»   » ಲಾ ಅಂಡ್‌ ಆರ್ಡರ್‌ಗೆ ತೆಹಲ್ಕಾ ಸ್ಫೂರ್ತಿ

ಲಾ ಅಂಡ್‌ ಆರ್ಡರ್‌ಗೆ ತೆಹಲ್ಕಾ ಸ್ಫೂರ್ತಿ

Posted By: Staff
Subscribe to Filmibeat Kannada

ಇಡೀ ದೇಶವನ್ನೇ ತಲ್ಲಣಗೊಳಿಸಿದ, ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ತೆಹಲ್ಕಾ ಭ್ರಷ್ಟಾಚಾರ ಹಗರಣದ ಬೆನ್ನಲ್ಲೇ ಕರ್ನಾಟಕದಲ್ಲೂ ಬಯಲಿಗೆ ಬಂದ ಮಿನಿ ತೆಹಲ್ಕಾ ಹಗರಣ 'ಲಾ ಅಂಡ್‌ ಆರ್ಡರ್‌"ಗೆ ಸ್ಫೂರ್ತಿಯಾಗಿದೆ.

ರಾಮು ಎಂಟರ್‌ಪ್ರೆೃಸಸ್‌ ಲಾಂಛನದಡಿಯಲ್ಲಿ ರಾಮು ತಯಾರಿಸುತ್ತಿರುವ ಅದ್ಧೂರಿ ಕನ್ನಡ ಚಿತ್ರ ಲಾ ಅಂಡ್‌ ಆರ್ಡರ್‌. ತೆಹಲ್ಕಾ ಹಗರಣದ ಸ್ಫೂರ್ತಿಯಲ್ಲಿ ಈ ಚಿತ್ರಕ್ಕೆ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈಗ ಮುಂಬೈನಗರಿಗೆ ಸಾಗಿದೆ. ಭೂಗತ ಜಗತ್ತಿನ ದೊರೆಗಳ ಸುತ್ತ ಹೆಣೆದ ಕೆಲವು ಸನ್ನಿವೇಶಗಳಿಗೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ನಾಯಕಿ ಇಲ್ಲ : ಬೆಳದಿಂಗಳ ಬಾಲೆ ಚಿತ್ರದಲ್ಲಿ ನಾಯಕಿ ಇರಲಿಲ್ಲ. ನಾಯಕಿ ಇಲ್ಲದ ಚಿತ್ರ ಎಂಬ ಖ್ಯಾತಿಗೆ ಆಚಿತ್ರ ಪಾತ್ರವಾಗಿತ್ತು. ಈಗ ರಾಮು ಎಂಟರ್‌ಪ್ರೆೃಸಸ್‌ನ ಮೊಟ್ಟ ಮೊದಲ ಚಿತ್ರವನ್ನು ನಿರ್ದೇಶಿಸಿದ ಶಿವಮಣಿ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯೂ ಇಲ್ಲ. ಹಾಡೂ ಇಲ್ಲ.

ಇಂಗ್ಲಿಷ್‌ ಹೆಸರಿನ ಈ ಕನ್ನಡ ಚಿತ್ರದ ಛಾಯಾಗ್ರಾಹಕ ಅಶೋಕ್‌ ಕಶ್ಯಪ್‌, ಮನೋಹರ್‌ ಸಂಕಲನಕಾರ, ರವಿ ಶ್ರೀವತ್ಸ ಸಂಭಾಷಣೆಕಾರ, ಹಾರ್ಸ್‌ ಬಾಬು, ಕೌರವ್‌ ವೆಂಕಟೇಶ್‌ ಅವರು ಸಾಹಸ ಸಂಯೋಜಕರು. ಚಿತ್ರಕತೆಗಾರ ಹಾಗೂ ನಿರ್ದೇಶಕ ಶಿವಮಣಿ.

ಚಿತ್ರದ ತಾರಾಗಣದಲ್ಲಿ ಸಾಯಿಕುಮಾರ್‌, ಅಶಿಷ್‌ ವಿದ್ಯಾರ್ಥಿ, ರ್ಯಾಂಬೋ ರಾಖಿ, ಅಶೋಕ್‌ ಬಾಬು, ಲೋಹಿತಾಶ್ವ, ಲೋಕನಾಥ್‌, ಚಿತ್ರಾಶೆಣೈ, ರಮೇಶ್‌ ಭಟ್‌, ಮಾ. ಸಂತೋಷ್‌, ಕಿಶನ್‌, ಬೇಬಿ ರಕ್ಷ ಮೊದಲಾದವರಿದ್ದಾರೆ. 

English summary
law and order : A kannada movie inspired by Tehelka
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada