ಪುನೀತ್ ರಾಜ್‌ಕುಮಾರ್ ಅಪರೂಪದ ಫೋಟೊ ವೈರಲ್: ಹಿನ್ನೆಲೆ ಏನು?
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲರ ಮನಸ್ಸಲ್ಲಿ ಮಿನುಗು ತಾರೆಯಾಗಿ ಉಳಿದು ಬಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ನಿತ್ಯವೂ ಅಭಿಮಾನಿಗಳು ನೆನೆಯುತ್ತಾರೆ. ಆ ರೀತಿಯಾಗಿ ಮಾದರಿ ಆಗಿದ್ದವರು ನಟ ಪುನೀತ್ ರಾಜ್‌ಕುಮಾರ್. ಅದೆಷ್ಟೋ ತಾಯಂದಿರು ಮಗನಿದ್ದರೆ ಅಪ್ಪು ರೀತಿ ಇರಬೇಕು ಎಂದು ಕೊಂಡಿದ್ದು ಇದೆ.
ಅಪ್ಪು ಅಗಲಿಕೆ ಅವರನ್ನು ಪ್ರೀತಿಸುವ ಹೃದಯಗಳಿಗೆ ದೊಡ್ಡ ಶಾಕ್ ಕೊಟ್ಟಿದೆ. ಆದರೆ ಅವರ ನೆನಪಿನಲ್ಲಿ, ಅವರ ಹೆಸರಲ್ಲಿ ಉತ್ತಮ ಕೆಲಸಗಳನ್ನು ಅದೆಷ್ಟೊ ಅಭಿಮಾನಿಗಳು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನನ್ನು ತಮ್ಮ ಕೆಲಸಗಳಲ್ಲಿ ಕಾಣುತ್ತಿದ್ದಾರೆ.
ಇನ್ನು ಪವರ್‌ಸ್ಟಾರ್ ಬಗ್ಗೆ ಏನಾದರೂ ಸುದ್ದಿ ಇದೆ ಎಂದರೆ ಎಲ್ಲರ ಕಿವಿ ಕೆಟ್ಟಗಾಗುತ್ತದೆ. ಗಮನ ಅತ್ತ ಸೆಳೆಯುತ್ತೆ. ಆದರೆ ಅಪ್ಪು ಬಗ್ಗೆ ಹೇಳಲು ಯಾವುದೋ ದೊಡ್ಡ ವಿಚಾರವೇ ಆಗಬೇಕಿಲ್ಲ. ಸದ್ಯ ಪುನೀತ್ ಅವರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೋಟೊ ತೆಗೆದಿದ್ದು ಪುನೀತ್ ರಾಜ್‌ಕುಮಾರ್ ತಂದೆ. ಡಾ.ರಾಜ್‌ಕುಮಾರ್ 76ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ. ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ಈ ಫೋಟೊ ಹಂಚಿಕೊಂಡ ಧೀರೆನ್ ರಾಮ್‌ಕುಮಾರ್ ಅಪ್ಪು ಮಾಮನ ಅಪರೂಪದ ಫೋಟೊ ಎಂದು ಬರೆದುಕೊಂಡಿದ್ದಾರೆ.

ಈ ಫೋಟೊದಲ್ಲಿ ನಟ ಪುನೀತ್ ರಾಜ್‌ಕುಮಾರ್ 'ಅಪ್ಪು' ಚಿತ್ರದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ, ಟೀ ಶರ್ಟ್ ತೊಟ್ಟು ಮಿಂಚಿದ್ದಾರೆ. ಅಪ್ಪು ಈ ಅಪರೂಪದ ಫೋಟೊಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇದೊಂದೇ ಫೋಟೊ ಅಲ್ಲ. ಪುನೀತ್ ರಾಜ್‌ಕುಮಾರ್ ಗಡ್ಡ ಬಿಟ್ಟ ಫೋಟೊ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ಲುಕ್‌ನಲ್ಲಿ ಅಪ್ಪು ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ಫೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Click it and Unblock the Notifications











