ಪ್ರೇಮ್-ಧ್ರುವ 'KD' ಶೂಟಿಂಗ್ ಇನ್ನು ಮುಗ್ದಿಲ್ವಾ? ಯುಗಾದಿಗೂ ಬರಲ್ವಾ?

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ 'ಶಿವನೆ ನಿನ್ನಾಟ' ಸಾಂಗ್ ಸೂಪರ್ ಹಿಟ್ ಆಗಿ ಗಮನ ಸೆಳೆದಿದೆ. ಏನೇ ಆದರೂ ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡ್ತೀನಿ. ನಮ್ಮ ಸಿನಿಮಾ ಎದುರು ಬೇರೆ ಭಾಷೆಯ ಯಾವುದೇ ಸಿನಿಮಾ ಬಂದರೂ ವಾರ್ ಗ್ಯಾರೆಂಟಿ ಎಂದು ಕಳೆದ ವರ್ಷ ಪ್ರೇಮ್ ಹೇಳಿದ್ದರು.

ಡಿಸೆಂಬರ್ ಹೋಗಿ ಫೆಬ್ರವರಿ ಮುಗಿಯುತ್ತಾ ಬಂದರೂ 'KD' ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಇಲ್ಲ. ಸದ್ಯ ಚಿತ್ರದ ಸಾಂಗ್ ಶೂಟಿಂಗ್ ಲೊಕೇಶನ್ ಹುಡುಕೋಕೆ ಪ್ರೇಮ್ ವಿದೇಶಕ್ಕೆ ತೆರಳಿದ್ದಾರೆ. ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಾಂಗ್ ಶೂಟಿಂಗ್ ಮಾಡಲು ಚಿತ್ರತಂಡ ಮುಂದಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿ ಬರ್ತಿದೆ.

Last song shoot pending release of the Prem-Dhruva s KD will be delayed

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹಾಗಾಗಿ 'KD' ಬಗ್ಗೆಯೂ ಗೊಂದಲ ಮೂಡಿದೆ. ಆದರೂ ಪ್ರೇಮ್ ಮೇಲೆ ಭರವಸೆ ಇದೆ. ಅದೇ ಕಾರಣಕ್ಕೆ ಸಿನಿಮಾ ಕುತೂಹಲ ಮೂಡಿಸಿದೆ. ದೊಡ್ಡ ಸಿನಿಮಾಗಳಿಲ್ಲದೇ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲಿ ಸ್ಟಾರ್ ನಟನ ಹೈ ಬಜೆಟ್ ಸಿನಿಮಾ ಬಿಡುಗಡೆ ಆಗಬೇಕಾದ ಅನಿವಾರ್ಯತೆಯಿದೆ. 'KD' ಚಿತ್ರ ಬೇಗ ಬಂದಿದ್ದರೆ ಚೆನ್ನಾಗಿತ್ತು.

ನಿರ್ದೇಶಕ ಪ್ರೇಮ್ ಇನ್ನು ಕೊನೆ ಸಾಂಗ್ ಶೂಟಿಂಗ್ ಅಂತಿದ್ದಾರೆ. ಚಿತ್ರದಲ್ಲಿ ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎನ್ನಲಾಗ್ತಿದೆ. ಹಾಗಿದ್ದರೆ ಸಿನಿಮಾ ಶೂಟಿಂಗ್ ಮುಗಿಸೋದು ಯಾವಾಗ? ರಿಲೀಸ್ ಯಾವಾಗ? ಎಂದು ಸಿನಿರಸಿಕರು ತಲೆ ಕೆಡಿಸಿಕೊಳ್ಳುವಂತಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರ್ತಿದೆ.

'KD' ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ದೊಡ್ಡ ದೊಡ್ಡ ಸೆಟ್‌ಗಳನ್ನು ನಿರ್ಮಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ವಿದೇಶದಲ್ಲಿ ಸಾಂಗ್ ಶೂಟಿಂಗ್ ಪ್ಲ್ಯಾನ್ ನಡೀತಿದೆ.

Last song shoot pending release of the Prem-Dhruva s KD will be delayed

ಅರ್ಜುನ್ ಜನ್ಯಾ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಜಂಗಮ ಆಗಿ ಶಿವಣ್ಣ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಇನ್ನು ಇತ್ತೀಚೆಗೆ ಸಿನಿಮಾ ಶೂಟಿಂಗ್ ಸೆಟ್‌ಗೆ ತೆಲುಗು ಚಿತ್ರ ನಿರ್ದೇಶಕ ಪೂರಿ ಜಗನ್ನಾಥ್ ಭೇಟಿ ನೀಡಿದ್ದರು. ಅಂದರೆ 'KD' ಸಿನಿಮಾ ಶೂಟಿಂಗ್ ಇನ್ನು ನಡೆಯುತಿದ್ಯಾ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ 'KD' ಚಿತ್ರದ ಟೀಸರ್ ಬಿಟ್ಟು ಪ್ರೇಮ್ ಕುತೂಹಲ ಮೂಡಿಸಿದ್ದರು. ಇದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ರೆಟ್ರೋ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. 'KD' ಅಂದರೆ ನಾಯಕನ ಹೆಸರು ಕಾಳಿದಾಸ ಎನ್ನುವುದು ರಿವೀಲ್ ಆಗಿದೆ. ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿರುವಂತೆ ಕಾಣುತ್ತಿದೆ.

ಜೋಗಿ ಪ್ರೇಮ್ ನಿರ್ದೇಶನದ ಚಿತ್ರಗಳೂ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ ಧ್ರುವ ಹಾಗೂ ಪ್ರೇಮ್ ಇಬ್ಬರಿಗೂ 'KD' ಬಹಳ ಮುಖ್ಯವಾದ ಸಿನಿಮಾ. ಇನ್ನು ಪ್ರೇಮ್ ಬಾಲಿವುಡ್‌ಗೆ ಹೊರಟು ನಿಂತಿದ್ದಾರೆ. ಅದಕ್ಕೂ ಮುನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'KD'ಯನ್ನು ಗೆಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಯುಗಾದಿಗೆ ಸಿನಿಮಾ ಬರಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದಕ್ಕಿಂತ ತಡವಾಗುವ ಸಾಧ್ಯತೆ ದಟ್ಟವಾಗಿದೆ.

More from Filmibeat

English summary
Prem begins location hunt for KD film last song shooting
Read more about: kd prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X