ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನೇಹಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗೊಂಬೆ ಇಂದು ಸಪ್ತಪದಿ ತುಳಿದಿದ್ದಾರೆ.
ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದುವೆ ಆಗಿದ್ದಾರೆ. ಆಶ್ಚರ್ಯ ಎಂದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಗೊಂಬೆಯನ್ನ ಮದುವೆ ಆಗಿರುವ ನಾಯಕ ಹೆಸರು ಚಂದನ್.

ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದ್ದು ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಧಾರಾವಾಹಿಯ ಕಲಾವಿದರು ಕೂಡ ಮದುವೆಯಲ್ಲಿ ಭಾಗಿ ಆಗಿದ್ದರು.

ಗೊಂಬೆಯನ್ನ ಮದುವೆ ಆಗಿರುವ ಚಂದನ್ ಸದ್ಯ ಬ್ಯಾಂಕಾಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೆಲವು ದಿನಗಳ ನಂತ್ರ ನೇಹಾಗೌಡ ಕೂಡ ಬ್ಯಾಂಕಾಕ್ ಗೆ ಪ್ರಯಾಣ ಬೆಳಸಲಿದ್ದಾರೆ. ನೇಹಾ ಅಭಿನಯ ಮಾಡುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಚಿತ್ರೀಕರಣ ಮುಗಿಯುವ ತನಕವೂ ಗೊಂಬೆ ಪಾತ್ರದಲ್ಲಿ ನೇಹಾಗೌಡ ಅವರೇ ಮುಂದುವರೆಯಲಿದ್ದಾರಂತೆ.


Click it and Unblock the Notifications











