»   » ಎಂಎಸ್‌ಎನ್‌ ಪೋಲ್‌ ಪ್ರಕಾರ ಲಗಾನ್‌ಗೆ ಆಸ್ಕರ್‌ ಗ್ಯಾರಂಟಿ

ಎಂಎಸ್‌ಎನ್‌ ಪೋಲ್‌ ಪ್ರಕಾರ ಲಗಾನ್‌ಗೆ ಆಸ್ಕರ್‌ ಗ್ಯಾರಂಟಿ

Posted By: Super
Subscribe to Filmibeat Kannada

ಲಗಾನ್‌ಗೆ ಆಸ್ಕರ್‌ ಬರುತ್ತದಾ? ಕ್ಷಣಗಣನೆ ಇದೀಗ ಶುರುವಾಗಿದೆ. ಚಿತ್ರಕ್ಕೆ 25 ಕೋಟಿ ಸುರಿದು ಸೈ ಎನಿಸಿಕೊಂಡಿರುವ ಅಮೀರ್‌ ಖಾನ್‌ ಮತ್ತು ನಿರ್ದೇಶಕ ಆಶುತೋಷ್‌ ಗೌರೀಕರ್‌ ಇಬ್ಬರಷ್ಟೇ ಅಲ್ಲ, ಲಗಾನ್‌ನ ಅಭಿಮಾನಿಗಳೆಲ್ಲಾ ಮುಷ್ಟಿ ಬಿಗಿಯಾಗಿಸಿಕೊಳ್ಳಲಿದ್ದಾರೆ. ಮಾರ್ಚ್‌ 24ರಂದು ಪ್ರಶಸ್ತಿ ಪ್ರಕಟವಾಗಲಿದೆ.

ನಾನು ಜ್ಯೋತಿಷ್ಯವನ್ನು ಅತಿಯಾಗಿ ನಂಬುವುದಿಲ್ಲ. ಆದರೂ ಕೆಲವರು ನನ್ನ ಅಭಿಮಾನಿಗಳು- ಅವರ ಪ್ರಕಾರ ಲಗಾನ್‌ಗೆ ಆಸ್ಕರ್‌ ಗ್ಯಾರಂಟಿ. ನನಗೂ ಆಸ್ಕರ್‌ ನಮಗೇ ಸಂದೇ ಸಲ್ಲುತ್ತದೆ ಎಂಬ ವಿಶ್ವಾಸವಿದೆ. ಆದರೂ ಈಗ ಮನಸ್ಸಲ್ಲಿ ನಿರೀಕ್ಷೆ, ಕಳವಳ ಎಲ್ಲವೂ ಒಟ್ಟಿಗೆ. ಇದರ ಅನುಭವವೇ ನನಗೆ ಮಜಾ ಕೊಡುತ್ತಿದೆ...ನಗುನಗುತ್ತಾ ಹೇಳುತ್ತಾರೆ ಅಮೀರ್‌.

ಎಂಎಸ್‌ಎನ್‌ ತನ್ನ ವೆಬ್‌ಜಾಲದಲ್ಲಿ ಆಸ್ಕರ್‌ಮೇನಿಯಾ ಎಂಬ ಶೀರ್ಷಿಕೆಯಡಿ ಪುಟಗಳನ್ನು ಸಿದ್ಧಮಾಡಿದೆ. ಅದರಲ್ಲಿ ಜನರ ಆಯ್ಕೆ ಯಾರದ್ದು ಎಂಬ ಪೋಲ್‌. ಈ ಪೋಲ್‌ನಲ್ಲಿ ಲಗಾನ್‌ಗೇ ವಿಜಯ. ಫ್ರಾನ್ಸ್‌ನ 'ಅಮೇಲಿ" ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ ಅಂತ ವೋಟ್‌ ಮಾಡಿರುವವರು 1.58 ಪ್ರತಿಶತ ಮಂದಿ. ನಾರ್ವೆಯ 'ಎಲ್ಲಿಂಗ್‌"ಗೆ 0.24%, ಬೋಸ್ನಿಯಾದ 'ನೋ ಮ್ಯಾನ್ಸ್‌ ಲ್ಯಾಂಡ್‌"ಗೆ 1.22%, ಅರ್ಜೆಂಟೈನಾದ 'ಸನ್‌ ಆಫ್‌ ದಿ ಬ್ರಿಜ್‌"ಗೆ 0.52% ವೋಟುಗಳು ಸಂದಿವೆ. ಈ ಯಾದಿಯಲ್ಲಿರುವ ಲಗಾನ್‌ಗೆ 96.43 ಪ್ರತಿಶತ ವೋಟುಗಳು!

ನಾನು ಸ್ಥಿತಪ್ರಜ್ಞನಾಗಿರಲು ಇಷ್ಟಪಡುತ್ತೇನೆ. ಲಗಾನ್‌ಗೆ ಆಸ್ಕರ್‌ ಬಂದೇ ಬರುತ್ತದೆ ಅಂತ ಅನೇಕರು ನನ್ನಲ್ಲಿ ಹೇಳುತ್ತಿದ್ದಾರೆ. ಅಕಸ್ಮಾತ್‌ ಅದು ತಪ್ಪಿದರೂ ನಾನು ಸ್ವೀಕರಿಸಲು ಸಿದ್ಧ. ಆಸ್ಕರ್‌ ಮೆಟ್ಟಿಲು ಹತ್ತಿರುವುದೂ ದೊಡ್ಡ ಸಾಧನೆಯೇ ಅಲ್ಲವೇ? ಅಂತ ನಗದೆಯೇ ಹೇಳುತ್ತಾರೆ ಆಶುತೋಷ್‌ ಗೌರೀಕರ್‌.

ಇನ್ನು ಹನ್ನೆರಡೇ ದಿನ. ಲಗಾನ್‌ ಆಸ್ಕರ್‌ಗೆ ಪಾತ್ರವಾಗುವುದೋ ಇಲ್ಲವೋ ಗೊತ್ತಾಗುತ್ತದೆ. ಅಂದಹಾಗೆ, ನಿಮ್ಮ ಅಭಿಪ್ರಾಯವೇನು?

English summary
Will Lagaan get the Oscar?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada