For Quick Alerts
  ALLOW NOTIFICATIONS  
  For Daily Alerts

  'ಎಸ್‌. ಪಿ. ಸಾಂಗ್ಲಿಯಾನ- 2' ಇಂದು ರಾಜ್ಯಾದ್ಯಂತ ರೀ ರಿಲೀಸ್: ಮತ್ತೆ ತೆರೆಮೇಲೆ ಶಂಕ್ರಣ್ಣನ ಹವಾ

  |

  ದಿವಂಗಂತ ನಟ ಶಂಕರ್‌ನಾಗ್ ನಟನೆಯ ಸೂಪರ್ ಹಿಟ್ ಸಿನಿಮಾ 'ಎಸ್‌. ಪಿ ಸಾಂಗ್ಲಿಯಾನ- 2'. ದಶಕಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಈ ಸಿನಿಮಾ ಇಂದು(ನವೆಂಬರ್ 18) ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ. 32 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿದ್ದ ಚಿತ್ರವನ್ನು ಮತ್ತೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮತ್ತೆ ತೆರೆಗೆ ಬರ್ತಿದೆ. ಸ್ವರ್ಣಗಿರಿ ಮೂವೀಸ್ ಬ್ಯಾನರ್‌ನಲ್ಲಿ ಕೃಷ್ಣರಾಜು ಮತ್ತು ಸ್ನೇಹಿತರು ಈ ಸಿನಿಮಾ ನಿರ್ಮಿಸಿದ್ದ ಈ ಸಿನಿಮಾ ಶಂಕರ್‌ ನಾಗ್ ಕರಿಯರ್‌ನಲ್ಲೇ ಅತಿ ದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿತ್ತು.

  ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ 25ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಎಸ್‌. ಪಿ ಸಾಂಗ್ಲಿಯಾನ- 2' ಸಿನಿಮಾ ರೀ ರಿಲೀಸ್ ಆಗ್ತಿದೆ. ಪಿ. ನಂಜುಡಪ್ಪ ನಿರ್ದೇಶನದ ಈ ಪೊಲೀಸ್ ಡ್ರಾಮಾ ಚಿತ್ರದಲ್ಲಿ ಭವ್ಯ ನಾಯಕಿಯಾಗಿ ಮಿಂಚಿದ್ದಾರೆ. ಶಿವರಂಜಿನಿ, ದೇವರಾಜ್, ಅಶೋಕ್, ವಜ್ರಮುನಿ, ಮಾಸ್ಟರ್ ಮಂಜುನಾಥ್, ಲೋಹಿತಾಶ್ವ, ಅವಿನಾಶ್, ಮೈಸೂರು ಲೋಕೇಶ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಸಾಹಿತ್ಯ, ಸಂಗೀತ ಚಿತ್ರಕ್ಕಿದೆ. ಪೊಲೀಸ್ ಆಫೀಸರ್ ಹೆಚ್‌.ಟಿ ಸಾಂಗ್ಲಿಯಾನ ಜೀವನ ಚರಿತ್ರೆಯಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡಲಾಗಿತ್ತು.

  1988ರಲ್ಲಿ ಬಿಡುಗಡೆ ಆಗಿದ್ದ 'ಎಸ್‌. ಪಿ ಸಾಂಗ್ಲಿಯಾನ' ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ 2 ವರ್ಷಗಳ ನಂತರ ಸೀಕ್ವೆಲ್ ಪ್ಲ್ಯಾನ್ ಮಾಡಲಾಗಿತ್ತು. ಕಪಾಲಿ ಚಿತ್ರಮಂದಿರಲ್ಲಿ 9 ವಾರಕ್ಕೆ ಬರೋಬ್ಬರಿ 1,84,150 ಜನ ಸಿನಿಮಾ ನೋಡಿದ್ದರು. ಅವತ್ತಿನ ಕಾಲಕ್ಕೆ ಇದೊಂದೇ ಚಿತ್ರಮಂದಿರದಲ್ಲಿ 8 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿತ್ತು. ಕರಾಟೆ ಕಿಂಗ್ ಖಾಕಿ ಖದರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಈ ಸಿನಿಮಾ 'ಪೊಲೀಸ್ ಬೆಲ್ಟ್' ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು.

  late-actor-shankar-nag-starrer-s-p-sangliyana-part-2-re-rreleasing-grandly

  ಅಂಬರೀಶ್ 'ಎಸ್‌. ಪಿ ಸಾಂಗ್ಲಿಯಾನ' ಸರಣಿ ಸಿನಿಮಾಗಳಲ್ಲಿ ನಟಿಸಬೇಕಿತ್ತಂತೆ. ಆದರೆ ಆ ಅವಕಾಶ ಶಂಕರ್‌ ನಾಗ್‌ ಪಾಲಾಗಿತ್ತು. ಶಂಕ್ರಣ್ಣ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಕಮರ್ಷಿಯಲ್ ಆಗಿ ಕೂಡ ಸಿನಿಮಾ ಒಳ್ಳೆ ಬ್ಯುಸಿನೆಸ್ ಮಾಡಿತ್ತು. ಕೆ. ಆರ್ ಕಂಬೈನ್ಸ್ ಹಾಗೂ ಮಾರ್ಸ್ ಡಿಸ್ಟ್ರಿಬ್ಯೂಟರ್ಸ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಶಂಕ್ರಣ್ಣ ಅಗಲಿ ದಶಕಗಳೇ ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ಕಣ್ತುಂಬಿಕೊಳ್ಳು ಕಾಯುತ್ತಿದ್ದಾರೆ.

  English summary
  Late actor Shankar Nag Starrer S. P. Sangliyana Part 2 re rreleasing grandly. K R combines announces Movie re-release in select theaters on November 18th. Know More
  Friday, November 18, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X