'ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ'

Recommended Video

KGF Movie: ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ' | FILMIBEAT KANNADA

'ಕೆಜಿಎಫ್' ಚಿತ್ರದ ನಂತರ ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗ್ತಿದೆ. ಕನ್ನಡದ ಚಿತ್ರಗಳು ಹೊರರಾಜ್ಯದಲ್ಲಿ ಮಿಂಚಲು ಮುನ್ನುಗ್ಗುತ್ತಿದೆ. ಹೌದು, ಕೆಜಿಎಫ್ ಐದು ಭಾಷೆಯಲ್ಲಿ ಅಬ್ಬರಿಸಿತ್ತು. ಇದೀಗ, ಲಂಬೋದರ ಕನ್ನಡದ ಜೊತೆಗೆ ಪರಭಾಷೆಯಲ್ಲೂ ತೆರೆಕಾಣುತ್ತಿದೆ.

ಜನವರಿ 11 ರಂದು ಬಿಡುಗಡೆಯಾಗಲು ಸಜ್ಜಾಗಿರುವ ಲಂಬೋದರ ತೆಲುಗಿನಲ್ಲೂ ರಿಲೀಸ್ ಆಗ್ತಿದೆಯಂತೆ. ಈಗಾಗಲೇ ತೆಲುಗಿನ ಡಬ್ಬಿಂಗ್ ಹಕ್ಕು ಸೇಲ್ ಆಗಿದ್ದು, ಟಾಲಿವುಡ್ ಪ್ರೇಕ್ಷಕರು ಲಂಬೋದರನನ್ನ ನೋಡಬಹುದು.

Lambodara movie will release in telugu

ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಮೂಲಕ ರಂಜಿಸುತ್ತಿರುವ ಲಂಬೋದರನಿಗೆ ಟಾಲಿವುಡ್ ಮೇಕರ್ಸ್ ಫಿದಾ ಆಗಿದ್ದಾರೆ. ಚಿತ್ರದ ಕಥೆ ಮತ್ತು ನಿರೂಪಣೆ ಹಾಗೂ ಮೇಕಿಂಗ್ ಸ್ಟೈಲ್ ನೋಡಿ ಈ ಸಿನಿಮಾವನ್ನ ಟಾಲಿವುಡ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

Lambodara movie will release in telugu

ಇನ್ನುಳಿದಂತೆ ಈ ಚಿತ್ರವನ್ನ ಕೆ.ಕೃಷ್ಣರಾಜ್ ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗೀಶ್ ಮತ್ತು ಆರ್,ಎಕ್ಸ್ ಸೂರಿ ಖ್ಯಾತಿಯ ಆಕಾಂಕ್ಷ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.

More from Filmibeat

English summary
Loosemada yogesh starrer Lambodara movie will release in telugu language also. the movie directed by k krishnaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X