ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಲಂಬೋದರ', ಪ್ರೇಕ್ಷಕರು ಫಿದಾ
ಜನವರಿ 11 ರಂದು ತೆರೆಮೇಲೆ 'ಲಂಬೋದರ'ನ ತರ್ಲೆ ಆಟ ಪ್ರದರ್ಶನವಾಗಲಿದೆ. ಅದಕ್ಕೂ ಮುಂಚೆ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲೇ ಫುಲ್ ಮಸ್ತಿ ಸಿಕ್ಕಿದೆ. ಹೀಗಾಗಿ, ಸಿನಿಮಾದಲ್ಲಿ ಫುಲ್ ಎಂಟರ್ ಟೈನ್ಮೆಂಟ್ ಎಂದು ಹೇಳಲಾಗ್ತಿದೆ.
ಸದ್ಯ ಲಂಬೋದರ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಐದನೇ ಸ್ಥಾನದಲ್ಲಿದ್ದು, ರಿಲೀಸ್ ಆದ ಒಂದೇ ದಿನದಲ್ಲಿ 2.2 ಲಕ್ಷ ವೀಕ್ಷಕರನ್ನ ಪಡೆದುಕೊಂಡಿದೆ.
ಇನ್ನು ಲೂಸ್ ಮಾದ ಯೋಗೇಶ್ ಅವರ ನಟನೆಗೆ ಫಿದಾ ಆಗಿರುವ ಪ್ರೇಕ್ಷಕರು ಈ ಚಿತ್ರವನ್ನ ಮಿಸ್ ಮಾಡಿಕೊಳ್ಳಬಾರದು ಎಂದು ಕಾಮೆಂಟ್ ಮಾಡ್ತಿದ್ದಾರೆ.

ಕ್ಲಾಸ್, ಮಾಸ್ ಆಗಿದ್ದ ಲೂಸ್ ಮಾದ ಈ ಚಿತ್ರದಲ್ಲಿ ಸ್ವಲ್ಪ ಪೋಲಿಯಾಗಿ ಬರ್ತಿದ್ದಾರೆ. ಪೋಲಿ ಆದ್ರು ತಮ್ಮ ಹಳೆ ಖದರ್ ರೂಢಿಸಿಕೊಂಡೇ ಎಂಟ್ರಿ ಕೊಡ್ತಿದ್ದಾರೆ. ಸದ್ಯ, ಲಂಬೋದರನ ಮೇಲೆ ಹೆಚ್ಚು ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆ ಟ್ರೈಲರ್ ಮೋಡಿ ಮಾಡಿದೆ.
ಇನ್ನುಳಿದಂತೆ ಈ ಚಿತ್ರವನ್ನ ಕೆ.ಕೃಷ್ಣರಾಜ್ ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗೀಶ್ ಮತ್ತು ಆರ್,ಎಕ್ಸ್ ಸೂರಿ ಖ್ಯಾತಿಯ ಆಕಾಂಕ್ಷ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.


Click it and Unblock the Notifications











