twitter
    For Quick Alerts
    ALLOW NOTIFICATIONS  
    For Daily Alerts

    ಸ್ನಾಪ್ ಚಾಟ್ ಮೇಲೆ ಕಾಪಿರೈಟ್ ಉಲ್ಲಂಘನೆ ಕೇಸ್, FIR ದಾಖಲು

    |

    ಜನಪ್ರಿಯ ಸಾಮಾಜಿಕ ಜಾಲ ತಾಣ ಶೇರ್ ಚಾಟ್ ವಿರುದ್ಧ ಕಾಪಿರೈಟ್ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಕಿರಿಕ್ ಪಾರ್ಟಿ ಚಿತ್ರ ತಂಡದ ವಿರುದ್ದ ದೂರು ದಾಖಲಿಸಿದ್ದ ಲಹರಿ ಆಡಿಯೋ ಸಂಸ್ಥೆ ಈಗ ಸ್ನಾಪ್ ಚಾಟ್ ವಿರುದ್ಧ ಯಶವಂತಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ದೂರು ಸ್ವೀಕರಿಸಿರುವ ಪೊಲೀಸರು, ಭಾರತೀಯ ದಂಡ ಸಂಹಿತೆ 1957ರ ಸೆಕ್ಷನ್ 64, 1999ರ ಭಾರತೀಯ ಟ್ರೇಡ್ ಮಾರ್ಕ್ಸ್ ಕಾಯಿದೆ ಸೆಕ್ಷನ್ 201ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಎಫ್ಐಆರ್ ಹಾಕಲಾಗಿದೆ.

    ಮೊಹಲ್ಲಾ ಟೆಕ್ ಒಡೆತನದ ಸ್ನಾಪ್ ಚಾಟ್ ಸಂಸ್ಥೆಯು ಲಹರಿ ಸಂಸ್ಥೆಯ ಹಕ್ಕುಸ್ವಾಮ್ಯ ಹೊಂದಿರುವ ಆಡಿಯೋ ತುಣುಕುಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿದ್ದು, ಇದರಿಂದ ಭಾರಿ ನಷ್ಟವಾಗಿದೆ.

    Copyright Violation: Lahari Music files case against ShareChat,FIR files

    ಈ ಹಿಂದೆ ಕೂಡಾ ಈ ರೀತಿ ಕಾಪಿ ರೈಟ್ ಉಲ್ಲಂಘನೆ, ವಿನ್ಯಾಸ ಅನುಮತಿ ಇಲ್ಲದೆ ಬಳಸಿಕೊಂಡ ಆರೋಪಗಳು ಸ್ನಾಪ್ ಚಾಟ್ ಮೇಲೆ ಕೇಳಿ ಬಂದಿತ್ತು.

    ಕಳೆದ ವರ್ಷ ಟಿಕ್ ಟಾಕ್ ಎಕ್ಸ್ ಕ್ಲೂಸಿವ್ ವಿಡಿಯೋವೊಂದನ್ನು ಬಳಸಿದ್ದ ಸ್ನಾಪ್ ಚಾಟ್, ಹಲವು ಲೀಗಲ್ ನೋಟಿಸ್ ಪಡೆದ ಬಳಿಕ ಅದನ್ನು ತೆಗೆದು ಹಾಕಿತ್ತು.

    ಇನ್ನೊಂದೆಡೆ, ಬೈಟ್ ಡ್ಯಾನ್ಸ್ ನ ಹೆಲೋ ಅಪ್ಲಿಕೇಷನ್ ವಿರುದ್ಧ ಸ್ನಾಪ್ ಚಾಟ್ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು. ಆದರೆಮ್ ದೆಹಲಿ ಹೈಕೋರ್ಟಿನಲ್ಲಿ ಕೇಸು ಮುರಿದು ಬಿದ್ದಿತ್ತು.

    ಪ್ರತಿ ತಿಂಗಳಿಗೆ ಸುಮಾರು 60 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಶೇರ್ ಚಾಟ್ ಕನ್ನಡ, ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬೆಂಗಾಲಿ ಮತ್ತು ಗುಜರಾತಿ ಭಾಷೆಗಳಲ್ಲಿ ಲಭ್ಯವಿದೆ. ಕಳೆದ ವರ್ಷ 414.73 ಕೋಟಿ ರು ನಷ್ಟ ಅನುಭವಿಸಿದೆ.

    English summary
    An FIR has been registered against vernacular social networking startup ShareChat based on a complaint filed by South India-based Lahari Music for alleged copyright violation.
    Friday, March 13, 2020, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X