'ವಿಲನ್'ಗಾಗಿ ಇಡೀ ಥಿಯೇಟರ್ ಬುಕ್ ಮಾಡಿದ ಅಭಿಮಾನಿಗಳು
Recommended Video

ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಇದೇ ಗುರುವಾರ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಬೆಳಿಗ್ಗೆ ಆರು ಮತ್ತು ಏಳು ಗಂಟೆಗೆ ರಾಜ್ಯದ ಬಹುತೇಕ ಕಡೆ ಶೋಗಳು ಆರಂಭವಾಗಿದೆ.
ಇನ್ನು ಕೆಲವಡೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮಧ್ಯರಾತ್ರಿಯೇ ವಿಲನ್ ಶೋ ಮಾಡಲು ಮುಂದಾಗಿದ್ದಾರೆ. ಇದೀಗ, ತಾವರೆಕೆರೆಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಳಿಗ್ಗೆ ಆರು ಗಂಟೆ ಶೋ ಸಂಪೂರ್ಣವಾಗಿ ಅಭಿಮಾನಿಗಳ ಪಾಲಾಗಿದೆ.
ಹೌದು, ಡಾ ವಿಷ್ಣು ಸೇನಾ ಸಮಿತಿ ಮತ್ತು ಸುದೀಪ್ ಸಾಂಸ್ಕೃತಿಕ ವೇದಿಕೆಯ ಸಹಭಾಗಿತ್ವದಲ್ಲಿ ಲಕ್ಷ್ಮಿ ಚಿತ್ರಮಂದಿರದ ಮೊದಲ ಶೋ ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಇದು ಅಭಿಮಾನಿಗಳಿಗೆ ಮಾತ್ರ ಮೀಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ 1.6 ಲಕ್ಷ ರೂಪಾಯಿ ಮೌಲ್ಯಕ್ಕೆ ಇಡೀ ಚಿತ್ರಮಂದಿರದ ಟಿಕೆಟ್ ಸೋಲ್ಡ್ ಔಟ್ ಆಗಿದೆಯಂತೆ. ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು ಡಾ ವಿಷ್ಣು ಸೇನಾ ಸಮಿತಿ ಮತ್ತು ಸುದೀಪ್ ಸಾಂಸ್ಕೃತಿಕ ವೇದಿಕೆಯ ಸದಸ್ಯರನ್ನ ಸಂಪರ್ಕಿಸಿ ಟಿಕೆಟ್ ತಗೆದುಕೊಳ್ಳುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಿರುವುದರಿಂದ ಸಹಜವಾಗಿ ಈ ಚಿತ್ರ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಪ್ರೇಮ್ ನಿರ್ದೇಶನದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











