ಎನ್.ಟಿ.ಆರ್ ಜೀವನದ ಕಠೋರ ಸತ್ಯಗಳನ್ನ ಬಯಲು ಮಾಡಿದ 'ಲಕ್ಷ್ಮೀಸ್' ಟ್ರೈಲರ್
ದಕ್ಷಿಣ ಭಾರತದ ಬಹುನಿರೀಕ್ಷೆ ಚಿತ್ರ ಲಕ್ಷ್ಮೀಸ್ ಎನ್.ಟಿ.ಆರ್ ಟ್ರೈಲರ್ ರಿಲೀಸ್ ಆಗಿದ್ದು, ಇಡೀ ಎನ್.ಟಿ.ಆರ್ ಕುಟುಂಬ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರು ಬಾಬು ನಾಯ್ಡುಗೆ ಟೆಂಕ್ಷನ್ ತಂದಿದೆ.
ಆರಂಭದಿಂದಲೂ ವಿವಾದಾತ್ಮಕ ಸಿನಿಮಾ ಎಂದೇ ಗುರುತಿಸಿಕೊಳ್ತಿರುವ ಈ ಚಿತ್ರವನ್ನ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ. ಎನ್.ಟಿ.ಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಆಗಮನದ ನಂತರ ಎನ್.ಟಿ.ಆರ್ ಜೀವನ ಹಾಗು ತೆಲುಗು ದೇಶ ಪಕ್ಷದಲ್ಲಿ ಆದ ಘಟನೆಗಳನ್ನ ಸಿನಿಮಾ ಮಾಡಿರುವ ವರ್ಮಾ, ಮೋಸದಿಂದ ಜೊತೆಯಲ್ಲಿದ್ದೇ ಎನ್.ಟಿ.ಆರ್ ದ್ರೋಹ ಬಗೆದವರ ಕಥೆ ಇದು ಎಂದು ಹೇಳಿದ್ದರು.
ಈಗ ಅದರಂತೆ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಈ ಟ್ರೈಲರ್ ನೋಡಿ ಎನ್.ಟಿ.ಆರ್ ಪತ್ನಿ ಲಕ್ಷ್ಮಿ ಪಾರ್ವತಿ ಕಣ್ಣೀರಿಟ್ಟಿದ್ದಾರೆ. ಜೊತೆಗೆ ತಮ್ಮ ಜೀವನದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಪ್ರತಿ ಮಾತು ನನಗೆ ನೆನಪಿದೆ
''ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಗಳು ಈ ಟ್ರೈಲರ್ ನಲ್ಲಿ ಕಾಣ್ತಿದೆ. ಪ್ರತಿ ಮಾತುಗಳು ನನಗೆ ನೆನಪಿದೆ. ಈ ಚಿತ್ರ ವಾಸ್ತಕ್ಕೆ ತುಂಬಾ ಹತ್ತರವಾಗಿದೆ. ನೈಜವಾಗಿ ಮೂಡಿಬಂದಿದೆ ಎಂಬುದು ಈ ಟ್ರೈಲರ್ ನೋಡಿದ್ರೆ ಗೊತ್ತಾಗ್ತಿದೆ. ನನ್ನ ಬಳಿ ಒಂದೇ ಒಂದು ವಿಷ್ಯದ ಬಗ್ಗೆಯೂ ಮಾತನಾಡದ ವರ್ಮಾ ಇಷ್ಟು ಸತ್ಯವಾಗಿ ಸಿನಿಮಾ ಮಾಡಿದ್ದಾರೆ. ನಿಜಕ್ಕೂ ಆಶ್ಚರ್ಯ ತಂದಿದೆ'' ಎಂದು ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.

ಮನೆ ಕೆಲಸದವರ ಬಳಿ ಮಾಹಿತಿ
ಈ ಚಿತ್ರದ ಕುರಿತು ಲಕ್ಷ್ಮಿ ಪಾರ್ವತಿ ಬಳಿ ಯಾವ ವಿಷ್ಯವನ್ನ ನಾನು ಕೇಳುವುದಿಲ್ಲ ಎಂದು ಹೇಳಿದ್ದ ವರ್ಮಾ, ಎನ್.ಟಿ.ಆರ್ ಬಳಿ ಕೆಲಸ ಮಾಡ್ತಿದ್ದ ಅಧಿಕಾರಿಗಳು, ಅವರ ಮನೆಯಲ್ಲಿದ್ದ ಕೆಲಸಗಾರರು, ಅವರ ಜೊತೆಯಲ್ಲಿದ್ದ ವ್ಯಕ್ತಿಗಳನ್ನ ಸಂಪರ್ಕ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಲಕ್ಷ್ಮಿ ಪಾರ್ವತಿ ತಿಳಿಸಿದ್ದಾರೆ.

ಕುಟುಂಬದ ಜೊತೆ ಮಾತನಾಡಿದ್ರು
''ನನ್ನ ಮದುವೆ ಆಗುವ ಬಗ್ಗೆ ಸ್ವತಃ ಎನ್.ಟಿ.ಆರ್ ಅವರೇ ಕುಟುಂಬದ ಜೊತೆ ಎರಡು ಸಲ ಚರ್ಚೆ ಮಾಡಿದ್ರು. ಎನ್.ಟಿ.ಆರ್ ಮಗ ಹರಿಕೃಷ್ಣ ಒಪ್ಪಿಕೊಂಡಿಲ್ಲ. ಅವರ ಹೆಣ್ಣು ಮಕ್ಕಳು ಕೂಡ ಒಪ್ಪಿಕೊಂಡಿಲ್ಲ. ನನ್ನ ಮದುವೆಯಿಂದ ನಿಮ್ಮ ಗೌರವಕ್ಕೆ ಯಾವುದೇ ಧಕ್ಕೆಯಾಗಲ್ಲ ಎಂದು ಎಷ್ಟೇ ಹೇಳಿದ್ರು ಅವರ ಕುಟುಂಬಸ್ಥರು ಒಪ್ಪಲಿಲ್ಲ. ಈ ಎಲ್ಲ ವಿಷ್ಯಗಳನ್ನ ವರ್ಮಾ ವಾಸ್ತವವಾಗಿ ತೋರಿಸಿದ್ದಾರೆ'' ಎಂದು ಕಣ್ಣೀರಿಟ್ಟಿದ್ದಾರೆ.

ಚಂದ್ರ ಬಾಬು ನಾಯ್ಡು ವಿಲನ್
ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರಮುಖ ಪಾತ್ರವಾಗಿದೆ. ಎನ್.ಟಿ.ಆರ್ ಗೆ ದ್ರೋಹ ಮಾಡಿದ್ರು ಎಂದು ಈ ಸಿನಿಮಾದ ಮೂಲಕ ತೋರಿಸುವ ಪ್ರಯತ್ನ ಆಗ್ತಿದೆ. ಇದಕ್ಕೆ ಟ್ರೈಲರ್ ಕೂಡ ಪುಷ್ಠಿ ನೀಡಿದೆ. ಬಹುಶಃ ಈ ಟ್ರೈಲರ್ ತೆಲುಗು ಇಂಡಸ್ಟ್ರಿಯಲ್ಲಿ ಮತ್ತಷ್ಟು ದೊಡ್ಡ ಸಂಚಲನ ಸೃಷ್ಟಿಸುವ ಎಲ್ಲ ಲಕ್ಷಣಗಳಿವೆ.


Click it and Unblock the Notifications