ಜೈಲು ಖೈದಿ ಉಡುಪಿನಲ್ಲಿ ಶಿವರಾಜ್ ಕುಮಾರ್: ಹೊಸ ಲುಕ್ ವೈರಲ್

ಇನ್ನು ಹದಿನೆಂಟು ತಿಂಗಳಲ್ಲಿ ನಟ ಶಿವರಾಜ್ ಕುಮಾರ್ ಗೆ 60 ವರ್ಷ ವಾಗುತ್ತದೆ. ಸರ್ಕಾರಿ ನೌಕರರಿಗಾದರೆ ಅದು ನಿವೃತ್ತಿ ವಯಸ್ಸು, ಆದರೆ ಶಿವರಾಜ್ ಕುಮಾರ್ ಗೆ ವಯಸ್ಸು ಎಂಬುದು ಕೇವಲ ಸಂಖ್ಯೆ ಅಷ್ಟೆ.

Recommended Video

ಶಿವಣ್ಣನ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ | Shivanna's New Look | Filmibeat Kannada

ಶಿವರಾಜ್ ಕುಮಾರ್ ಗೆ ವಯಸ್ಸಾದಷ್ಟು ಭಿನ್ನ-ವಿಭಿನ್ನ ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಸಿನಿಮಾಗಳಲ್ಲಿ ಒಂದಕ್ಕಿಂತಾ ಒಂದು ಭಿನ್ನ ಲುಕ್‌ಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ.

ಇದೀಗ ಶಿವಪ್ಪ ಎಂಬ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ತೊಡಗಿಕೊಂಡಿದ್ದು, ಈ ಸಿನಿಮಾದಲ್ಲಿ ಭಿನ್ನ ಲುಕ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಹೊಸ ಲುಕ್ ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಿತ್ರ ಸಖತ್ ವೈರಲ್ ಆಗಿದೆ.

ಜೈಲು ಖೈದಿ ಉಡುಪಿನಲ್ಲಿ ಶಿವಣ್ಣ

ಜೈಲು ಖೈದಿ ಉಡುಪಿನಲ್ಲಿ ಶಿವಣ್ಣ

ಜೈಲು ಖೈದಿಯ ಉಡುಪಿನಲ್ಲಿರುವ ಶಿವಣ್ಣನ ಫೊಟೊ ಇದಾಗಿದ್ದು. ಗುಂಗುರು ಕೂದಲು ಬಿಟ್ಟು, ತುಸುವೇ ಗಡ್ಡಧಾರಿಯಾಗಿ, ಕತ್ತಿಗೆ ಹುಲಿ ಉಗುರು ಕಟ್ಟಿಕೊಂಡಿರುವ ಶಿವಣ್ಣ ಸಖತ್ ಮಾಸ್ ಆಗಿ ಕಾಣುತ್ತಿದ್ದಾರೆ.

ಹೊಸ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹೊಸ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಿವಣ್ಣನ ಈ ಎಕ್ಸ್‌ಕ್ಲೂಸಿವ್ ಚಿತ್ರ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೂರಾರು ಸಿನಿಮಾಗಳು ಮಾಡಿದ್ದರೂ ಸಹ ಶಿವಣ್ಣ ಭಿನ್ನತೆ ಉಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೆಮ್ಮೆಯಿಂದ ಶಿವಣ್ಣನ ಹೊಸ ಲುಕ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಡಾಲಿ ಧನಂಜಯ್, ಪೃಥ್ವಿ ಅಂಬರ್ ಇದ್ದಾರೆ

ಡಾಲಿ ಧನಂಜಯ್, ಪೃಥ್ವಿ ಅಂಬರ್ ಇದ್ದಾರೆ

ತಮಿಳಿನ ವಿಜಯ್ ಮಿಲ್ಟನ್ ಅವರು ಶಿವಪ್ಪ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಡಾಲಿ ಧನಂಜಯ್, ಹೊಸ ನಟ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ. ನಾಯಕಿಯರಾಗಿ ತೆಲುಗಿನ ಅಂಜಲಿ ಹಾಗೂ ಯಶ ಶಿವಕುಮಾರ್ ಆಯ್ಕೆ ಆಗಿದ್ದಾರೆ.

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಶಿವಪ್ಪ ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶನದ 'ಕುಲದಲ್ಲಿ ಕೀಳ್ಯಾವುದೊ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಪ್ರಭುದೇವಾ ಸಹ ಶಿವಣ್ಣನ ಜೊತೆಗೆ ಇರಲಿದ್ದಾರೆ. ಅದರ ನಂತರ ತೆಲುಗಿನ ರಾಮ್ ಧಲಿಪುಡಿ ನಿರ್ದೇಶನದ ಹೆಸರಿಡದ ಸಿನಿಮಾಕ್ಕೆ ಓಕೆ ಎಂದಿದ್ದಾರೆ. ರವಿ ಅರಸು ನಿರ್ದೇಶನದ ಎಸ್‌ಆರ್‌ಕೆ, ಲಕ್ಕಿ ಗೋಪಾಲ್ ನಿರ್ದೇಶನದ ಎಸ್‌ಆರ್‌ಕೆ, ಕುಮಾರ್ ನಿರ್ದೇಶನದ ಖದರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಶಿವರಾಜ್ ಕುಮಾರ್.

More from Filmibeat

English summary
iva Rajkumar's latest look from the sets of Shivappa movie. Shiva Rajkumar's latest look image getting viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X