ಟಾಕ್ಸಿಕ್ ಚಿತ್ರಕ್ಕೆ ಲಕ್ಕಿ ಡಿಪ್ ನಲ್ಲಿ ನಾಯಕಿ ; ಕರೀನಾ ಕಪೂರ್ ಜಾಗಕ್ಕೆ ಬಂದ ಲೇಡಿ ಸೂಪರ್ ಸ್ಟಾರ್..!

ಅವರನ್ನ ಬಿಟ್ಟು.. ಇವರನ್ನ ಬಿಟ್ಟು.. ಇನ್ಯಾರು..? ದಿನ ಬೆಳಗಾದರೆ ರಾಕಿಂಗ್ ಸ್ಟಾರ್ ಯಶ್ ಅವರ ಭಕ್ತಗಣಕ್ಕೆ ಮತ್ತು ಸಿನಿಮಾ ಪಂಡಿತರಿಗೆ ಕಾಡ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ ಇದು. ಹೀಗಾಗಿಯೇ ಗೊಡವೆಯೇ ಬೇಡ ಎಂದು ಲಕ್ಕಿ ಡಿಪ್ ತೆರೆದಿರುವ ರಂಗೀನ್ ಲೋಕದ ಜನ ಟಾಕ್ಸಿಕ್ ಚಿತ್ರದ ನಾಯಕಿಯ ಸ್ಥಾನಕ್ಕೆ ದಿನಕ್ಕೊಂದು ಹೆಸರನ್ನ ಘೋಷಣೆ ಮಾಡುತ್ತಿದ್ದಾರೆ. ಇದೇ ಲಕ್ಕಿ ಡಿಪ್ ಮೂಲಕ ಸದ್ಯಕ್ಕೆ ಟಾಕ್ಸಿಕ್ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಆಯ್ಕೆಯಾಗಿದ್ದಾರೆ.

ಹೌದು, ಮೊನ್ನೆವರೆಗೆ.. ಕರೀನಾ ಕಪೂರ್ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ್ತಾರೆ ಎಂಬ ಪುಕಾರು ಹಬ್ಬಿತ್ತು. ಯಶ್‌ಗೆ ಕರೀನಾ ಕಪೂರ್ ನಾಯಕಿ ಎಂದು ರಾಕಿ ಬಣ ಕ್ಯಾಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಕರೀನಾ ಕಪೂರ್ ನಾಯಕಿ ಅಲ್ಲ ಬದಲಿಗೆ ಯಶ್ ಸಹೋದರಿ ಅನ್ನುವ ಸುದ್ದಿ ಸೇಲ್ ಆಯ್ತು. ಕಿಯಾರಾ ಅಡ್ವಾಣಿ ಜೊತೆ ಯಶ್ ಕುಣಿಯಲಿದ್ದಾರೆ ಎಂಬ ಇನ್ನೊಂದು ಸುದ್ದಿಯನ್ನೂ ಕೂಡ ತೇಲಿ ಬಿಡಲಾಯ್ತು.

Lady Super Star Nayanthara To Replace Kareena Kapoor Khan In Yash s Toxic

ಇನ್ನೇನು.. ಯಶ್ ಈ ಅನಧಿಕೃತ ಪಾತ್ರವರ್ಗದ ಜೊತೆ ಚಿತ್ರೀಕರಣವನ್ನ ಆರಂಭ ಮಾಡಬೇಕೆನ್ನುವಷ್ಟರಲ್ಲಿ, ನಿನ್ನೆ ಕರೀನಾ ಕಪೂರ್ ಮುಂಬೈಗೆ ಮರಳಿದ್ದಾರೆ ಅನ್ನುವ ಸುದ್ದಿ ಬಂತು. ಅಯ್ಯೋ..! ಯಾಕಿಂಗಾಯ್ತು..? ಎಂದು ಅನೇಕರು ತಮಗೆ ತಾವೇ ಪ್ರಶ್ನೆ ಮಾಡಿಕೊಂಡರು. ಆಗ ಕರೀನಾ ಕಪೂರ್ ಕಾಲ್‌ ಶೀಟ್ ಖಾಲಿ ಇಲ್ಲ ಅನ್ನುವ ಉತ್ತರ ಬಂತು. ಸದ್ಯದ ಸಮಾಚಾರ ಏನೆಂದರೆ ಕರೀನಾ ಕಪೂರ್ ಜಾಗಕ್ಕೆ ಈಗ ನಯನತಾರಾ ಬಂದಿದ್ದಾರೆ.

ಈ ಸುದ್ದಿ ನಿಜಾನಾ.. ಸುಳ್ಳಾ ಗೊತ್ತಿಲ್ಲ. ನಯನತಾರಗೆ ಈ ವಿಚಾರ ಗೊತ್ತಿದೆಯೋ.. ಇಲ್ಲವೋ ಅನ್ನುವುದು ಗೊತ್ತಿಲ್ಲ. ಆದರೆ ಸದ್ಯಕ್ಕೆ.. ಉತ್ತರ-ದಕ್ಷಿಣ.. ಪೂರ್ವ-ಪಶ್ಚಿಮ.. ಎಲ್ಲೆಡೆ ಟಾಕ್ಸಿಕ್ ಚಿತ್ರಕ್ಕೆ ನಯನತಾರಾ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗುಲ್ಲಾಗಿದೆ.

Lady Super Star Nayanthara To Replace Kareena Kapoor Khan In Yash s Toxic

ಇನ್ನೂ.. ನಯನತಾರಾ ಈ ಹಿಂದೆ ಸೂಪರ್ ಚಿತ್ರದ ನೆಪದಲ್ಲಿ ಕನ್ನಡಕ್ಕೆ ಬಂದಿದ್ದರು. ಕನ್ನಡ ಚಿತ್ರರಂಗಕ್ಕೆ ಇದು ಇವರ ಎರಡನೇ ಭೇಟಿ. ಹೀಗಾಗಿಯೇ ಸುದ್ದಿ ಕೇಳಿ ಸದ್ಯಕ್ಕೆ ಥ್ರಿಲ್ ಆಗಿರುವ ನಯನತಾರಾ ಅವರ ಅಭಿಮಾನಿಗಳು ನಯನತಾರಾ ಅವರನ್ನ ವೆಲ್ ಕಂ ಮಾಡಲು ಸಜ್ಜಾಗುತ್ತಿದ್ದಾರೆ.

ಉಳಿದಂತೆ ಯಶ್ ಅವರ ಈ ಮಹತ್ವಕಾಂಕ್ಷೆಯ ಯೋಜನೆಗೆ ಗೀತು ಮೋಹನ್ ದಾಸ್ ನಿರ್ದೇಶನ ಇರಲಿದೆ. ಕೆ.ವಿ.ಎನ್ ಸಂಸ್ಥೆ ನಿರ್ಮಾಣದ ಜವಾಬ್ಧಾರಿ ವಹಿಸಿಕೊಂಡಿದೆ. ಇನ್ನೂ.. ಯಶ್ ಕೂಡ ತಮ್ಮ ಜೇಬಿಂದ ಚಿತ್ರಕ್ಕೆ ಹಣವನ್ನ ಸುರಿಯಲಿದ್ದಾರೆ. ಇನ್ನೂ ಮುಂದಿನ ವರ್ಷ ಏಪ್ರಿಲ್ ಹತ್ತಕ್ಕೆ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಆದರೆ.. ಚಿತ್ರೀಕರಣ ಆರಂಭವಾಗುವುದು ಯಾವತ್ತು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ ಅನ್ನುವುದಷ್ಟೇ ಸದ್ಯಕ್ಕೆ ಎಲ್ಲರಲ್ಲಿರುವ ಮಾಹಿತಿ.

Lady Super Star Nayanthara To Replace Kareena Kapoor Khan In Yash s Toxic

ಒಟ್ನಲ್ಲಿ ಟಾಕ್ಸಿಕ್ ಚಿತ್ರಕ್ಕೆ ನಯನತಾರಾ ಆಯ್ಕೆಯಾಗಿದ್ದಾರೆ ಅನ್ನುವುದು ಸದ್ಯದ ತಾಜಾ ಖಬರ್. ಈ ಸುದ್ದಿಯಾದರೂ ನಿಜವಾಗುತ್ತಾ ಅಥವಾ ಕರೀನಾ ಕಪೂರ್ ಅವರಂತೆಯೇ ನಯನತಾರಾ ಬಳಿ ಕೂಡ ಟೈಮ್ ಇಲ್ಲ ಅನ್ನುವ ಸುದ್ದಿ ಮುಂದೆ ಹೊರ ಬರುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ

More from Filmibeat

English summary
Yash's upcoming movie "Toxix" has been grabbing attention for quite some time now. According to a recent report, there are talks of Nayanthara, who co-starred with Shah Rukh Khan in "Jawan", joining the cast. Allegedly, she's being considered for the role of a sister, originally earmarked for Kareena Kapoor Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X