Puneeth Rajkumar Birthday Live: ಅಭಿಮಾನಿಗಳ ಜೊತೆ ಅಪ್ಪು ಹುಟ್ಟುಹಬ್ಬ ಆಚರಿಸಿದ ಧ್ರುವ ಸರ್ಜಾ

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ ಆಚರಣೆ ಸಡಗರ ಸಂಭ್ರಮದಿಂದ ಕೂಡಿದೆ. ಅಪ್ಪು ಅಗಲಿಕೆಯ ನೋವಿನಲ್ಲೇ ಈ ದಿನವನ್ನು ವಿಶೇಷವಾಗಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಭಿಮಾನಿಗಳು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.

ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಈಗಾಗಲೇ ಭಾರತೀಯ ಅಂಚೆ ಇಲಾಖೆ ಅಪ್ಪು ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಿದೆ. ಇನ್ನು ಅಭಿಮಾನಿಗಳು ಕಾಮನ್ ಡಿಪಿ ಡಿಸೈನ್ ಮಾಡಿ ವೈರಲ್ ಮಾಡುತ್ತಿದ್ದಾರೆ.

Late Actor Puneeth Rajkumar s 50th Birthday Live Updates fans visit samadhi

ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿದೆ. ಕುಟುಂಬ ಸದಸ್ಯರು ಕೂಡ ಬಂದು ಪೂಜೆ ಸಲ್ಲಿಸಲಿದ್ದಾರೆ. ಇನ್ನು ಮೂರು ಮುನ್ನ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಲೈವ್ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

  • Mar 17, 2025 4:13 PM
    ಅಪ್ಪು ಬರ್ತ್‌ಡೇ ನೆನೆದು ಶಿವಣ್ಣ ಭಾವುಕ

    ಅಪ್ಪು ಬರ್ತ್‌ಡೇ ಬಂತು ಅಂದರೆ ಸಾಕಷ್ಟು ನೆನಪುಗಳು ಕಾಡುತ್ತವೆ. ಚಿಕ್ಕ ವಯಸ್ಸಿನಿಂದ ಅಪ್ಪು ಹುಟ್ಟುಹಬ್ಬವನ್ನು ಅದ್ಭುತವಾಗಿ ಆಚರಣೆ ಮಾಡುತ್ತಿದ್ದೆವು. ಅದಕ್ಕೆ ಹುಟ್ಟುಹಬ್ಬ ಬಂದಾಗ ಅಪ್ಪು ಬಹಳ ನೆನಪಾಗುತ್ತಾನೆ ಎಂದು ಶಿವಣ್ಣ ಭಾವುಕರಾಗಿದ್ದಾರೆ.

  • Mar 17, 2025 2:08 PM
    ಅಪ್ಪು ಸ್ಮಾರಕಕ್ಕೆ ಅಶ್ವಿನಿ ಪೂಜೆ

    ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ಜಯಂತಿ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ. ಪುನೀತ್ ಸ್ಮಾರಕಕ್ಕೆ‌ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • Mar 17, 2025 12:29 PM
    ಅಪ್ಪು ಹುಟ್ಟುಹಬ್ಬ ಆಚರಿಸಿದ ಧ್ರುವ

    ಅಭಿಮಾನಿಗಳ ಜೊತೆ ನಟ ಧ್ರುವ ಸರ್ಜಾ ಕೇಕ್ ಕಟ್ ಮಾಡಿ ಅಪ್ಪು ಹುಟ್ಟುಹಬ್ಬ ಆಚರಿಸಿದ್ದಾರೆ. ಕೆಲ ಅಭಿಮಾನಿಗಳ ಆಕ್ಷನ್ ಪ್ರಿನ್ಸ್ ನಿವಾಸದ ಮುಂದೆ ಜಮಾಯಿಸಿ ಅಪ್ಪುಗೆ ಜೈಕಾರ ಕೂಗಿದ್ದಾರೆ. ಬಳಿಕ ಹೊರ ಬಂದ ಧ್ರುವ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ.

  • Mar 17, 2025 11:05 AM
    ಅಪ್ಪು ಸಮಾಧಿಗೆ ಕುಟುಂಸ್ಥರಿಂದ ಪೂಜೆ

    ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆಯನ್ನು ಸಲ್ಲಿಸಲಾಗಿದೆ. ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘಣ್ಣ, ಮಂಗಳ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಪ್ಪು ಮಕ್ಕಳು ಭಾಗಿಯಾಗಿದ್ದಾರೆ.

  • Mar 17, 2025 10:26 AM
    ಯುವ ರಾಜ್‌ಕುಮಾರ್ ಮಾತು

    'ಅಪ್ಪು' ಸಿನಿಮಾ ಮೊದಲು ಬಿಡುಗಡೆ ಆದಾಗ ಇದ್ದ ಕ್ರೇಜ್, ಸಂಭ್ರಮ ಈಗ ರೀ ರಿಲೀಸ್ ಅದಾಗಲೂ ಇದೆ. ದೇವಸ್ಥಾನಕ್ಕೆ ಬರುವಂತೆ ಅಭಿಮಾನಿಗಳು ಚಿಕ್ಕಪ್ಪನ ಸಮಾಧಿಗೆ ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. 'ಎಲ್ಲಿಂದ ಆರಂಭವೋ' ಸಾಂಗ್ ಶೂಟಿಂಗ್‌ಗೆ ಕುಲುಮನಾಲಿಗೆ ಹೋಗಿದ್ದಾಗ ತೆಗೆದ ಫೋಟೊ ಅದು. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ. 'ಅಪ್ಪು' ಶೂಟಿಂಗ್ ಮೊನ್ನೆ ಮೊನ್ನೆ ನಡೆದಂತೆ ಇದೆ. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ಚಿಕ್ಕಪ್ಪನನ್ನು ನೆನಯುತ್ತಾ 'ಎಕ್ಕ' ಸಾಂಗ್ ರಿಲೀಸ್ ಮಾಡುತ್ತಿದ್ದೇವೆ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.

  • Mar 17, 2025 10:22 AM
    ಮೈಸೂರಿನಲ್ಲಿ ಅರಳಿತು 135 ಅಡಿ ಉದ್ದದ ಅಪ್ಪು ಭಾವಚಿತ್ರ

    ಮೈಸೂರಿನಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಅಪ್ಪು ಭಾವ ಚಿತ್ರ ಅರಳಿದೆ. 135 ಅಡಿ ಉದ್ದ,60 ಅಡಿ ಅಗಲ 8100 ಚದರ ಅಡಿಗಳ ಬೃಹತ್ ಚಿತ್ರ ಇದಾಗಿದ್ದು,ರಾಜಕುಮಾರ ಚಿತ್ರದ ಈ ಭಾವ ಚಿತ್ರವನ್ನು 5 ಜನ ಕಲಾವಿದರು ಸತತ 7 ಗಂಟೆಗಳ ಕಾಲ ಕುಳಿತು ರಂಗೋಲಿ ಮೂಲಕ ಬಿಡಿಸಿದ್ದಾರೆ.

    ಮೈಸೂರಿನಲ್ಲಿ ಅರಳಿತು 135 ಅಡಿ ಉದ್ದದ ಅಪ್ಪು ಭಾವಚಿತ್ರ
  • Mar 17, 2025 10:12 AM
    ವಿಶೇಷ ವಿಡಿಯೋ ಹಂಚಿಕೊಂಡ ರಾಘಣ್ಣ

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ರಾಘವೇಂದ್ರ ರಾಜ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ವಿಡಿಯೋ ಹಂಚಿಕೊಂಡಿದ್ಧಾರೆ. ತಮ್ಮ ಸೂತ್ರಧಾರ ಚಿತ್ರದ ನೂರಾರು ನೆನಪಿನ ಸಂತಸ ತುಂಬಿದ ಹಾಡಿದು ಹಾಡು ಬಳಿಸಿಕೊಂಡಿರುವ ರಾಘಣ್ಣ, ಅಪ್ಪು ಅವರ ಅಪರೂಪದ ಫೋಟೊಗಳನ್ನು ವಿಡಿಯೋನಲ್ಲಿ ಉಪಯೋಗಿದ್ದಾರೆ.

  • Mar 17, 2025 9:57 AM
    ಕಂಠೀರವ ಸ್ಟುಡಿಯೋ ಬಳಿ ಜಾತ್ರೆಯ ವಾತಾವರಣ

    ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಘೋಷಿಸಿದೆ. ಅದರಂತೆ ಸ್ಫೂರ್ತಿಯ ಚಿಲುಮೆ ಅಪ್ಪು ನೆನಪಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.ಇನ್ನು ಕಂಠೀರವ ಸ್ಟುಡಿಯೋದಲ್ಲಂತೂ ಜಾತ್ರೆಯ ವಾತಾವರಣ ನಿರ್ಮಾಣ ಆಗಿದ್ದು ಅನ್ನದಾನ, ಉಚಿತ ಆರೊಗ್ಯ ತಪಾಸಣೆ, ರಕ್ತದಾನ ಶಿಬಿರ,ಸೇರಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಠೀರವ ಸ್ಟುಡಿಯೋ ಹೊರಗಡೆ ಬೀದಿ ಬದಿ ವ್ಯಾಪಾರ ಕೂಡ ಜೋರಾಗಿದೆ.

  • Mar 17, 2025 9:52 AM
    ಯುವ ಪೂಜೆ

    ರಾಘಣ್ಣನ ಕಿರಿಮಗ ಯುವರಾಜ್‌ಕುಮಾರ್ ಬೆಳಗ್ಗೆ ಚಿಕ್ಕಪ್ಪನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಸ್ಮಾರಕದ ಜೊತೆಗೆ ಅಜ್ಜಿ ಪಾರ್ವತಮ್ಮ ರಾಜ್‍ಕುಮಾರ್, ಅಜ್ಜ ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಪೂಜೆ ಮಾಡಿದ್ದಾರೆ. ಬಿಡದಿಯಲ್ಲಿ 'ಎಕ್ಕ' ಚಿತ್ರದ ಶೂಟಿಂಗ್ ಇರುವ ಕಾರಣ ಬೆಳಗ್ಗೆ ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಹೊರಟಿದ್ದಾರೆ.

  • Mar 17, 2025 9:30 AM
    ಮಾಲೆ ಧರಿಸಿ ಬಂದ ಅಭಿಮಾನಿ

    ಅಪ್ಪು ಮಾಲೆ ಧರಿಸಿ ಅಭಿಮಾನಿಯೊಬ್ಬರು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಆಗಮಿಸಿದ್ದಾರೆ. ಪುನೀತ್ ಫೋಟೊ ಜೊತೆ ಇರುಮುಡಿ ಕಟ್ಟಿಕೊಂಡು ಬಂದು ಸಮಾಧಿಗೆ ನಮನ ಸಲ್ಲಿಸಿದ್ದಾರೆ.

  • Mar 17, 2025 8:06 AM
    'ಧ್ರುವ 369' ಟೀಸರ್

    ಗ್ರಾಫಿಕ್ಸ್ ಬಳಸಿ ನಿರ್ಮಾಣ ಮಾಡುತ್ತಿರುವ 'ಧ್ರುವ 369' ಎಂಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಣ್ಣಾವ್ರು ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಜೆ.ಕೆ. ಶಂಕರ್‌ನಾಗ್ ನಿರ್ದೇಶನದ ಚಿತ್ರವನ್ನು ಶ್ರೀಕೃಷ್ಣ ಕಾಂತಿಲ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಸಾ. ರಾ ಗೋವಿಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

  • Mar 17, 2025 6:50 AM
    25 ಕೆಜಿ ಕೇಕ್

    ಅಪ್ಪು ಯೂತ್ ಬ್ರಿಗೇಡ್‌ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ, ಕಂಠೀರವ ಸ್ಟೂಡಿಯೋದಲ್ಲಿ ಕೆಲಸ ಮಾಡುವವರಿಗೆ ಬಟ್ಟೆ ವಿತರಣೆ ಮಾಡಲಾಗುತ್ತಿದೆ. ಅಪ್ಪು ಹುಟ್ಟು ಹಬ್ಬದ ಹಿನ್ನೆಲೆ‌ 25 ಕೆಜಿ ತೂಕದ ಕೇಕ್ ಕಟ್ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

  • Mar 17, 2025 6:43 AM

    ಬೆಳಗ್ಗೆ 9 ಗಂಟೆ ವೇಳೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ರಾಘಣ್ಣ, ಶಿವಣ್ಣ ಹಾಗೂ ಸಹೋದರಿಯರ ಕುಟುಂಬಸ್ಥರು ಕೂಡ ಕಂಠೀರವ ಸ್ಟುಡಿಯೋಗೆ ಬರಲಿದ್ದಾರೆ.

  • Mar 17, 2025 6:30 AM

    ದೇವಸ್ಥಾನ ಮಾದರಿಯ ಮಂಟಪದ ರೀತಿ ಪುನೀತ್ ರಾಜ್‌ಕುಮಾರ್ ಸಮಾಧಿ ಸುತ್ತಾ ಅಲಂಕಾರ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಸಾಕಷ್ಟು ಅಭಿಮಾನಿಗಳು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಕೆಲ ಅಭಿಮಾನಿಗಳು ರಾತ್ರಿಯೇ ಕಂಠೀರವ ಸ್ಟುಡಿಯೋ ಮುಂಭಾಗ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ಅಪ್ಪು ಹುಟ್ಟುಹಬ್ಬ ಆಚರಿಸಿದ್ದಾರೆ.

  • Mar 16, 2025 10:07 PM

    ಕುರುಬರಹಳ್ಳಿಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಅಭಿಮಾನಿಗಳು ನಗುವಿನ ಒಡೆಯನನ್ನು ನೆನೆದು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

  • Mar 16, 2025 10:07 PM

    50ನೇ ಜನ್ಮದಿನದ ಸ್ಮರಣಾರ್ಥ ಕಾಮನ್ ಡಿಪಿ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ತನ್ನ ಅಂತರಾತ್ಮವನ್ನು ಹೊಳೆಸಲು, ತನ್ನನ್ನು ತಾನೇ ಶಿಲ್ಪವಾಗಿಸಿದಾಗ ಮಾತ್ರ, ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಬಹುದು, ಶ್ರದ್ಧೆ ಮತ್ತು ಮಾನವೀಯತೆಯ ಕೆತ್ತನೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ, ನಿಮಗೆ 50 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

  • Mar 16, 2025 10:07 PM

    ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನು ಅಭಿಮಾನಿಗಳು ಆಯೋಜಿಸುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

More from Filmibeat

English summary
Kannada Actor Puneeth Rajkumar 50th Birth Anniversary: fans and family members pay tribute at kanteerava studio samadhi; here is live updates
Read more about: puneeth rajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X