twitter
    For Quick Alerts
    ALLOW NOTIFICATIONS  
    For Daily Alerts

    ಜಮೀನು ವಿವಾದ: ಕೂತು ಬಗೆಹರಿಸಿಕೊಂಡ ಯಶ್ ಕುಟುಂಬ ಮತ್ತು ಗ್ರಾಮಸ್ಥರು

    |

    ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಜಮೀನಿಗೆ ತೆರಳುವ ರಸ್ತೆ ವಿಚಾರವಾಗಿ ಹಾಸನ ತಾಲ್ಲೂಕಿನ ತಿಮ್ಲಾಪುರ ಗ್ರಾಮಸ್ಥರು ಹಾಗೂ ಯಶ್ ಕುಟುಂಬದೊಂದಿಗೆ ಮಾರ್ಚ್ 9 ರಂದು ನಡೆದಿದ್ದ ಗಲಾಟೆ ಸುಖಾಂತ್ಯ ಕಂಡಿದೆ.

    Recommended Video

    ಯಶ್ ಬದಲು ಆಗಮಿಸಿದ ಮ್ಯಾನೇಜರ್ | Yash | Filmibeat Kannada

    ರೈತರಿಗೆ ನಾವು ಅನ್ಯಾಯ ಮಾಡಲ್ಲ ಎಂದು ಯಶ್ ಹೇಳಿದ್ದರು. ಅದರಂತೆ ಗ್ರಾಮಕ್ಕೆ ತಮ್ಮ ಮ್ಯಾನೇಜರ್ ಕಳುಹಿಸಿದ್ದು ಅವರು ಗ್ರಾಮಸ್ಥರೊಂದಿಗೆ ಚರ್ಚಿಸಿ ರಸ್ತೆ ಸಮಸ್ಯೆ ಬಗೆಹರಿದಿದೆ.

    ರಸ್ತೆ ಗಲಾಟೆ: ನಾವು ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ ಎಂದ ಯಶ್ರಸ್ತೆ ಗಲಾಟೆ: ನಾವು ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ ಎಂದ ಯಶ್

    ಹಾಸನ ತಾಲ್ಲೂಕಿನ ತಿಮ್ಲಾಪುರ ಬಳಿ ರಾಂಕಿಂಗ್ ಸ್ಟಾರ್ ಯಶ್ ಜಮೀನು ಖರೀದಿಸಿದ್ದಾರೆ. ಈ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ವಿಚಾರವಾಗಿ ಯಶ್ ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದರು. ನಂತರ ಈ ರಸ್ತೆ ವಿವಾದ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

    Land Dispute Between Yash Family And Villagers Solved

    ಮಾರ್ಚ್ 9 ರಂದು ರಾಕಿ ಭಾಯ್ ಖುದ್ದು ಪೊಲೀಸ್ ಠಾಣೆಗೆ ಬಂದು ಗ್ರಾಮಸ್ಥರ ವಿರುದ್ದ ದೂರು ನೀಡಿದ್ದರು. ಗ್ರಾಮಸ್ಥರಾದ ರಮೇಶ್ ಹಾಗೂ ಕೃಷ್ಣೇಗೌಡ ಯಶ್ ಪೋಷಕರ ವಿರುದ್ದ ಠಾಣೆಗೆ ದೂರು ನೀಡಿದ್ದರು. ಈ ವ್ಯಾಜ್ಯ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಅಧಿಕಾರಿಗಳಿಂದ ಸರ್ವೆ ಮಾಡಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಅಲ್ಲಿಯವರೆಗು ಎರಡು ಕಡೆಯವರು ಗಲಾಟೆ ಮಾಡಿಕೊಳ್ಳಬಾರದೆಂದು ದುದ್ದ ಪೊಲೀಸರು ಎರಡು ಕಡೆಯವರಿಗೂ ಸೂಚನೆ ನೀಡಿದ್ದರು.

    'ಯಶ್ ಗೆ ಧಿಕ್ಕಾರ...' ರಾಕಿಂಗ್ ಸ್ಟಾರ್ ವಿರುದ್ಧ ಗ್ರಾಮಸ್ಥರ ಆಕ್ರೋಶ'ಯಶ್ ಗೆ ಧಿಕ್ಕಾರ...' ರಾಕಿಂಗ್ ಸ್ಟಾರ್ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಇಂದು ತಿಮ್ಲಾಪುರ ಗ್ರಾಮದ ಹೊರಗಿರುವ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಎರಡು ಕಡೆಯವರು ಚರ್ಚಿಸಿ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ. ತಪ್ಪು ಮಾಹಿತಿಯಿಂದ ಯಶ್ ಪೋಷಕರೊಂದಿಗೆ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ವಾಸ್ತವಾಂಶ ತಿಳಿಸಿದ್ದಾರೆ.

    English summary
    Land dispute between Actor Yash family and villagers of Hassan.
    Tuesday, March 16, 2021, 20:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X