twitter
    For Quick Alerts
    ALLOW NOTIFICATIONS  
    For Daily Alerts

    Boycott RRR: ಕನ್ನಡಿಗರ ಧ್ವನಿಗೆ ಬೆದರಿದ "RRR': ಕನ್ನಡ ರಿಲೀಸ್ ಆಗುತ್ತಾ? ಇಲ್ವಾ?

    |

    ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಚಿತ್ರ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ದಿನ ಕಳೆದರೆ 'ಆರ್‌ಆರ್‌ಆರ್' ಚಿತ್ರಮಂದಿರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್ 25ಕ್ಕೆ "ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುತ್ತಿದೆ. ಆದರೆ ಕನ್ನಡ ಶೋಗಳಿಗೆ ಕರ್ನಾಟಕದಲ್ಲಿ ಆದ್ಯತೆ ನೀಡಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗರು "ಆರ್‌ಆರ್‌ಆರ್' ಚಿತ್ರದ ವಿರುದ್ಧ ತಿರುಗಿ ಬಿದಿದ್ದಾರೆ.

    Recommended Video

    ಕರ್ನಾಟಕದಲ್ಲಿ RRR ಬಹಿಷ್ಕಾರ, ರೊಚ್ಚಿಗೆದ್ದ ಕನ್ನಡಿಗರು

    ಪ್ಯಾನ್ ಇಂಡಿಯಾ ಹೆಸರಲ್ಲಿ, ಸಿನಿಮಾ ತಂಡ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಬಾಯ್‌ಕಾಟ್ "ಆರ್‌ಆರ್‌ಆರ್' ಎಂದು ಅಭಿಯಾನ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ "ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುವುದು ಬೇಡ ಎಂದು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಜೊತೆಗೆ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ.

    Boycott RRR: ಕರ್ನಾಟಕದಲ್ಲಿ 'RRR' ಬಹಿಷ್ಕಾರ, ಚಿತ್ರತಂಡದ ನಡೆಗೆ ಭಾರಿ ಖಂಡನೆ! Boycott RRR: ಕರ್ನಾಟಕದಲ್ಲಿ 'RRR' ಬಹಿಷ್ಕಾರ, ಚಿತ್ರತಂಡದ ನಡೆಗೆ ಭಾರಿ ಖಂಡನೆ!

    "ಬಾಯ್‌ಕಾಟ್ ಆರ್‌ಆರ್‌ಆರ್' ಅಭಿಯಾನ ಕರ್ನಾಟಕದಲ್ಲಿ ಜೋರಾಗುತ್ತಿದ್ದ ಹಾಗೆ ಚಿತ್ರತಂಡ ಎಚ್ಚೆತ್ತು ಕೊಂಡಿದೆ. ಈ ಬಗ್ಗೆ RRR ಕನ್ನಡ ವಿತರಕರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ "ಆರ್‌ಆರ್‌ಆರ್' ಚಿತ್ರವನ್ನು ವಿತರಣೆ ಮಾಡುತ್ತಿರುವ "ಕೆವಿಎನ್ ಪ್ರೊಡಕ್ಷನ್' ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಧಿಕೃತ ಪೋಸ್ಟ್ ಹಾಕಿದೆ.

    ಕನ್ನಡಿಗರ ಧ್ವನಿಗೆ ಮಣಿದ 'RRR'!

    ಕನ್ನಡಿಗರ ಧ್ವನಿಗೆ ಮಣಿದ 'RRR'!

    "ಆರ್‌ಆರ್‌ಆರ್' ಸಿನಿಮಾ ರಿಲೀಸ್ ಬೆನ್ನಲ್ಲೇ ಹಲವರು ಈ ಚಿತ್ರವನ್ನು ಕನ್ನಡ ಅವತರಣಿಕೆಯಲ್ಲಿ ನೋಡಬೇಕು ಎಂದು ಬಯಸುತ್ತಿದ್ದಾರೆ. ಆದರೆ ಹೆಚ್ಚಾಗಿ ಕನ್ನಡ ಅವತರಣಿಕೆಗೆ ಅವಕಾಶ ಇಲ್ಲ. ಚಿತ್ರಮಂದಿಗಳಲ್ಲಿ ಕನ್ನಡಕ್ಕೆ ಡಬ್ ಆಗಿರುವ "ಆರ್‌ಆರ್‌ಆರ್' ಚಿತ್ರ ಸಿಗುತ್ತಿಲ್ಲ. ಅದೇ ಕಾರಣಕ್ಕೆ ಕನ್ನಡಿಗರು ಚಿತ್ರತಂಡದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಗ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದೆ "ಆರ್‌ಆರ್‌ಆರ್' ಚಿತ್ರತಂಡ. ಹಾಗಾಗಿ ಕನ್ನಡದ ಶೋಗಳನ್ನು ಮತ್ತಷ್ಟು ಹೆಚ್ಚಿಸಲು ಭರವಸೆ ನೀಡಿದೆ.

    RRR ತಂಡದಿಂದ ಕನ್ನಡಿಗರಿಗೆ ಭರವಸೆ!

    ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯಲ್ಲಿ "ಆರ್‌ಆರ್‌ಆರ್' ಚಿತ್ರದ ಪ್ರದರ್ಶನಗಳನ್ನು ಹೆಚ್ಚು ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪೋಸ್ಟ್ ಹಾಕಲಾಗಿದೆ. ""ನಿಮಗೆ ತಿಳಿದಿರುವಂತೆ "ಆರ್‌ಆರ್‌ಆರ್' ಮಾರ್ಚ್ 25ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. "ಆರ್‌ಆರ್‌ಆರ್' ಸಿನಿಮಾದ ನಾಯಕ ನಟರಾದ ರಾಮ್‌ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕನ್ನಡ ಕಲಿಯಲು ವಿಶೇಷ ಪ್ರಯತ್ನ ಮಾಡಿ ಡಬ್ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಈ ಮಹೋನ್ನತ ದೃಶ್ಯ ಕಾವ್ಯವನ್ನು ನೋಡಲು ಇಷ್ಟ ಪಡುತ್ತೀರಿ ಎಂದು ನಾವು ಭಾವಿಸಿದ್ದೇವೆ.'' ಎಂದು ಚಿತ್ರತಂಡ ಹೇಳಿದೆ.

    "RRR' ಕನ್ನಡದಲ್ಲಿ ಬೇಡ ಎನ್ನುತ್ತಿರೋ ಪ್ರದರ್ಶಕರು!

    RRR ಕನ್ನಡ ಅವತರಣಿಕೆ ಬಿಡುಗಡೆಯಾಗದ ಹಿನ್ನೆಲೆ ಕೆವಿನ್ ಪ್ರೊಡಕ್ಷನ್ಸ್ ಮಾಡಿದ ಪೋಸ್ಟ್‌ನಲ್ಲಿ ಪ್ರದರ್ಶಕರು ಕನ್ನಡ ಅವತರಣಿಕೆ ಬೇಡ ಎನ್ನುತ್ತಿದ್ದಾರಂತೆ. ""ಆರ್‌ಆರ್‌ಆರ್ ಚಿತ್ರದ ಕನ್ನಡ ಅವತರಣಿಕೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಕನ್ನಡ ಅವತರಣಿಕೆಯನ್ನು ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದ್ದೇವೆ.'' ಎನ್ನುವುದನ್ನು ಪೋಸ್ಟ್‌ನಲ್ಲಿ ಬರೆಯಲಾಗಿದೆ.

    ಒಂದು ನಿರ್ಧಾರಕ್ಕೆ ಬರಲಿದೆ ವಿತರಕರು

    ಒಂದು ನಿರ್ಧಾರಕ್ಕೆ ಬರಲಿದೆ ವಿತರಕರು

    ನಾಳೆ (ಮಾರ್ಚ್ 24) ಕ್ಕೆ ಸಂಪೂರ್ಣ ಚಿತ್ರಮಂದಿರಗಳ ಪಟ್ಟಿ ರಿಲೀಸ್ ಮಾಡುವುದಾಗಿ ಹೇಳಲಾಗಿದೆ ಈ ಪೋಸ್ಟ್‌ನಲ್ಲಿ ಹೇಳಾಗಿದೆ. "ಈ ಬಗ್ಗೆ ನಾಳೆ ಒಳಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. RRR ಕನ್ನಡ ಅವತರಣಿಕೆಯನ್ನು ವೀಕ್ಷಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಆವೃತ್ತಿಯನ್ನೇ ಬಿಡುಗಡೆ ಮಾಡುವುದಕ್ಕೆ ನಮಗೆ ನೀವು ಸಹಾಯ ಮಾಡುತ್ತೀರಿ, ನಮ್ಮನ್ನು ಬೆಂಬಲಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    English summary
    KVN Productions says we will try to add Extra Screens for RRR Kannada Version in Karnataka, Know More
    Wednesday, March 23, 2022, 15:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X