ಜನವರಿ 11ರಂದು ಲೂಸ್ ಮಾದನ 'ಲಂಬೋದರ' ಎಂಟ್ರಿ
'ದುನಿಯಾ-2' ಚಿತ್ರದ ನಂತರ ಲೂಸ್ ಮಾದ ಯೋಗೇಶ್ ಅಭಿನಯದ ಸಿನಿಮಾ ಲಂಬೋದರ, ಜನವರಿ ತಿಂಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಟ್ರೈಲರ್ ಮೂಲಕವೇ ಭಾರಿ ಸದ್ದು ಮಾಡಿದ್ದ ಲಂಬೋದರ ಈಗ ಸಿನಿಮಾ ಮೂಲಕ ಮನರಂಜಿಸಲು ಬರ್ತಿದ್ದಾನೆ.
ಹೊಸ ವರ್ಷದ ಸಂಭ್ರಮದಲ್ಲಿರುವ ಕನ್ನಡ ಪ್ರೇಕ್ಷಕರಿಗೆ ಲಂಬೋದರ ಸಿಹಿ ಸುದ್ದಿ ನೀಡಿದ್ದು, ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಜನವರಿ 11 ರಂದು ಲಂಬೋದರ ರಿಲೀಸ್ ಆಗಲಿದೆ. ಟ್ರೈಲರ್ ಮತ್ತು ಹಾಡುಗಳು ತುಂಬಾ ಮನರಂಜನೆಯಿಂದ ಕೂಡಿದ್ದು, ಸಿದ್ಲಿಂಗು ನಂತರ ಅಂತಹದ್ದೇ ಸಿನಿಮಾ ಮೂಲಕ ಯೋಗಿ ಕಂಬ್ಯಾಕ್ ಆಗ್ತಿದ್ದಾರೆ ಎನ್ನಲಾಗಿದೆ.
ಕೆ.ಕೃಷ್ಣರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ವಿಶ್ವೇಶರ್, ರಾಘವೇಂದ್ರ ಭಟ್ ನಿರ್ಮಾಣ ಮಾಡಿದ್ದಾರೆ. ಲೂಸ್ ಮಾದ ಯೋಗಿ ನಾಯಕನಾಗಿರುವ ಈ ಚಿತ್ರದಲ್ಲಿ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.
ಸತತ ಸಿನಿಮಾಗಳ ಹಿನ್ನಡೆಯಿಂದ ಕಂಬ್ಯಾಕ್ ಆಗಲು ನಿರ್ಧರಿಸಿರುವ ಯೋಗಿ, ಲಂಬೋದರನ ಮೂಲಕ ಗೆದ್ದೆ ಗೆಲ್ಲುವೇ ಎಂಬ ಸೂತ್ರದಿಂದ ಬರ್ತಿದ್ದಾರೆ.


Click it and Unblock the Notifications











