ಶಿವಣ್ಣಗೆ ಥ್ಯಾಂಕ್ಸ್ ಹೇಳಿ ಉಪೇಂದ್ರಗೆ ಕ್ಷಮೆ ಕೇಳಿದ ಲಾರೆನ್ಸ್

ದಕ್ಷಿಣ ಭಾರತದ ಖ್ಯಾತ ನೃತ್ಯ ಸಂಯೋಜಕ ರಾಘವ ಲಾರೆನ್ಸ್ ಬರಿ ಡ್ಯಾನ್ಸ್ ಮಾತ್ರವಲ್ಲ, ನಟನೆ, ಸಂಗೀತ, ನಿರ್ದೇಶನ, ನಿರ್ಮಾಣ ಹಾಗೂ ಸಮಾಜ ಸೇವೆ ಹೀಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಕಂಡಿರುವ ಕಲಾವಿದ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಲಾರೆನ್ಸ್ ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದರು.

ಇದೀಗ, ತುಂಬಾ ವರ್ಷದ ನಂತರ ಮತ್ತೆ ಕನ್ನಡಿಗರ ಮುಂದೆ ಬಂದಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ತೆರೆಕಂಡಿದ್ದ ಕಾಂಚನಾ 3 ಸಿನಿಮಾ ಈಗ ಕನ್ನಡದಲ್ಲೂ ಡಬ್ ಆಗುತ್ತಿದ್ದು, ಈ ವೇಳೆ ಕನ್ನಡ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ಸಂದರ್ಭದಲ್ಲಿ ಲಾರೆನ್ಸ್ ಇಬ್ಬರು ಕಲಾವಿದರನ್ನ ನೆನಪಿಸಿಕೊಂಡರು. ಒಬ್ಬರು ಶಿವರಾಜ್ ಕುಮಾರ್, ಇನ್ನೊಬ್ಬರು ಉಪೇಂದ್ರ. ಶಿವಣ್ಣ ಥ್ಯಾಂಕ್ಸ್ ಹೇಳಿದ್ರೆ, ಉಪೇಂದ್ರಗೆ ಕ್ಷಮೆ ಕೇಳಿದರು. ಅಷ್ಟಕ್ಕೂ, ಕನ್ನಡ ಸ್ಟಾರ್ ಗಳಿಗೆ ಥ್ಯಾಂಕ್ಸ್ ಮತ್ತು ಸಾರಿ ಹೇಳಿದ್ದೇಕೆ? ಮುಂದೆ ಓದಿ......

'ಅಸುರ' ಹಾಡಿಗೆ ಕೊರಿಯೋಗ್ರಫಿ ಮಾಡಿದ್ರು

'ಅಸುರ' ಹಾಡಿಗೆ ಕೊರಿಯೋಗ್ರಫಿ ಮಾಡಿದ್ರು

2001ರಲ್ಲಿ ನಟ ಶಿವರಾಜ್ ಕುಮಾರ್ ಅಭಿನಯಿಸಿದ್ದ ಅಸುರ ಚಿತ್ರದ ಹಾಡೊಂದಕ್ಕೆ ಲಾರೆನ್ಸ್ ಕೊರಿಯೋಗ್ರಫಿ ಮಾಡಿದ್ದರು. ಇದು ಇವರ ಮೊದಲ ಕನ್ನಡ ಸಿನಿಮಾ. ಇದೇ ಇವರ ಕೊನೆಯ ಸಿನಿಮಾ ಕನ್ನಡ ಸಿನಿಮಾ ಎಂಬುದು ಬೇಸರದ ಸಂಗತಿ. ಅದಕ್ಕೂ ಮುಂಚೆ ಮುಠಾಮೇಸ್ತ್ರಿ, ಜಂಟಲ್ ಮ್ಯಾನ್, ಹಿಟ್ಲರ್, ಎಂಬ ತೆಲುಗು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಶಿವಣ್ಣನಿಗೆ ಥ್ಯಾಂಕ್ಸ್ ಹೇಳಿದ ಲಾರೆನ್ಸ್

ಶಿವಣ್ಣನಿಗೆ ಥ್ಯಾಂಕ್ಸ್ ಹೇಳಿದ ಲಾರೆನ್ಸ್

ಇಂದು ಲಾರೆನ್ಸ್ ದೊಡ್ಡ ನಟ ಹಾಗೂ ಸಿನಿಮಾ ಮೇಕರ್ ಆಗಿದ್ದಾರೆ. ಆದ್ರೆ, ಆ ದಿನ ಲಾರೆನ್ಸ್ ಗೆ ಅವಕಾಶ ನೀಡಿದ ಶಿವರಾಜ್ ಕುಮಾರ್ ಮತ್ತು ಅಸುರ ಚಿತ್ರತಂಡ ಈಗ ಥ್ಯಾಂಕ್ಸ್ ಹೇಳಿಕೊಂಡಿದ್ದಾರೆ. 'ಅಸುರ ಸಿನಿಮಾ ಮಹಾಗಣಪತಿ ಹಾಡಿನಲ್ಲಿ ಡ್ಯಾನ್ಸ್ ಜೊತೆಗೆ ಕೊರಿಯೋಗ್ರಫಿ ಮಾಡಲು ಅವಕಾಶ ಕೊಟ್ಟರು. ಇದು ನನ್ನ ಬೆಳವಣಿಗೆಗೆ ಸಹಕಾರಿಯಾಯಿತು' ಎಂದು ಧನ್ಯವಾದ ತಿಳಿಸಿದ್ದಾರೆ.

ಉಪ್ಪಿ ಬಳಿ ಕ್ಷಮೆ ಕೇಳಿದ ಲಾರೆನ್ಸ್

ಉಪ್ಪಿ ಬಳಿ ಕ್ಷಮೆ ಕೇಳಿದ ಲಾರೆನ್ಸ್

ಇನ್ನು ಲಾರೆನ್ಸ್ ನಿರ್ದೇಶಿಸಿ, ನಟಿಸಿದ್ದ ಕಾಂಚಾನ ಮತ್ತು ಕಾಂಚನಾ 2 ಚಿತ್ರಗಳನ್ನ ಕನ್ನಡದಲ್ಲಿ ನಟ ಉಪೇಂದ್ರ ಮಾಡಿದ್ದರು. ಇದೀಗ, ಕಾಂಚನಾ 3 ಸಿನಿಮಾ ಕೂಡ ಬಂದಿದೆ. ಆದ್ರೆ, ಈ ಸಿನಿಮಾ ನೇರವಾಗಿ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ, ಈ ಬಾರಿ ರೀಮೇಕ್ ಮಾಡೋ ಅವಕಾಶ ಕಮ್ಮಿ. ಸೋ, ಉಪೇಂದ್ರ ಅವರಿಗೆ ರೀಮೇಕ್ ಮಾಡೋ ಚಾನ್ಸ್ ಇಲ್ಲ ಎಂದಿದ್ಕಕ್ಕೆ, 'ಹೌದು ನಾನು ಅವರ ಸಿನಿಮಾ ನೋಡಿದ್ದೀನಿ. ತುಂಬಾ ಚೆನ್ನಾಗಿ ಮಾಡಿದ್ದರು. ಈ ಸಲ ಸಾರಿ' ಎಂದರು.

ಕಾಂಚನಾ 4 ಮತ್ತು 5 ಬರ್ತಿದೆ

ಕಾಂಚನಾ 4 ಮತ್ತು 5 ಬರ್ತಿದೆ

ಕಾಂಚನಾ ಸರಣಿಯಲ್ಲಿ ದೊಡ್ಡ ಗೆಲುವು ಕಂಡಿರುವ ಲಾರೆನ್ಸ್ ಈಗ ಆ ಸರಣಿ ಚಿತ್ರಗಳನ್ನ ಮುಂದುವರಿಸಿಲು ನಿರ್ಧರಿಸಿದ್ದಾರೆ. ಈಗಾಗಲೇ ಮುನಿ, ಕಾಂಚನಾ, ಕಾಂಚನಾ 2, ಕಾಂಚನಾ 3 ಮಾಡಿರುವ ಲಾರೆನ್ಸ್ ಈಗ ಕಾಂಚನಾ 4 ಮತ್ತು ಕಾಂಚನಾ 5 ಮಾಡಲು ತೀರ್ಮಾನಿಸಿದ್ದಾರೆ. ಕಾಂಚನಾ 3 ಕನ್ನಡ ವರ್ಷನ್ ಇದೇ ವಾರ ಬಿಡುಗಡೆಯಾಗುತ್ತಿದೆ.

More from Filmibeat

English summary
Tamil actor, director, choreographer Raghava Lawrence asked sorry to kannada super star upendra and said thanks to shiva rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X