'ಜೂಲಿ 2' ಬಳಿಕ ಕನ್ನಡ ಸಿನಿಮಾ ಮಾಡ್ತಿದ್ದಾರೆ ಲಕ್ಷ್ಮಿ ರೈ

By Naveen

ನಟಿ ಲಕ್ಷ್ಮಿ ರೈ ಈಗ ಮತ್ತೆ ಕನ್ನಡಕ್ಕೆ ವಾಪಸ್ ಬಂದಿದ್ದಾರೆ. ಬಾಲಿವುಡ್ ನಲ್ಲಿ 'ಜೂಲಿ 2' ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದ ಈ ಬೆಳದಿಂಗಳ ಬಾಲೆ ಮತ್ತೆ ಸ್ಯಾಂಡಲ್ ವುಡ್ ಗೆ ಆಗಮಿಸಿದ್ದಾರೆ.

ಲಕ್ಷ್ಮಿ ರೈ ಈಗ 'ಝಾನ್ಸಿ' ಎಂಬ ಹೊಸ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟೂಡಿಯೊದಲ್ಲಿ ಚಿತ್ರ ಲಾಂಚ್ ಆಗಿದೆ.

'ಝಾನ್ಸಿ' ಹೆಸರು ಕೇಳಿತ್ತಿದ್ದ ಹಾಗೆ ಇದು ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜೀವನ ಚರಿತ್ರೆಯ ಸಿನಿಮಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದೆ. ಮಾಸ್ ಅವತಾರದಲ್ಲಿ ಲಕ್ಷ್ಮಿ ರೈ ಇಲ್ಲಿ ಮಿಂಚಲಿದ್ದಾರೆ.

Lakshmi Rai Jhansi kannada movie launched

ಇನ್ನು ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕೋಮಲ್ ನಟನೆಯ 'ಮರ್ಯಾದ ರಾಮಣ್ಣ' ಚಿತ್ರವನ್ನು ಮಾಡಿದ್ದರು.

Lakshmi Rai Jhansi kannada movie launched

ಅಂದಹಾಗೆ, ನಟಿ ಲಕ್ಷ್ಮಿ ರೈ ಈ ಹಿಂದೆ ಕನ್ನಡದಲ್ಲಿ 'ಸ್ನೇಹನಾ.. ಪ್ರೀತಿನಾ..', 'ಕಲ್ಪನಾ', 'ಮಿಂಚಿನ ಓಟ' ಸೇರಿದಂತೆ ಕೆಲ ಸಿನಿಮಾ ಮಾಡಿದ್ದಾರೆ. ಸದ್ಯ ಮಲೆಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ಬಿಜಿ ಇದ್ದಾರೆ.

More from Filmibeat

English summary
Actress Lakshmi Rai's 'Jhansi' kannada movie launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X