'ಲಕ್ಷ್ಮಿಸ್ ಎನ್ ಟಿ ಆರ್' ಸಕ್ಸಸ್ ಪಾರ್ಟಿ ಮಾಡಿದ ವರ್ಮ ಅಂಡ್ ಟೀಂ
ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೆ ದೊಡ್ಡ ಸವಾಲನ್ನು ಸ್ವೀಕರಿಸಿ ಗೆದ್ದಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ಅವರ 'ಲಕ್ಷ್ಮಿಸ್ ಎನ್ ಟಿ ಆರ್' ಸಿನಿಮಾ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.
ಸಿನಿಮಾ ಪ್ರತಿಕ್ರಿಯೆ ಕಂಡು ಇಡೀ ತಂಡ ಖುಷಿಯಾಗಿದೆ. ಪಾರ್ಟಿ ಮಾಡುವ ಮೂಲಕ ಸಂತಸ ಹಂಚಿಕೊಂಡಿದೆ 'ಲಕ್ಷ್ಮಿಸ್ ಎನ್ ಟಿ ಆರ್' ಚಿತ್ರತಂಡ ಇತ್ತೀಚಿಗಷ್ಟೆ ಜೊತೆಗೂಡಿ ಪಾರ್ಟಿ ಮಾಡಿದೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮ ಆಯೋಜಿಸಿದ್ದ ಈ ಪಾರ್ಟಿಗೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾದ ನಾಯಕ ಪಿ ವಿಜಯ ಕುಮಾರ್, ನಾಯಕಿ ಯಜ್ಞಾಶೆಟ್ಟಿ ಸೇರಿದಂತೆ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಪಾರ್ಟಿಯ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ವರ್ಮ ಹಂಚಿಕೊಂಡಿದ್ದರು.

ಸಿನಿಮಾ ಹೇಗಿದೆ ?
ಆಂಧ್ರ ಪ್ರದೇಶ ರಾಜಕೀಯದಲ್ಲಿ ಇದು ಸಂಚಲನ. ಚಂದ್ರಬಾಬು ನಾಯ್ಡು ಅವರನ್ನ ಗುರಿಯಾಗಿಸಿಕೊಂಡು ಮಾಡಿರುವ ಸಿನಿಮಾ. ತೆಲುಗು ಜನರು ಕಂಡ ಅತ್ಯುನ್ನತ ನಟ ಮತ್ತು ರಾಜಕಾರಣಿಯ ಜೀವನವನ್ನ ಮುಗಿಸಲು ಹೇಗೆ ವಂಚನೆ ಮಾಡಲಾಗಿದೆ ಎಂಬುದು ಕಥೆ. ವಾಸ್ತವ ವಿಷ್ಯಗಳನ್ನ ಪಕ್ಕಕ್ಕಿಟ್ಟು ಸಿನಿಮಾ ದೃಷ್ಟಿಯಲ್ಲಿ ನೋಡಿದ್ರೆ ರಾಮ್ ಗೋಪಾಲ್ ವರ್ಮಾ ಅವರ ಕೆಲಸ ನಿಜಕ್ಕೂ ಇಷ್ಟ ಆಗುತ್ತೆ. ವರ್ಮಾ ಸಿನಿಮಾಗಳನ್ನ ಇಷ್ಟು ಪಡುವ ಪ್ರೇಕ್ಷಕರಿಗೆ ಇದು ಥ್ರಿಲ್ ನೀಡುತ್ತೆ.


Click it and Unblock the Notifications











