ಮಂಡ್ಯ ಜನರ ಹೃದಯ ಸ್ಪರ್ಶಿಸಿದ ಅಭಿಷೇಕ್ ಕೆಲಸ
ತಮ್ಮ ಸಾಧನೆಯ ಮೂಲಕ ಮಂಡ್ಯ ಹೆಸರನ್ನು ಇಂಡಿಯಾದ ತುಂಬ ತಲುಪಿಸಿದ್ದ ಅಂಬರೀಶ್, ಸಾವಿನ ನಂತರವೂ ಮಂಡ್ಯದ ಮಣ್ಣಿನ ಋಣ ತೀರಿಸಿದ್ದಾರೆ.
ಮಂಡ್ಯದಲ್ಲಿ ಅಂಬರೀಶ್ ಮೃತ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅಲ್ಲಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ ಮಾಡುವ ಮುನ್ನ ಮಂಡ್ಯದ ಮಣ್ಣಿನ ಸ್ಪರ್ಶವನ್ನ ಅವರ ದೇಹಕ್ಕೆ ಮಾಡಲಾಯಿತು.
ಅಂಬರೀಶ್ ಪುತ್ರ ಅಭಿಷೇಕ್ ಮಂಡ್ಯದ ಮಣ್ಣನ್ನು ತೆಗೆದುಕೊಂಡು ತಮ್ಮ ತಂದೆಯ ಹಣೆ, ಕಣ್ಣು ಮತ್ತು ತುಟಿಗಳಿಗೆ ಸವರಿದರು. ಇದರ ಸಾಂಕೇತಿಕ ಅರ್ಥ ಮಂಡ್ಯದ ಮಣ್ಣಿನ ಋಣ ತೀರಿಸಿದರು ಅಂತಲೇ ಅಥವಾ ಮಂಡ್ಯದ ಮಣ್ಣಿನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು ಎಂತಲೋ ತಿಳಿದಿಲ್ಲ.

ಹೌದು, ಅಭಿಷೇಕ್ ಮನಸ್ಸಿನಲ್ಲಿ ಆ ವೇಳೆ ಏನಿತ್ತು ತಿಳಿಯಲಿಲ್ಲ. ಆದರೆ, ಅಭಿಷೇಕ್ ಅವರ ಈ ಕೆಲಸ ನಿಜಕ್ಕೂ ಮಂಡ್ಯ ಜನರ ಹೃದಯವನ್ನ ಸ್ಪರ್ಶಿಸಿತು.
ಆ ಬಳಿಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಮೃತ ದೇಹದ ಅಂತ್ಯಕ್ರಿಯೆ ನಡೆಯಿತು. ಮಗ ಅಭಿಷೇಕ್, ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.


Click it and Unblock the Notifications











