For Quick Alerts
  ALLOW NOTIFICATIONS  
  For Daily Alerts

  'ಯಶ್ ಗೆ ಧಿಕ್ಕಾರ...' ರಾಕಿಂಗ್ ಸ್ಟಾರ್ ವಿರುದ್ಧ ಗ್ರಾಮಸ್ಥರ ಆಕ್ರೋಶ

  |

  ಸ್ಯಾಂಡಲ್ ವುಡ್ ನಟ ಯಶ್ ಅವರ ತಾಯಿ-ತಂದೆ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಸಂಬಂಧ ರಾಕಿಂಗ್ ಸ್ಟಾರ್ ಇಂದು ಹಾಸನ ಜಿಲ್ಲೆಯ ದುದ್ದ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿದ್ದರು. ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಇಂದು (ಮಾರ್ಚ್ 9) ಬೆಳಗ್ಗೆ ವಾಗ್ವಾದ ನಡೆದಿತ್ತು.

  Recommended Video

  ರೈತ ವಿರೋಧಿ ಯಶ್ ಗೆ ಧಿಕ್ಕಾರ ಎಂದ ಗ್ರಾಮಸ್ಥರು | Filmibeat Kannada

  ಪೊಲೀಸರ ಜೊತೆ ಮಾತುಕತೆ ನಡೆಸಿದ ಬಳಿಕ ಹೊರಬಂದ ಯಶ್ ಮಾಧ್ಯಮದವರ ಜೊತೆ ಮಾತನಾಡಿ, ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಮಾಡಿಸುತ್ತಿದ್ದೇವೆ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಿದ್ದಾರೆ ಎಂದು ಗರಂ ಆಗಿದ್ದಾರೆ. ಸ್ಟೇಷನ್ ನಿಂದ ಹೊರಟ ಯಶ್ ವಿರುದ್ಧ ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದು, ಧಿಕ್ಕಾರ ಕೂಗಿದ್ದಾರೆ.

  ಪೊಲೀಸ್ ಠಾಣೆ ವಿರುದ್ಧ ಜಮಾಯಿಸಿದ್ದ ಗ್ರಾಮಸ್ಥರು

  ಪೊಲೀಸ್ ಠಾಣೆ ವಿರುದ್ಧ ಜಮಾಯಿಸಿದ್ದ ಗ್ರಾಮಸ್ಥರು

  ಪೊಲೀಸ್ ಠಾಣೆಯೊಳಗೆ ಪೊಲೀಸರೊಂದಿಗೆ ಮಾತನಾಡಿ ಹೊರಟ ಯಶ್ ವಿರುದ್ದ ತಿಮ್ಲಾಪುರ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಯಶ್ ಸ್ಟೇಷನ್ ಗೆ ಎಂಟ್ರಿ ಕೊಡುತ್ತಿದ್ದಂದೆ ಠಾಣೆ ಎದುರು ಗ್ರಾಮಸ್ಥರು ಜಮಾಯಿಸಿದ್ದರು.

  ವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ

  ಯಶ್ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮಸ್ಥರು

  ಯಶ್ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮಸ್ಥರು

  ಯಶ್ ಸ್ಟೇಷನ್ ನಿಂದ ಹೊರಡುತ್ತಿದ್ದಂತೆ ಗ್ರಾಮಸ್ಥರು ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಯಶ್ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಯಶ್ ಗೆ ಧಿಕ್ಕಾರ.. ರೈತ ವಿರೋಧಿ ಯಶ್ ಗೆ ಧಿಕ್ಕಾರ ಎಂದು ಕೂಗಿದ್ದಾರೆ.

  ರಸ್ತೆ ಗಲಾಟೆ: ನಾವು ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ ಎಂದ ಯಶ್ರಸ್ತೆ ಗಲಾಟೆ: ನಾವು ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ ಎಂದ ಯಶ್

  ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

  ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

  ಮತ್ತೊಂದು ಕಡೆ ಯಶ್ ಬೆಂಬಲಿಗರು ನೆಚ್ಚಿನ ನಟನಿಗೆ ಜೈ ಎಂದು ಕೂಗಿದ್ದಾರೆ. ಸ್ಥಳದಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ.

  ಯಶ್ ಪ್ರತಿಕ್ರಿಯೆ

  ಯಶ್ ಪ್ರತಿಕ್ರಿಯೆ

  'ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಏನೇನೋ ಮಾಡ್ತಿರುತ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಮಾತುಕತೆ ಆದರೆ ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ‌ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿಯ ಬಗ್ಗೆಯೂ ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ ಅದಕ್ಕಾಗಿ ಬಂದಿದ್ದೇನೆ' ಎಂದಿದ್ದಾರೆ.

  English summary
  Land Issue: Villagers protest against Yash in Hassan.
  Tuesday, March 9, 2021, 22:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X