twitter
    For Quick Alerts
    ALLOW NOTIFICATIONS  
    For Daily Alerts

    'ಕ್ವಾಟ್ಲೆ ಸತೀಶ'ನಿಂದ ಕನ್ನಡ ಚಿತ್ರರಂಗದ ಬರ್ತ್ ಡೇ

    By Rajendra
    |

    ಕನ್ನಡ ಚಲನಚಿತ್ರ ರಂಗಕ್ಕೆ ಈಗ ಎಂಬತ್ತರ ಪ್ರಾಯ. 1933ರ ಮಾರ್ಚ್ ಮೂರರಂದು ಕನ್ನಡ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಬಿಡುಗಡೆಯಾಗಿತ್ತು. ಈ ಎಂಬತ್ತರ ಸಡಗರವನ್ನು 'ಕ್ವಾಟ್ಲೆ ಸತೀಶ' ವಿಭಿನ್ನವಾಗಿ ಆಚರಿಸಿಕೊಂಡು ಸಂಭ್ರಮಿಸಿದ್ದಾನೆ.

    ಯಾರಪ್ಪಾ ಈ 'ಕ್ವಾಟ್ಲೆ ಸತೀಶ' ಅಂದರೆ, ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ಅವರು ನಿರ್ಮಿಸುತ್ತಿರುವ ಚಿತ್ರವೇ 'ಕ್ವಾಟ್ಲೆ ಸತೀಸ'. ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

    Kwatle Satisha still
    ಕನ್ನಡ ಚಿತ್ರರಂಗದ ಬರ್ತ್ ಡೇ ಸಂಭ್ರಮವನ್ನು 'ಕ್ವಾಟ್ಲೆ ಸತೀಸ' ಚಿತ್ರತಂಡ ವಿಭಿನ್ನವಾಗಿ ಆಚರಿಸಿ ಸಂಭ್ರಮಿಸಿತು. ಚಿತ್ರದ ನಾಯಕಿಗೆ (ಸೋನಿಯಾ ಗೌಡ) ಕನ್ನಡ ಮಾತೆ ಭುವನೇಶ್ವರಿಯ ವೇಷ ತೊಡಸಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿತು.

    ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದಲ್ಲಿ ನೀನಾಸಂ ಸತೀಶ್ ಅವರು ಕ್ವಾಟ್ಲೆ ಸತೀಶ ಎಂಬ ಪಾತ್ರವನ್ನು ಪೋಷಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರದ ನಾಯಕಿ ಸೋನಿಯಾ ಗೌಡ. ಈಕೆ ಈಗಾಗಲೆ 'ರಣ', 'ಜಿಂಕೆಮರಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ಇನ್ನು ಚಿತ್ರದ ನಿರ್ದೇಶಕರಾದ ಮಹೇಶ್ ರಾವ್ ಅವರು 'ಮುರಳಿ ಮೀಟ್ಸ್ ಮೀರಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮಿಳಿನ 'ನಡುವುಲ ಕೊಂಜಂ ಪಕ್ಕಥ ಕಾಣೊಂ' ಎಂಬ ಚಿತ್ರದ ರೀಮೇಕ್. ಚಿತ್ರದ ಹೆಸರೇ ಹೇಳುವಂತೆ ಇದು ಪಕ್ಕಾ ಕಾಮಿಡಿ ಚಿತ್ರ.

    ಮಹೇಶ್ ರಾವ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತ ನಿರ್ದೇಶನವಿದೆ. ಪವನ್ ಒಡೆಯರ್ ಚಿತ್ರಕ್ಕೆ ಮಾತು ಬರೆದರೆ ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಆನಂದ್ ಕಲಾ ನಿರ್ದೇಶನ ಹಾಗೂ ದೀಪು.ಎಸ್.ಕುಮಾರ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನೀನಾಸಂ ಸತೀಶ್, ಸೋನಿಯಾಗೌಡ, ಅಚ್ಯುತರಾವ್, ಚಿಕ್ಕಣ್ಣ, ಡಾ.ಸೂರಿ, ಸಿಲ್ಲಿಲಲ್ಲಿ ಆನಂದ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Kannada film 'Kwatle Satisha' team celebrates 80 years of Kannada cinema in different style. The first Kannada talkie film 'Sati Sulochana' released on 3rd March, 1933. The film team celebrates 80th birthday of Kannada cinema in Mysore. Kwatle Satish is the Kannada remake of the Tamil film Naduvula Konjam Pakkatha Kaanom, which was a surprise hit in Kollywood.
    Tuesday, March 5, 2013, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X