ಸರ್ಜಾಗೆ ಮೀಟರ್ ಇಲ್ಲ ಎಂದು ಕಿಡಿಕಾರಿದ ಶ್ರುತಿ ಪರ ವಕೀಲ

ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಮೀಟೂ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಶ್ರುತಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದಾರೆ.

ಸುಮಾರು ನಾಲ್ಕು ಪುಟಗಳ ದೂರನ್ನ ನೀಡಿದ್ದು, ವಿಸ್ಮಯ ಚಿತ್ರದ ಶೂಟಿಂಗ್ ನಡೆಯಬೇಕಾದರೇ ನನಗೆ ಕಿರುಕುಳ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ದೂರಿನ ಅನ್ವಯ ಸಜಾ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.

ಮತ್ತೊಂದೆಡೆ ಶ್ರುತಿ ಪರ ಹಿರಿಯ ವಕೀಲ ಬಾಲನ್ ಈ ಪ್ರಕರಣದ ಬಗ್ಗೆ ಮಾತನಾಡಿದ್ದು, 'ಸರ್ಜಾಗೆ ಮೀಟರ್ ಇಲ್ಲ, ಸುಮ್ಮನೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕ್ತೀನಿ ಅಂತ ಬೆದರಿಸ್ತಿದ್ದಾರೆ' ಅಷ್ಟೇ ಎಂದು ಕಿಡಿಕಾರಿದ್ದಾರೆ.

Lawyer Balan Reacts on Shruthi Hariharan MeToo Case

'ನಮ್ಮಲ್ಲಿ ಸಾಕ್ಷಿ ಎಲ್ಲವೂ ಇದೆ, ಶ್ರುತಿ ಹರಿಹರನ್ ಅವರು ನೊಂದ ಮಹಿಳೆ. ಇಷ್ಟು ದಿನ ಯಾಕೆ ಹೇಳಿಲ್ಲ ಅಂದ್ರೆ, ಅವರೊಬ್ಬರ ಯುವನಟಿ, ಸರ್ಜಾ ದೊಡ್ಡ ನಟ. ಹಾಗಾಗಿ, ವೃತ್ತಿ ಜೀವನಕ್ಕೆ ಅಡ್ಡಿಯಾಗಬಹುದು ಎಂಬ ಆತಂಕದಿಂದ ಹೇಳಿರಲಿಲ್ಲ. ಈಗ ಮೀಟೂ ಅಭಿಯಾನದಿಂದ ಧೈರ್ಯ ಬಂದಿದೆ'' ಎಂದು ಹೇಳಿದ್ದಾರೆ.

More from Filmibeat

English summary
Shruthi Hariharan and arjun sarja MeToo Case: Lawyer Balan Reacts on Case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X