'KVN ಪ್ರೊಡಕ್ಷನ್ಸ್' ಹೆಸರಿನಲ್ಲೇ ಸಮಸ್ಯೆ ಇದೆ.. ಅದಕ್ಕೆ ಇಷ್ಟೆಲ್ಲಾ ಹಿನ್ನಡೆ; ಖ್ಯಾತ ಜ್ಯೋತಿಷಿ ವಿಶ್ಲೇಷಣೆ
ಅದ್ಯಾಕೋ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಟೈಮೇ ಸರಿಯಿಲ್ಲ ಕಣ್ರೀ. ಈ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ 'ಜನ ನಾಯಗನ್' ಸಿನಿಮಾ ಯುಗಾದಿ ಬಂದ್ರು ಬಿಡುಗಡೆ ಆಗುವ ಸುಳಿವು ಸಿಕ್ತಿಲ್ಲ. 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಈಗ 'ಕೆಡಿ' ಚಿತ್ರದ ಸಾಂಗ್ ವಿವಾದಕ್ಕೆ ಕಾರಣವಾಗಿದೆ.
ಜೋಗಿ ಪ್ರೇಮ್ ಹೇಳುವಂತೆ 'ಜನ ನಾಯಗನ್', 'ಟಾಕ್ಸಿಕ್' ಹಾಗೂ 'ಕೆಡಿ' ಚಿತ್ರಗಳಿಗಾಗಿ ಕೆವಿಎನ್ ಸಂಸ್ಥೆ ಹೆಚ್ಚು ಕಮ್ಮಿ 1000 ಕೋಟಿ ರೂ. ಬಂಡವಾಳ ಹೂಡಿದೆ. ಇದು ಸಾಲದು ಎನ್ನುವಂತೆ ತೆಲುಗು, ಮಲಯಾಳಂ ಹಾಗೂ ತೆಲುಗಿನಲ್ಲಿ 3 ದೊಡ್ಡ ಸಿನಿಮಾಗಳ ನಿರ್ಮಾಣವಾಗುತ್ತಿದೆ. ಪದೇ ಪದೆ ಕೆವಿಎನ್ ಸಂಸ್ಥೆ ಹಿನ್ನಡೆ ಆಗುತ್ತಿದೆ. ಸಂಸ್ಥೆಯ ಹೆಸರಿನಲ್ಲೇ ಸಮಸ್ಯೆ ಇದೆ ಎಂದು ಖ್ಯಾತ ಜ್ಯೋತಿಷಿ ಡಾ. ಮುಗೂರು ಮಧುದೀಕ್ಷಿತ್ ಹೇಳಿದ್ದಾರೆ. ಅದಕ್ಕೆ ಪದೆ ಪದೇ ಸಮಸ್ಯೆ ಎದುರಿಸುವಂತಾಗಿದೆ ಎಂದಿದ್ದಾರೆ.

ಈ ವರ್ಷ ನಟ ಯಶ್ ಅವರಿಗೆ ಪಾಸಿಟಿವ್ ಆಗಿಲ್ಲ ಎಂದು ಮಧುದೀಕ್ಷಿತ್ ಹೇಳಿದ್ದರು. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳು ಅಂದುಕೊಂಡ ಸಮಯಕ್ಕೆ ಬಿಡುಗಡೆ ಆಗುವುದು ಕಷ್ಟ. ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ಭವಿಷ್ಯ ನುಡಿದಿದ್ದರು. ಮಾರ್ಚ್ 19ಕ್ಕೆ ತೆರೆಗೆ ಬರಬೇಕಿದ್ದ 'ಟಾಕ್ಸಿಕ್' ಸಿನಿಮಾ ರಿಲೀಸ್ 3 ತಿಂಗಳು ಮುಂದೂಡಲಾಗಿದೆ. ಇದು ಸಿನಿರಸಿಕರಿಗೂ ಬೇಸರ ತಂದಿದೆ. ಕನ್ನಡ ಹಾಗೂ ಕನ್ನಡ ಸಿನಿಮಾ ಅಂದರೆ ನನಗೆ ಅಭಿಮಾನ. ಆದರೂ ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲ ವಿಚಾರಗಳನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ. 'ಆತ್ಮೀಯ ಕನ್ನಡಿಗ' ಯೂಟ್ಯೂಬ್ ಚಾನಲ್‌ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಧುದೀಕ್ಷಿತ್ ಮಾತನಾಡಿ "KVN ಅಂದ್ರೆ 4 ಸಂಖ್ಯೆ ಬರುತ್ತದೆ. ಇದು ರಾಹುವಿನ ಸಂಖ್ಯೆ.. ದೊಡ್ಡಮಟ್ಟಕ್ಕೆ ಯೋಚನೆ ಮಾಡ್ತಾರೆ. 'ಜನ ನಾಯಗನ್', 'ಟಾಕ್ಸಿಕ್' ಹಾಗೂ 'ಕೆಡಿ' ಹೀಗೆ ದೊಡ್ಡ ಸ್ಟಾರ್ಸ್ ಇರುವ ದೊಡ್ಡ ಪ್ರಾಜೆಕ್ಟ್ ಮಾಡ್ತಿದ್ದಾರೆ. ಆದರೆ KVN ಸಂಸ್ಥೆ ಈ ವರ್ಷ ಪಾಸಿಟಿವ್ ಆಗಿ ಇಲ್ಲ. ಈ ವರ್ಷ ರಾಹು ಗೋಚಾರ ಸಂಚಾರ ಅಷ್ಟು ಒಳ್ಳೆದಲ್ಲ. KVN ಎನ್ನುವುದೇ ನೆಗೆಟಿವ್ ವೈಬ್ರೇಷನ್ ಉಂಟು ಮಾಡ್ತಿದೆ" ಎಂದಿದ್ದಾರೆ.
'ಕೆಡಿ' ಚಿತ್ರದ 'ಸರ್ಸು ಸರ್ಸು' ಎನ್ನುವ ಹಾಡು ಬಿಡುಗಡೆಯಾಗಿದೆ. ಅದಕ್ಕೂ ನೆಗೆಟಿವ್ ಹೆಚ್ಚಾಗಿದೆ. ಹೀಗೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತೆ.. ರಾಹು ನೆಗೆಟಿವ್ ಕಮ್ಮಿ ಮಾಡ್ಕೊಬೇಕು.. ಚಂಡಿಕಾ ಹೋಮ ಅಥವಾ ದುರ್ಗಾ ಹೋಮ ಮಾಡಿಸಬೇಕು. ರಾಹುಕ್ಷೇತ್ರ ಅಥವಾ ಕಾಳಹಸ್ತಿ ಕ್ಷೇತ್ರದ ದರ್ಶನದಿಂದ ಈ ನೆಗೆಟಿವಿಟಿ ಕಮ್ಮಿ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. "KVN' ಅಂದ್ರೆ 4 ಬರುತ್ತೆ.. ಅದು ರಾಹು ಸಂಖ್ಯೆ.. ವಾಯುತತ್ವ.. ಅದೇ KVN ಪ್ರೊಡಕ್ಷನ್ಸ್ ಅಂದ್ರೆ 9 ಸಂಖ್ಯೆ ಬರುತ್ತೆ.. ಬೆಂಕಿ ಹಾಗೂ ಗಾಳಿ ಕಾಂಬಿನೇಷನ್.. ಹಾಗಾಗಿ ಕೂಲ್ ಆಗಿ ದೊಡ್ಡ ಸಿನಿಮಾಗಳು ಆಗಲ್ಲ.. ಗೋಚಾರ ಕೂಡ ಅಷ್ಟು ಪಾಸಿಟಿವ್ ಆಗಿ ಇಲ್ಲ. ಅದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ" ಎಂದು ಜ್ಯೋತಿಸಿ ಮಧುದೀಕ್ಷಿತ್ ವಿವರಿಸಿದ್ದಾರೆ.
5 ವರ್ಷಗಳ ಹಿಂದೆ 'ಸಖತ್' ಎಂಬ ಚಿತ್ರವನ್ನು KVN ಸಂಸ್ಥೆ ನಿರ್ಮಾಣ ಮಾಡಿತ್ತು. ಆ ಮೂಲಕ ಚಿತ್ರರಂಗ ಪ್ರವೇಶಿಸಿತ್ತು. ಬಳಿಕ 'ಬೈಟು ಲವ್' ಚಿತ್ರ ತೆರೆಗೆ ತಂದಿತ್ತು. ಇನ್ನು ಒಂದಷ್ಟು ಸಿನಿಮಾಗಳನ್ನು ಕರ್ನಾಟಕದಲ್ಲಿ ಈ ಸಂಸ್ಥೆ ವಿತರಣೆ ಮಾಡಿ ಗೆದ್ದಿದೆ. ಇದೀಗ ಅಕ್ಷಯ್ ಕುಮಾರ್ ಹಾಗೂ ಚಿರಂಜೀವಿ ಜೊತೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications










