ಫ್ಯಾಂಟಮ್ ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸುದೀಪ್

ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದಿನಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ಕುರಿತು ಅಭಿನಯದ ಚಕ್ರವರ್ತಿ ಸೆಟ್‌ನಿಂದ ಫೋಟೋ ಹಂಚಿಕೊಂಡಿದ್ದು, ಮಾಹಿತಿ ನೀಡಿದ್ದಾರೆ.

''ಫ್ಯಾಂಟಮ್ ಕೊನೆಯ ಹಂತದ ಶೂಟಿಂಗ್ ಆರಂಭ. ಚಿತ್ರಕ್ಕಾಗಿ ನಿರ್ಮಿಸಿರುವ ಸೆಟ್ ಮತ್ತು ಸ್ಥಳ ನನಗೆ ತುಂಬಾ ಇಷ್ಟ ಆಯ್ತು'' ಎಂದು ಸುದೀಪ್ ಟ್ವೀಟ್ ಮಾಡಿದ್ದು, ಸ್ಟೈಲಿಶ್ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.

ಹಲವು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ನವೆಂಬರ್ 22ನೇ ತಾರೀಖು ಹೈದರಾಬಾದ್‌ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿ ಸುದೀಪ್ ಬಾಯ್ ಹೇಳಿದ್ದರು.

Last schedule of Phantom begins, Sudeep Shares shooting set pic

ಇದೀಗ, ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲೇ ಎಂದು ಹೇಳಲಾಗುತ್ತಿದೆ. ಆದರೆ, ನಿಖರವಾಗಿ ಎಲ್ಲಿ ಎಂಬುದರ ಮಾಹಿತಿ ಇಲ್ಲ.

ಚಿತ್ರದಲ್ಲಿ ಸುದೀಪ್ ಪೊಲೀಸ್

ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣನ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ.

ನಿರೂಪ್ ಭಂಡಾರಿ ಸಹ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸದ್ಯದ ಲೆಕ್ಕಾಚಾರ ನೋಡಿದ್ರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಫ್ಯಾಂಟಮ್ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

More from Filmibeat

English summary
Last schedule of Phantom begins, Sudeep Shares shooting set pic. the movie directed by anup bhandari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X