'ಕಾಂತಾರ'-1 ಮೇಕಿಂಗ್ ವೀಡಿಯೋದಲ್ಲಿ ದಿವಂಗತ ನಟ ರಾಕೇಶ್ ಪೂಜಾರಿ ಅವರನ್ನು ಗಮನಿಸಿದ್ರಾ?

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಸ್ಪೆಷಲ್ ಮೇಕಿಂಗ್ ವೀಡಿಯೋ ಮೂಲಕ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ಟ್ರೈಲರ್ ರೀತಿ ಕಟ್ಟಿಕೊಟ್ಟಿರುವ ಮೇಕಿಂಗ್ ಝಲಕ್ ಹುಬ್ಬೇರಿಸುವಂತಿದೆ. ಇನ್ನು ವೀಡಿಯೋದ ಸಣ್ಣ ಝಲಕ್‌ನಲ್ಲಿ ದಿವಂಗತ ನಟ ರಾಕೇಶ್ ಪೂಜಾರಿ ಅವರನ್ನು ಗಮನಿಸಬಹುದು.

ಕನ್ನಡ ಕಿರುತೆರೆ ನಟ ರಾಕೇಶ್ ಪೂಜಾರಿ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಿದ್ದರು. ಧಾರಾವಾಹಿಗಳಲ್ಲಿ ಕೂಡ ಅವಕಾಶ ಪಡೆದಿದ್ದರು. 'ಕಾಂತಾರ-1' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದರು. ಮೇ 12ರಂದು ಮಧ್ಯರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅದಕ್ಕಿಂತ ಒಂದು ದಿನ ಮುನ್ನ ಅಂದರೆ ಮೇ 11ರಂದು ಸಂಜೆ ಸ್ನೇಹಿತರೊಬ್ಬರ ಮದುವೆ ಸಮಾರಂಭದಲ್ಲಿ ರಾಕೇಶ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು.

Late Actor Rakesh Poojary Appears in Kantara Chapter-1 Making Video Fans Get Emotional

ಲೋ ಬಿಪಿಯಿಂದ ರಾಕೇಶ್ ಪೂಜಾರಿ ಅವರಿಗೆ ಹೃದಯಾಘಾತವಾಗಿದ್ದಾಗಿ ವರದಿ ಆಗಿತ್ತು. 'ಕಾಂತಾರ' ಚಿತ್ರತಂಡ ಕೂಡ ಅವರ ಅಗಲಿಕೆಗೆ ಕಂಬನಿ ಮಿಡಿದಿತ್ತು. ಮಲ್ಪೆ ಸಮೀಪದ ಹೂಡೆ ಗ್ರಾಮದ ನಿವಾಸಿ ರಾಕೇಶ್ ಪೂಜಾರಿ. ಸ್ನೇಹಿತರ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು ತಕ್ಷಣ ಅವರನ್ನು ನಿಟ್ಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿರಲಿಲ್ಲ. ಹೂಡೆ ಸಮುದ್ರ ತೀರದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು.

ರಿಷಬ್ ಶೆಟ್ಟಿ ಟ್ವೀಟ್ ಮಾಡಿ "ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ.. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ" ಎಂದು ಬರೆದುಕೊಂಡಿದ್ದರು. ರಿಷಬ್ ಶೆಟ್ಟಿ ಪತ್ನಿ ಸಮೇತರಾಗಿ ರಾಕೇಶ್ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.

Late Actor Rakesh Poojary Appears in Kantara Chapter-1 Making Video Fans Get Emotional

ಕಿರುತೆರೆ ಮಾತ್ರವಲ್ಲ 'ಪೈಲ್ವಾನ್' ಹಾಗೂ 'ಇದು ಎಂತ ಲೋಕವಯ್ಯ' ಸಿನಿಮಾಗಳಲ್ಲಿ ಕೂಡ ರಾಕೇಶ್ ನಟಿಸಿದ್ದರು. 'ಕಾಂತಾರ-1' ರೀತಿಯ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಸಿನಿಮಾ ಚಿತ್ರೀಕರಣ ಸಹ ಮುಗಿಸಿದ್ದರು. ಸದ್ಯ ಮೇಕಿಂಗ್ ವೀಡಿಯೋದ ಒಂದು ಫ್ರೇಮ್‌ನಲ್ಲಿ ಅವರನ್ನು ನೋಡಬಹುದು. ಮೇಕಿಂಗ್ ವೀಡಿಯೋದ 1 ನಿಮಿಷದ 11 ಸೆಕೆಂಡ್‌ನಲ್ಲಿ ರಿಷಬ್ ಶೆಟ್ಟಿ ಬಿಲ್ಲು ಬಾಣ ಬಿಡುವ ದೃಶ್ಯ ಇದೆ. ಅದರಲ್ಲಿ ಅವರ ಪಕ್ಕದಲ್ಲಿ ಸಹ ಕಲಾವಿದರ ಗುಂಪಿನಲ್ಲಿ ತಲೆಗೆ ಬಟ್ಟೆ ಸುತ್ತಿಕೊಂಡು ರಾಕೇಶ್ ಪೂಜಾರಿ ಇರುವುದನ್ನು ನೋಡಬಹುದು.

ಕೆಲವರು ರಾಕೇಶ್ ಪೂಜಾರಿ ಇರುವ ಆ ಸನ್ನಿವೇಶದ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಮತ್ತೊಮ್ಮೆ ಅವರನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಕಾಂತಾರ-1' ಸಿನಿಮಾ ನಿರ್ಮಿಸಿದೆ. ಚಿತ್ರಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಕೆಲಸ ಮಾಡಿದ್ದಾರೆ. ರಾಮ್‌-ಲಕ್ಷ್ಮಣ್ ಮಾಸ್ಟರ್‌ ಕೂಡ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಸೆಟ್‌ಗಳ ಜೊತೆಗೆ ಒಂದಷ್ಟು ಲೈವ್ ಲೊಕೇಶನ್‌ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಬೆಟ್ಟದ ಮೇಲೆ ವಿಸ್ತಾರವಾದ ಜಾಗದಲ್ಲಿ ಭಾರೀ ಸೆಟ್‌ಗಳನ್ನು ನಿರ್ಮಿಸಿದ್ದಾರೆ. ಅದನ್ನೆಲ್ಲಾ ಮೇಕಿಂಗ್ ವೀಡಿಯೋದಲ್ಲಿ ತೋರಿಸಲಾಗಿದೆ. ಅಕ್ಟೋಬರ್ 2ರಂದು 'ಕಾಂತಾರ-1' ಸಿನಿಮಾ ಅದ್ಧೂರಿಯಾಗಿ 7 ಭಾಷೆಗಳಲ್ಲಿ ತೆರೆಗೆ ಬರಲಿದೆ.

More from Filmibeat

English summary
The making video of ‘Kantara Chapter-1’ gives an emotional glimpse of late actor Rakesh Poojary, seen in a scene with Rishab Shetty. His brief appearance has gone viral, touching the hearts of fans. The film releases on October 2nd;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X