ಬೆಂಗಳೂರಿನ ಮತ್ತೊಂದು ಸಿಂಗಲ್ ಥಿಯೇಟರ್ ಗೆ ಬಾಗಿಲು!
Recommended Video

ಮಲ್ಟಿಪ್ಲೆಕ್ಸ್ ಗಳ ಅಬ್ಬರವೋ, ಲಾಭ ನಷ್ಟದ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಇರುವ ಒಂದೊಂದೆ ಚಿತ್ರಮಂದಿರಗಳು ನೆಲಕ್ಕೆ ಉರುಳುತ್ತಿವೆ. ಇದೀಗ ರೆಕ್ಸ್ ಚಿತ್ರಮಂದಿರಕ್ಕೆ ಸಹ ಬೀಗ ಬೀಳಲಿದೆ.
80 ವರ್ಷದ ಇತಿಹಾಸ ಇರುವ ಥಿಯೇಟರ್ ರೆಕ್ಸ್ ಥಿಯೇಟರ್ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿದೆ. ನೂರಾರು ಸಿನಿಮಾಗಳು ಇಲ್ಲಿ ಪ್ರದರ್ಶನವಾಗಿವೆ. ಇಂತಹ ಚಿತ್ರಮಂದಿರ ಡಿಸೆಂಬರ್ 31 ರಂದು ತನ್ನ ಕೊನೆಯ ಶೋ ನಡೆಸುತ್ತಿದೆ. ಚಿತ್ರಮಂದಿರದ ಜಾಗದಲ್ಲಿ ಮಾಲ್ ಮಾಡುವ ಸಲುವಾಗಿ ಸಿಂಗಲ್ ಥಿಯೇಟರ್ ಮುಚ್ಚಲು ನಿರ್ಧಾರ ಮಾಡಲಾಗಿದೆ.
ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳು ಇಲ್ಲಿ ಹೆಚ್ಚು ಪ್ರದರ್ಶನ ಆಗುತ್ತಿತ್ತು. ಬಹು ನಿರೀಕ್ಷಿತ ಸಿನಿಮಾಗಳು ಇದ್ದರೆ ಜನ ಬೆಳಗ್ಗೆ ಬಂದು ಸಾಲುಗಟ್ಟಿ ಈ ಚಿತ್ರಮಂದಿರದ ಮುಂದೆ ನಿಲ್ಲುತ್ತಿದ್ದರು.

ರೆಕ್ಸ್ ಥಿಯೇಟರ್ ನಲ್ಲಿ ಕಳೆದ ವಾರ ರಜನಿಕಾಂತ್ ನಟನೆಯ '2.0' ಸಿನಿಮಾ ತೆರೆಕಂಡಿತ್ತು. ಡಿಸೆಂಬರ್ 21 ರಂದು ಕನ್ನಡದ 'ಕೆಜಿಎಫ್' ಮತ್ತು ಜೀರೋ ಸಿನಿಮಾ ಇಲ್ಲಿಯೂ ತೆರೆಗೆ ಬರಲಿದ್ದು, ಈ ಚಿತ್ರಗಳ ಮೂಲಕ ತನ್ನ ಪ್ರದರ್ಶನ ಕೊನೆಯಾಗಲಿದೆ.


Click it and Unblock the Notifications











