"ಲೀಲಾವತಿ ಬೆಡ್‌ರೂಂನಲ್ಲಿದ್ದ ರಾಜ್‌ಕುಮಾರ್‌ಗೆ ಊಟ ಮಾಡಿಸುವ ಫೋಟೊ ತೋರಿಸಿದ್ರು"- ಬ್ರಹ್ಮಾಂಡ ಗುರೂಜಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಗಲಿದ ನೋವು ಇನ್ನೂ ಮಾಸಿಲ್ಲ. ಹಿರಿಯ ನಟಿಯ ಅಪಾರ ಅಭಿಮಾನಿಗಳು ಇನ್ನೂ ದು:ಖ ತಪ್ತರಾಗಿಯೇ ಇದ್ದಾರೆ. ಲೀಲಾವತಿಯವರ ಸಿನಿಮಾಗಳು ಹಾಗೂ ಸಮಾಜ ಸೇವೆಯನ್ನು ನೆನೆಯುತ್ತಿದ್ದಾರೆ.
ಲೀಲಾವತಿಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದವರು ಅವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಇಂತಹವರಲ್ಲಿ ಬಿಗ್‌ಬಾಸ್ ಖ್ಯಾತಿಯ ಬ್ರಹ್ಮಾಂಡ ಗುರೂಜಿ ಕೂಡ ಒಬ್ಬರು. ಬ್ರಹ್ಮಾಂಡ ಗುರೂಜಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾಲದಿಂದಲೂ ಲೀಲಾವತಿಯವರೊಂದಿಗೆ ಆತ್ಮೀಯ ಒಡನಾಡವನ್ನು ಇಟ್ಟುಕೊಂಡಿದ್ದರು.

ದಿವಂಗತ ಮೇರು ನಟಿಯ ಬಗ್ಗೆ ಇತ್ತೀಚೆಗೆ ಫಿಲ್ಮಿಬೀಟ್ ಕನ್ನಡಕ್ಕೆ ಬ್ರಹ್ಮಾಂಡ ಗುರೂಜಿ ಸಂದರ್ಶನ ನೀಡಿದ್ದರು. ಈ ವೇಳೆ ಲೀಲಾವತಿಯವರ ಹೊಸ ಮನೆಗೆ ಹೋದಾಗ, ಬೆಡ್ ರೂಂನಲ್ಲಿ ರಾಜ್‌ಕುಮಾರ್‌ಗೆ ಊಟ ಮಾಡಿಸುತ್ತಿರುವ ಫೋಟೊವನ್ನು ತೋರಿಸಿದ್ರು ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಈ ಸಂದರ್ಶನದ ಝಲಕ್ ಇಲ್ಲಿದೆ.
ಲೀಲಾವತಿಯವರು ಕಟ್ಟಿಸಿದ ಹೊಸ ಮನೆಗೆ ಒಮ್ಮೆ ಬ್ರಹ್ಮಾಂಡ ಗುರೂಜಿ ಹೋಗಿದ್ದರು. ಆ ವೇಳೆ ಲೀಲಾವತಿಯವರು ನೀಡಿದ ಪ್ರೀತಿ, ವಾತ್ಸಲ್ಯದ ಬಗ್ಗೆ ಹೇಳಿಕೊಂಡಿದ್ದಾರೆ. "ಮನುಷ್ಯನಿಗೇನು ಅಂದ್ರೆ, ಮನುಷತ್ವ ಮುಖ್ಯ. ಲೀಲಾವತಿಯವರಿಗೆ ಆತ್ಮೀಯತೆ ಜಾಸ್ತಿ ಇಂಪಾರ್ಟೆಂಟ್. ಡಾಮಿನೇಷನ್ ಜಾಸ್ತಿ ಇತ್ತು. ಪ್ರೀತಿ ವಾತ್ಸಲ್ಯ ಜಾಸ್ತಿ ಇರಬೇಕು ಅಂತಿತ್ತು. ಅದಕ್ಕೆ ಮಗನನ್ನೇ ಹೆಚ್ಚಾಗಿ ಜೊತೆಯಲ್ಲೇ ಇಟ್ಟುಕೊಂಡುಬಿಟ್ಟರು. ಅವನನ್ನು ಸ್ವಲ್ಪ ಫ್ರೀ ಬಿಟ್ಟಿದ್ದರೆ, ಅವನು ಧೈರ್ಯವಾಗಿರುತ್ತಿದ್ದನೋ ಏನೋ? ಏನಾಗಿದೆ ವಿನೋದ್‌ಗೆ ಧೈರ್ಯವಿಲ್ಲ." ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಬೆಡ್‌ರೂಂನಲ್ಲಿದ್ದ ರಾಜ್‌ಕುಮಾರ್‌ಗೆ ಊಟ ಮಾಡಿಸುವ ಫೋಟೊವನ್ನು ತೋರಿಸಿದ್ದರು ಎಂದಿದ್ದಾರೆ. "ಹೊಸ ಮನೆಗೆ ಹೋದ್ಮೇಲೂ ಅವಾರ್ಡ್‌ಗಳನ್ನು ತೋರಿಸಿದ್ರು. ಬೆಡ್ ರೂಮ್‌ನಲ್ಲಿ ರಾಜ್‌ಕುಮಾರ್‌ಗೆ ಊಟ ಮಾಡಿಸುತ್ತಿರುವ ಫೋಟೊವನ್ನು ತೋರಿಸಿದ್ರು. ಎಷ್ಟು ಚೆನ್ನಾಗಿದೆ. ಅದನ್ನು ನೀವೇನಾದರೂ ನೋಡಿದ್ರೆ, ಅಯ್ಯೋ ರಾಜ್‌ಕುಮಾರ್ ಅನ್ನು ಎಷ್ಟು ಪ್ರೀತಿ ಮಾಡುತ್ತಿದ್ರು ಅಂತ ಹೇಳತಕ್ಕಂತಹದ್ದು. ಪುಟಾಣಿ ಮಗುವನ್ನು ಇಟ್ಟುಕೊಂಡು, ರಾಜ್‌ಕುಮಾರ್ ಫ್ಯಾಮಿಲಿಯನ್ನು ಲವ್ ಮಾಡಿಕೊಂಡು ಎಲ್ಲರನ್ನೂ ಬಹಳ ವಿಶೇಷವಾಗಿ ನೋಡುತ್ತಾರೆ." ಎಂದು ಹೇಳಿದ್ದಾರೆ.

ಅಮ್ಮನ್ನನ್ನು ಕಳೆದುಕೊಂಡು ವಿನೋದ್ ರಾಜ್‌ಗೆ ಏನು ಮಾಡಬೇಕು ಅಂತಾನೇ ತೋಚುತ್ತಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. "ಇವತ್ತು ವಿನೋದ್‌ಗೆ ಹೆಂಡ್ತಿ ಮಗ ಇದ್ದರೂ ಸಹ, ಏನು ಮಾಡೋದು..? ಅವರ ಜೊತೆ ಹೇಗೆ ಹೋಗೋದು..? ಇವರನ್ನು ಬಿಟ್ಟು ಹೇಗೆ ಹೋಗೋದು ಅನ್ನೋದು ಕೂಡ ತಲೆ ಓಡುತ್ತಿಲ್ಲ. ಬಿಕಾಂ ಎಲ್ಲಾ ಓದಿ ಬುದ್ದಿ ಚೆನ್ನಾಗಿದೆ. ತಾಯಿ ಇಲ್ಲದೆ ಏನು ಮಾಡಬೇಕು ಅಂತ ದಿಕ್ಕು ತೋಚುತ್ತಿಲ್ಲ."
ಇಷ್ಟೇ ಅಲ್ಲದೆ, ಲೀಲಾವತಿಯವರ ಸಹಾಯ ಮನೋಭಾವದ ಬಗ್ಗೆನೂ ಹೇಳಿದ್ದಾರೆ. "ಲೀಲಾವತಿಯವರು ಅದೆಷ್ಟೋ ಲೈಟ್ ಮ್ಯಾನ್‌ಗಳಿಗೆ ಜೀವನ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ 30 ಜನ ಊಟಕ್ಕೆ ಗತಿ ಇಲ್ಲದ ಟೆಕ್ನಿಷಿಯನ್ಸ್ ಇದ್ದಾರೆ. ಆರ್ಟಿಸ್ಟ್ ಇದ್ದಾರೆ. ಅವರೆಲ್ಲ ಎವಿಎಂ ಸ್ಟುಡಿಯೋ ಹಿಂದೆ ಗುಡಿಸಲು ಕಟ್ಟಿಕೊಂಡು ಇದ್ದಾರೆ. ಅವರೆಲ್ಲರಿಗೂ ಲಿಸ್ಟ್ ಹಾಕೊಂಡು ಅವರಿಗಾಗಿ ಹಣ ಇಟ್ಟಿದ್ದಾರೆ. ಅವರಿಗೂ 5 ಸಾವಿರ ಹೋಗಲಿ, 3 ಸಾವಿರ ಹೋಗಲಿ ಅನ್ನೋ ಕೆಲಸ ಮಾಡಿದ್ದಾರೆ. ಕನ್ನಡ ಕಲಾವಿದರಿಗೂ ಪೆನ್ಷನ್ ಬರಲಿ ಅಂತ ಮಾಡಿದ್ದಾರೆ." ಎಂದು ಬ್ರಹ್ಮಾಂಡ ಹೇಳಿದ್ದಾರೆ.


Click it and Unblock the Notifications











