twitter
    For Quick Alerts
    ALLOW NOTIFICATIONS  
    For Daily Alerts

    ಟಿಡಿಪಿಗೆ ಟಾಂಗ್, ತೆಲಂಗಾಣ ಸೇರಿ ಎಲ್ಲೆಡೆ ಚಿತ್ರ ರಿಲೀಸ್ : ವರ್ಮಾ ಸವಾಲು

    |

    ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದರೆ ಹಾಗೆ, ಹೆದರಿಕೆ, ನಿರ್ಬಂಧ, ನಿಷೇಧಕ್ಕೆ ಜಗ್ಗದ ವ್ಯಕ್ತಿ. ಅವಿಭಜಿತ ಆಂಧ್ರಪ್ರದೇಶದ ಮಹಾನ್ ನಟ ಎನ್ ಟಿ ರಾಮರಾವ್ ಅವರ ಜೀವನದ ಸಂಧ್ಯಾಕಾಲದಲ್ಲಿ ಅವರ ಜೀವನ ಪ್ರವೇಶಿಸಿ, ಅವರ ಬದುಕಿಗೆ ಆಸರೆಯಾಗಿ ನಿಂತಿದ್ದ ಲಕ್ಷ್ಮಿ ಪಾರ್ವತಿಯ ದೃಷ್ಟಿಯಲ್ಲಿ ಎನ್ ಟಿ ರಾಮರಾವ್ ಬದುಕು, ಆಂಧ್ರದ ರಾಜಕೀಯ ಚಿತ್ರಣವನ್ನು ಕಟ್ಟಿ ಕೊಡಲು ಆರ್ ಜಿವಿ ಮುಂದಾಗಿದ್ದಾರೆ. ಆದರೆ, ಈ ಚಿತ್ರದಲ್ಲಿರುವ ಪಾತ್ರವೊಂದು ಆಂಧ್ರ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರನ್ನು ಹೋಲುತ್ತಿದ್ದು, ನಾಯ್ಡು ಅವರನ್ನು ವಿಲನ್ ರೀತಿಯಲ್ಲಿ ತೋರಿಸಲಾಗಿದೆ ಎಂದು ತೆಲುಗು ದೇಶಂ ಪಾರ್ಟಿ ಆರೋಪಿಸಿದೆ.

    ಲಕ್ಷ್ಮೀಸ್ ಎನ್ಟಿಆರ್ ಚಿತ್ರ ಬಿಡುಗಡೆಗೆ ತಡೆ ಕೋರಿ ತೆಲಂಗಾಣದ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದ ಟಿಡಿಪಿ ಕಾರ್ಯಕರ್ತರಿಗೆ ನಿರಾಶೆಯಾಗಿತ್ತು. ಚಿತ್ರ ಬಿಡುಗಡೆಗೆ ತೆಲಂಗಾಣ ಹೈಕೋರ್ಟ್ ನಿರ್ಬಂಧ ವಿಧಿಸಿರಲಿಲ್ಲ. ಆದರೆ, ಆಂಧ್ರ ಹೈಕೋರ್ಟಿನಲ್ಲಿ ನಿರ್ಬಂಧ ವಿಧಿಸಲಾಗಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಜಾರಿಯಲ್ಲಿದ್ದು, ಏಪ್ರಿಲ್ 03ರ ತನಕ ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ. ಆಂಧ್ರದ ಸಿನಿಮಾ ಪ್ರೇಮಿಗಳು ಹೈದರಾಬಾದಿನಲ್ಲಿ ಚಿತ್ರ ವೀಕ್ಷಿಸಬಹುದು ಅಥವಾ ತೆಲಂಗಾಣದಲ್ಲಿ ಸಿನಿಮಾ ವೀಕ್ಷಿಸಲು ಅವಕಾಶವಿದೆ.

    ರಾಮ್ ಗೋಪಾಲ್ ವರ್ಮಾಗೆ 50 ಕೋಟಿ ಆಫರ್ ನೀಡಿದ್ರಾ ಚಂದ್ರಬಾಬು ನಾಯ್ಡು.?ರಾಮ್ ಗೋಪಾಲ್ ವರ್ಮಾಗೆ 50 ಕೋಟಿ ಆಫರ್ ನೀಡಿದ್ರಾ ಚಂದ್ರಬಾಬು ನಾಯ್ಡು.?

    ಆದರೆ, ಟಿಡಿಪಿ ಬೆದರಿಕೆಗೆ ಜಗ್ಗದ ಅರ್ ಜಿವಿ, ಚಿತ್ರವನ್ನು ಆಂಧ್ರ ಸೇರಿದಂತೆ ವಿಶ್ವದೆಲ್ಲೆಡೆ ಪೂರ್ವ ನಿಗದಿಯಂತೆ ಮಾರ್ಚ್ 29ರಂದೇ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.

    Lakshmis NTR is all set for a world wide release : RGV tweets

    ಪ್ರಕಟಣೆ: ಲಕ್ಷ್ಮೀಸ್ ಎನ್ಟಿಆರ್ ನಾಳೆ 29ರಂದು ನಿಗದಿಯಂತೆ ತೆಲಂಗಾಣ ಸೇರಿದಂತೆ ವಿಶ್ವದೆಲ್ಲೆಡೆ ಚಿತ್ರ ಬಿಡುಗಡೆಯಾಗಲಿದೆ. ಆಂಧ್ರಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಪ್ರಸಾದ್ ಲ್ಯಾಬಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಹೆಚ್ಚಿನ ವಿವರ ನೀಡುತ್ತೇನೆ ಎಂದಿದ್ದಾರೆ.

    ಆರ್ ಜಿವಿ ಲಕ್ಷ್ಮೀಸ್ ಎನ್ಟಿಆರ್ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ನಿಷೇಧ!

    ಯೂಟ್ಯೂಬಿನಲ್ಲಿ ರಿಲೀಸ್ ಮಾಡಿ ಎಂಬ ಸಲಹೆಗಳು ಬಂದಿವೆ. ಆದರೆ, ಕೋರ್ಟ್ ಆದೇಶದ ಪ್ರಕಾರ ವೆಬ್ ಹಾಗೂ ಇಂಟರ್ನೆಟ್ ನಲ್ಲಿ ಪ್ರಸಾರಕ್ಕೂ ನಿರ್ಬಂಧವಿದೆ.

    English summary
    Controversial director Ramgopal Varma's latest film Lakshmi's NTR is all set for a world wide release except in Andhra Pradesh. TDP leaders had approached the high court seeking stay on this controversial movie during this election season. TDP feels that it may showsome impact on the new generation voters as it was anti to CM Chandra babu.
    Friday, March 29, 2019, 8:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X