ಮಾರ್ಚ್ 22 ರಂದು ಆಂಧ್ರದಲ್ಲಿ ಆರ್.ಜಿ.ವಿ 'ಸರ್ಜಿಕಲ್ ಸ್ಟ್ರೈಕ್'.!

ತೆಲುಗು ಲೆಜೆಂಡ್ ಬಾಲಕೃಷ್ಣ ಅಭಿನಯದಲ್ಲಿ ಎನ್.ಟಿ.ಆರ್ ಬಯೋಪಿಕ್ ತೆರೆಕಂಡಿತ್ತು. ಕಥಾನಾಯಕಡು ಹಾಗೂ ಮಹಾನಾಯಕಡು ಎಂದು ಎರಡು ಭಾಗಗಳಲ್ಲಿ ಎನ್.ಟಿ.ಆರ್ ಜೀವನವನ್ನ ತೆರೆಮೇಲೆ ತರಲಾಗಿತ್ತು. ಈ ಎರಡು ಚಿತ್ರಗಳಲ್ಲಿ ಎನ್.ಟಿ.ಆರ್ ಅವರ ಸಿನಿ ಜರ್ನಿ ಮತ್ತು ರಾಜಕೀಯ ಜರ್ನಿಯನ್ನ ಪಾಸಿಟೀವ್ ಆಗಿಯೇ ತೋರಿಸಲಾಗಿತ್ತು.

ಆದ್ರೆ, ಯಾರಿಗೂ ಗೊತ್ತಿಲ್ಲದ ಮತ್ತು ಎನ್.ಟಿ.ಆರ್ ಅವರ ಬೆನ್ನಿಗೆ ಚೂರಿ ಹಾಕಿದ ಕಥೆಯನ್ನ ರಾಮ್ ಗೋಪಾಲ್ ವರ್ಮಾ ಬಿಚ್ಚಿಡುತ್ತಿದ್ದಾರೆ. ಲಕ್ಷ್ಮೀಸ್ ಎನ್.ಟಿ.ಆರ್ ಎಂಬ ಹೆಸರಿನಲ್ಲಿ ಎನ್.ಟಿ.ಆರ್ ಬಯೋಪಿಕ್ ಸಿನಿಮಾ ಮಾಡಿದ್ದು, ಈ ಚಿತ್ರದಲ್ಲಿ ಅನೇಕ ಸತ್ಯಘಟನೆಗಳನ್ನ ಬಹಿರಂಗಪಡಿಸಲಿದ್ದಾರಂತೆ.

ಈ ಚಿತ್ರದ ಆಗಮನಕ್ಕೆ ಈಗ ದಿನಾಂಕ ಪ್ರಕಟವಾಗಿದ್ದು, ಮಾರ್ಚ್ 22 ರಂದು ಬೆಳ್ಳಿತೆರೆಯ ಮೇಲೆ ಬರಲಿದೆ. ಸ್ವತಃ ಆರ್.ಜಿ.ವಿ ಅವರೇ ಹೇಳಿಕೊಂಡಿರುವ ಪ್ರಕಾರ, ಇದು ಎನ್.ಟಿ.ಆರ್ ಗೆ ನಂಬಿಕೆ ದ್ರೋಹ ಮಾಡಿದವರು ಕಥೆ, ಜೊತೆಯಲ್ಲೆ ಇದ್ದ ಮೋಸ ಮಾಡಿದವರ ಕಥೆ, ಕುಟುಂಬದವರಿಂದ ಆದ ಅನ್ಯಾಯದ ಕಥೆ ಎಂದು ಈಗಾಗಲೇ ಭಾರಿ ಕುತೂಹಲ ಮೂಡಿಸಿದ್ದಾರೆ.

Lakshmis NTR movie will hit the screens on March 22nd

ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನ ಟಾರ್ಗೆಟ್ ಮಾಡಿರುವ ವರ್ಮಾ, ಈ ಚಿತ್ರದಲ್ಲಿ ಯಾವುದೋ ಸತ್ಯ ಹೇಳಲು ಪ್ರಯತ್ನ ಪಟ್ಟಿದ್ದಾರೆ.

ಎನ್.ಟಿ.ಆರ್ ಎರಡನೇ ಪತ್ನಿ ಲಕ್ಷ್ಮೀ ಅವರ ಆಗಮನದ ಬಳಿಕ ಎನ್.ಟಿ.ಆರ್ ಜೀವನದಲ್ಲಿ ನಡೆದ ವಿದ್ಯಮಾನಗಳ ಸುತ್ತ ಸಿನಿಮಾ ಮಾಡಿದ್ದು, ಈ ಚಿತ್ರಕ್ಕೆ ಸ್ವತಃ ಲಕ್ಷ್ಮೀ ಅವರು ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ.

Lakshmis NTR movie will hit the screens on March 22nd

ಆದ್ರೆ, ಆಂಧ್ರಪ್ರದೇಶದಲ್ಲಿ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ವಿರೋಧ ಕೂಡ ಇದೆ. ಈ ವಿರೋಧದ ನಡುವೆಯೂ ರಾಮ್ ಗೋಪಾಲ್ ವರ್ಮಾ ಈಗ ಸರ್ಜಿಕಲ್ ಸ್ಟ್ರೈಕ್ ಮಾಡಲು ಸಜ್ಜಾಗಿದ್ದಾರೆ. ಇದರಲ್ಲಿ ಯಶಸ್ಸು ಕಾಣ್ತಾರಾ? ಕಾದುನೋಡಬೇಕು.

More from Filmibeat

English summary
Ram Gopal Varma directed Lakshmi's NTR movie will hit the screens on March 22nd. The film is produced by Rakesh Reddy and Deepthi Balagiri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X