ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ; ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ

ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ ಬಂದಿದ್ದು ಈ ಸಂಬಂಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ನಟ ಮಯೂರ್, ಎಂ ಎಸ್ ಸುಬ್ರಹ್ಮಣ್ಯಂ ಎಂಬುವವರಿಂದ ಬೇಗೂರ್ ಬಳಿಯ ಪರಂಗಿಪಾಳ್ಯದ ಬಳಿ ಸೈಟ್ ಖರೀದಿಗೆ ಮುಂದಾಗಿದ್ದು, ಇದೀಗ ರಿಜಿಸ್ಟರ್ ಮಾಡಿಸಿಕೊಂಡಿರುವ ಸೈಟ್ ಗೆ ಅಪರಿಚಿತರು ಕಾಂಪೌಂಡ್ ಹಾಕಿಕೊಂಡಿರುವುದಲ್ಲದೆ, ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ಜನವರಿ 22ರಂದು ಗೆಳೆಯನೊಂದಿಗೆ ಸೈಟ್ ನೋಡಲು ಪರಂಗಿಪಾಳ್ಯಕ್ಕೆ ತೆರಳಿದ್ದಾಗ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅನಂತರೆಡ್ಡಿ ಎನ್ನುವವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನಿಜ ದಾಖಲಾತಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ನಟ ಮಯೂರ್ ಪಟೇಲ್ ಆರೋಪಿಸಿದ್ದಾರೆ.

Land Dispute: Actor Mayur Patel gets Life Threatening Call

ಈ ಸಂಬಂಧ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ಅನಂತರೆಡ್ಡಿ ಮತ್ತು ಮಂಜುನಾಥ್ ರೆಡ್ಡಿ ವಿರುದ್ಧ ಮಯೂರ್ ಪಟೇಲ್ ದೂರು ನೀಡಿದ್ದಾರೆ. 'ಅನಂತರೆಡ್ಡಿಯನ್ನು ಎಂಬುವವರನ್ನು ಸಂಪರ್ಕಿಸಿದಾಗ ಆ ಜಾಗ ನಾನು ನನ್ನ ಮಗನ ಹೆಸರಿಗೆ ಮಾಡಿದ್ದೇನೆ. ಅಲ್ಲಿಗೆ ಯಾರನ್ನು ಬರಲು ಬಿಡಲ್ಲ. ನಾನು ಆ ಜಾಗಕ್ಕೆ ಬಾ, ಆಗ ನಾವು ಯಾರು ಎಂದು ಗೊತ್ತಾಗುತ್ತೆ ಎಂದು ಬೆದರಿಕೆ ಹಾಕಿದ್ದಾರೆ' ಎಂದು ಮಯೂರ್ ದೂರಿನಲ್ಲಿ ತಿಳಿಸಿದ್ದಾರೆ.

Recommended Video

ನವಗ್ರಹ ಸಿನಿಮಾ ಮಾಡೋಕೆ ವಿನೋದ್ ಪ್ರಭಾಕರ್ ಒಪ್ಪಿರ್ಲಿಲ್ಲ

More from Filmibeat

English summary
Land Dispute: Actor Mayur Patel gets Life Threatening Call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X