»   » ಆಸ್ಕರ್‌ಗೆ ಇನ್ನೊಂದೆ ಮೆಟ್ಟಿಲು: ಮೊದಲ ಎಂಟರೊಳಗೊಂದು ಲಗಾನ್‌!

ಆಸ್ಕರ್‌ಗೆ ಇನ್ನೊಂದೆ ಮೆಟ್ಟಿಲು: ಮೊದಲ ಎಂಟರೊಳಗೊಂದು ಲಗಾನ್‌!

Posted By: Staff
Subscribe to Filmibeat Kannada

ಮುಂಬಯಿ : ಆಸ್ಕರ್‌ ಪ್ರಶಸ್ತಿ ಗಳಿಸಿಯೇ ತೀರುತ್ತದೆಂದು ನಂಬಲಾಗಿರುವ ಅಮೀರ್‌ಖಾನ್‌ ಅವರ ಮಹತ್ವಾಕಾಂಕ್ಷೆಯ ಚಿತ್ರ ಲಗಾನ್‌, ಆಸ್ಕರ್‌ ಪ್ರಶಸ್ತಿ ಸ್ಪರ್ಧೆಯ ಆಖಾಡದಲ್ಲಿ ಮೊದಲ ಅತ್ಯುತ್ತಮ ಎಂಟು ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ.

ಲಗಾನ್‌ ಚಿತ್ರವನ್ನು ಆಧರಿಸಿದ ಕಾಮಿಕ್‌ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಅಮೀರ್‌ಖಾನ್‌ ಈ ಸಂತೋಷದ ವಿಷಯವನ್ನು ಪ್ರಕಟಿಸಿದರು. ಜನವರಿ 27 ರಂದು ಸ್ಪರ್ಧೆಯ ಜ್ಯೂರಿ ಅವರು ಲಗಾನ್‌ ಚಿತ್ರವನ್ನು ಅಧಿಕೃತವಾಗಿ ವೀಕ್ಷಿಸಿದ್ದು , ಚಿತ್ರವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾಗಿರುವ 8 ಚಿತ್ರಗಳಲ್ಲಿ ಲಗಾನ್‌ ಸೇರಿರುವ ಮಾಹಿತಿ ತಮಗೆ ಬಂದಿದೆ ಎಂದು ಖಾನ್‌ ಪುಳಕಿತರಾಗಿ ಹೇಳಿದರು.

ನಮ್ಮ ಪ್ರಯತ್ನಗಳು ಫಲ ಕೊಡುತ್ತಿವೆ. ಇದಕ್ಕಾಗಿ ನಾವು ನಿರ್ದೇಶಕ ಅಶುತೋಷ್‌ ಗೌರೀಕರ್‌ ಅವರಿಗೆ ಥ್ಯಾಂಕ್ಸ್‌ ಹೇಳಬೇಕು. ಅಮೆರಿಕಾದಲ್ಲಿ ಚಿತ್ರದ ಪ್ರಚಾರಕ್ಕಾಗಿ ಅವರು ಅಪಾರ ಶ್ರಮ ವಹಿಸಿದ್ದಾರೆ ಎಂದು ಅಮೀರ್‌ ಬಣ್ಣಿಸಿದರು.

ಲಗಾನ್‌ ಚಿತ್ರಕ್ಕೆ ಫ್ರೆಂಚ್‌ ಭಾಷೆಯ ಎಮಿಲಿ ತೀವ್ರ ಸ್ಪರ್ಧೆ ಒಡ್ಡುತ್ತಿದೆ ಎಂದು ಹೇಳಿದ ಅವರು, ಆಸ್ಕರ್‌ ಖುಷಿಯಲ್ಲಿ ತಾವು ಯಾವುದೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಅಗೌರವದಿಂದ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ರಾಷ್ಟ್ರೀಯ ಪ್ರಶಸ್ತಿ ನನ್ನ ಹೃದಯಕ್ಕೆ ಹತ್ತಿರವಾದುದನ್ನು . ಅದು ಬರುವುದಾದರೆ ಯಾವುದೇ ಕ್ಷಣದಲ್ಲಿ ಸಂತೋಷದಿಂದ ಸ್ವೀಕರಿಸುತ್ತೇನೆ. ಆದರೆ, ಪ್ರತಿಯಾಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಸಾಧ್ಯವಾಗದು ಎಂದು ಅಮೀರ್‌ಖಾನ್‌ ಹೇಳಿದರು. (ಪಿಟಿಐ)

English summary
Aamir Khans blockbuster Lagaan made it among the top eight films for this years much awaited Oscar Awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada