»   » ಇಂಗ್ಲಿಷೇತರ ವಿಭಾಗದ ಚಿತ್ರಗಳ ಅಂತಿಮ ಸುತ್ತು

ಇಂಗ್ಲಿಷೇತರ ವಿಭಾಗದ ಚಿತ್ರಗಳ ಅಂತಿಮ ಸುತ್ತು

Posted By: Staff
Subscribe to Filmibeat Kannada

ಆಸ್ಕರ್‌ ಪ್ರಶಸ್ತಿಯ ಇಂಗ್ಲಿಷೇತರ ಭಾಷಾ ವಿಭಾಗದ ಅಂತಿಮ ಐದು ಚಿತ್ರಗಳ ಯಾದಿಯಲ್ಲಿ ಲಗಾನ್‌ ಕೂಡ ಒಂದು !

ಫ್ರಾನ್ಸ್‌ನ ಅಮೆಲಿ, ಬೋಸ್ನಿಯಾದ ನೋ ಮ್ಸಾನ್ಸ್‌ ಲ್ಯಾಂಡ್‌, ನಾರ್ವೆಯ ಎಲ್ಲಿಂಗ್‌ ಮತ್ತು ಅರ್ಜೆಂಟಿನಾದ ಸನ್‌ ಆಫ್‌ ದಿ ಬ್ರೆೃಡ್‌ ಅಂತಿಮ ಸುತ್ತು ಪ್ರವೇಶಿಸಿರುವ ಇತರ ಚಿತ್ರಗಳು.

ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿರುವ ಭಾರತದ ಮೂರನೇ ಚಿತ್ರ ಇದು. ಈ ಮೊದಲು, 1957ರಲ್ಲಿ ಮೆಹಬೂಬ್‌ ಖಾನ್‌ರ ಮದರ್‌ ಇಂಡಿಯಾ ಮತ್ತು 1988ರಲ್ಲಿ ಮೀರ್‌ ನಾಯರ್‌ ಅವರ ಸಲಾಂ ಬಾಂಬೆ ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತು ಪ್ರವೇಶಿಸಿದ್ದವು.

ತಮ್ಮ ಚಿತ್ರ ಆಸ್ಕರ್‌ ನಾಮಿನಿ ಪಡೆದಿರುವುದು ಇಡೀ ಭಾರತದ ಚಲನಚಿತ್ರ ಉದ್ದಿಮೆಗೇ ಹೆಮ್ಮೆಯ ವಿಷಯ. ಜಾಗತಿಕ ಮಟ್ಟದಲ್ಲಿ ಭಾರತ ಚಿತ್ರರಂಗ ಸಹೃದಯರ ಗಮನವನ್ನು ತನ್ನತ್ತ ಸೆಳೆಯುವುದು ಇದರಿಂದ ಸಾಧ್ಯವಾಗಲಿದೆ. ಇದರಿಂದ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ಅಮೀರ್‌ ಕಾನ್‌ ಪ್ರತಿಕ್ರಿಯಿಸಿದ್ದಾರೆ.

(ಇನ್ಫೋ ವಾರ್ತೆ)

English summary
Lagaan in the final list of nonEnglish films for Oscar!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada