಯ ರಘು ಶಿವಮೊಗ್ಗ ನಿರ್ದೇಶನ ಮಾಡುತ್ತಿದ್ದಾರೆ. ಕುಸ್ತಿ ವಿಜಯ್ ಹೋಂ ಬ್ಯಾನರ್ ದುನಿಯಾ ಟಾಕೀಸ್‌ನಲ್ಲಿ ನಿರ್ಮಾಣವಾಗ್ತಿದೆ. ಟೀಸರ್ ಬಿಡುಗಡೆಯ ದಿನವೇ ಸಾಮ್ರಾಟ್ ತಯಾರಿ ಹಾಗೂ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ ದನಿಯಾ ವಿಜಯ್.


Click it and Unblock the Notifications











