ದರ್ಶನ್ ಹುಟ್ಟುಹಬ್ಬಕ್ಕೆ D58 ಟೈಟಲ್ ರಿವೀಲ್? ಕೆವಿಎನ್ ಸಂಸ್ಥೆ ಹೇಳಿದ್ದಿಷ್ಟು

'ಕಾಟೇರ' ಸಿನಿಮಾ 25 ದಿನ ಪೂರೈಸಿ ಗೆಲುವಿನ ಓಟ ಮುಂದುವರೆಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಅಭಿಮಾನಿಗಳ ಸಂಭ್ರಮ ಡಬಲ್ ಆಗಲಿದೆ. ಇನ್ನು ಸಂಭ್ರಮಕ್ಕೆ 'ಡೆವಿಲ್' ಟೀಂ ಸರ್‌ಪ್ರೈಸ್ ಗಿಫ್ಟ್ ನೀಡಲಿದೆ. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿದೆ.

ಫೆಬ್ರವರಿ 16ಕ್ಕೆ ದರ್ಶನ್ ನಟನೆಯ ಮುಂದಿನ ಸಿನಿಮಾಗಳ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ. ಇನ್ನು ಅದ್ಧೂರಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿರುವ ಡಿ ಬಾಸ್ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜೊತೆಗೆ ಈ ವರ್ಷವೂ ದರ್ಶನ್ ಹುಟ್ಟುಹಬ್ಬ ಆಚರಿಸಲಿದ್ದಾರೆ. ಆದರೆ ಕೇಕ್, ಬ್ಯಾನರ್, ಹಾರ ತರಬೇಡಿ, ಬದಲಿಗೆ ದಿನಪಿ ಪದಾರ್ಥ ತಂದು ಕೊಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ.

KVN Production clarification on D58 title reveal for Darshans birthday

'ಕಾಟೇರ' ಬಳಿಕ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಈಗಾಗಲೇ ಲುಕ್ ಟೆಸ್ಟ್ ಕೂಡ ನಡೆದಿದೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಕೂಡ ಘೋಷಣೆ ಆಗಿದೆ. ಜೋಗಿ ಪ್ರೇಮ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 'ಕರಿಯ' ಬಳಿಕ ಪ್ರೇಮ್ ಹಾಗೂ ದರ್ಶನ್ ಮತ್ತೆ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆ ಪ್ರೇಮ್ ಬಗ್ಗೆ ನಟ ದರ್ಶನ್ 'ಪುಡುಂಗು' ಎಂದು ಹೇಳಿದ್ದರು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇನ್ನು ಮುಂದೆ ದರ್ಶನ್ ಜೊತೆ ಸಿನಿಮಾ ಮಾಡುವ ಮಾತೇಯಿಲ್ಲ ಎಂದು ಪ್ರೇಮ್ ಹೇಳಿದ್ದರು. ಆದರೆ ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಆತ್ಮೀಯ ಸ್ನೇಹಿತರು. ಆಕೆಯ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಿ ಒಟ್ಟಿಗೆ ಸಿನಿಮಾ ಮಾಡುವಂತೆ ಮಾಡಿದ್ದಾರೆ ಎನ್ನಲಾಗಿತ್ತು. ಖಾಸಗಿ ಹೋಟೆಲ್‌ನಲ್ಲಿ ಕೆವಿಎನ್ ಸಂಸ್ಥೆ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸಿ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಕಳೆದ ವರ್ಷ ನಿರ್ಮಾಪಕ ವೆಂಕಟ್ ಕೋನಂಕಿ ಹುಟ್ಟುಹಬ್ಬದ ದಿನವೇ ಈ ಕ್ರೇಜಿ ಕಾಂಬಿನೇಷನ್ ಹೊಸ ಸಿನಿಮಾ ಘೋಷಣೆ ಆಗಿತ್ತು. ಇದು ದರ್ಶನ್ 58ನೇ ಸಿನಿಮಾ ಎನ್ನಲಾಗುತ್ತಿದೆ. ಈ ಬಾರಿ ಹುಟ್ಟುಹಬ್ಬಕ್ಕೆ D58 ಟೈಟಲ್ ರಿವೀಲ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಅಭಿಮಾನಿಗಳು ಕೂಡ ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆ ಬಳಿ ಸಿನಿಮಾ ಅಪ್‌ಡೇಟ್‌ ನೀಡುವಂತೆ ಮನವಿ ಮಾಡುತ್ತಿದ್ದಾರೆ.

KVN Production clarification on D58 title reveal for Darshans birthday

ದರ್ಶನ್ ಹುಟ್ಟಹಬ್ಬಕ್ಕೆ ಪ್ರೇಮ್ ಕಾಂಬಿನೇಷನ್ ಸಿನಿಮಾ ಟೈಟಲ್ ರಿವೀಲ ಆಗುತ್ತದೆ ಎನ್ನುವ ಊಹಾಪೋಹ ಅಷ್ಟೆ. ಸದ್ಯಕ್ಕೆ ಅಂತಹ ಯಾವುದೇ ಪ್ರಯತ್ನ ನಡೀತಿಲ್ಲ ಎಂದು ಕೆವಿಎನ್ ಸಂಸ್ಥೆಯ ಆಪ್ತ ಮೂಲಗಳು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿವೆ. ಸದ್ಯ ದರ್ಶನ್ ಸರ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಮ್ಮ ಸಿನಿಮಾ ಏನಿದ್ದರೂ ಮುಂದಿನ ವರ್ಷ ಶುರುವಾಗಬಹುದು. ಹಾಗಾಗಿ ಈ ವರ್ಷ ಯಾವುದೇ ಅಪ್‌ಡೇಟ್ ಇಲ್ಲ ಎಂದಿದ್ದಾರೆ.

ಒಟ್ನಲ್ಲಿ ಫೆಬ್ರವರಿ 16ಕ್ಕೆ D58 ಸರ್‌ಪ್ರೈಸ್‌ಗಾಗಿ ಕಾಯ್ತಿದ್ದವರಿಗೆ ಇದರಿಂದ ಬೇಸರವಾಗಿದೆ. ಸದ್ಯ ಪ್ರೇಮ್ 'KD' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರವನ್ನು ಸಹ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಧ್ರುವ ಸರ್ಜಾ ಹೀರೊ ಆಗಿ ನಟಿಸುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ನೋರಾ ಫತೇಹಿ ಸೇರಿದಂತೆ ಹಲವರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷವೇ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Double treat for the fans on Kaatera actor Drashan's birthday?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X