twitter
    For Quick Alerts
    ALLOW NOTIFICATIONS  
    For Daily Alerts

    ಲೇ ನೀವೆಲ್ಲ ಹೀರೋಗಳಾ...ಹಿಂದೂಗಳೇ ಎಲ್ಲೋಗಿದ್ದೀರಾ? ವಿಜಯಲಕ್ಷ್ಮಿ ಪರಿಸ್ಥಿತಿ ಕಂಡು ವಕೀಲ ಜಗದೀಶ್ ಗರಂ

    |

    ನಮ್ಮ ತಾಯಿ ಆರೋಗ್ಯ ಸರಿಯಿಲ್ಲ, ನಮ್ಮ ಅಕ್ಕನ ಆರೋಗ್ಯ ಸರಿಯಲ್ಲ, ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿ ಬೇಡುತ್ತಿದ್ದ ನಟಿ ವಿಜಯಲಕ್ಷ್ಮಿ ಅವರು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. 75 ವರ್ಷದ ವಿಜಯಾ ಸುಂದರಂ ಅವರು ಸೆಪ್ಟಂಬರ್ 29ರಂದು ಕೊನೆಯುಸಿರೆಳೆದರು. ವಿಜಯಲಕ್ಷ್ಮಿ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಾಯಿಯನ್ನು ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಇಂಥ ಕಷ್ಟದ ಪರಿಸ್ಥಿತಿಯಲ್ಲೂ, ಅಸಹಾಯಕ ಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದ ಕುಳಿತ್ತಿದ್ದ ಹೆಣ್ಣುಮಗಳ ಸಹಾಯಕ್ಕೆ ಯಾರು ಬಾರದೇ ಇರುವುದನ್ನು ಕಂಡು ವಕೀಲ ಜಗದೀಶ್ ಫುಲ್ ಗರಂ ಆಗಿದ್ದಾರೆ.

    ವಿಜಯಲಕ್ಷ್ಮಿ ಅವರು ಸದ್ಯ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಸಹೋದರಿ ಉಷಾ ಮತ್ತು ತಾಯಿಯ ಅನಾರೋಗ್ಯ ವಿಚಾರಕ್ಕೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಫೇಸ್‌ ಬುಕ್‌ನಲ್ಲಿ ವಿಡಿಯೋ ಮಾಡಿ ಚಿತ್ರರಂಗ ಹಾಗೂ ಹಿರಿಯ ನಟಿ ಜಯಪ್ರದಾ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ, ಯಾರೂ ಸಹಾಯ ಮಾಡ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೆಲ್ಲ ಗಮನಿಸಿದ ವಕೀಲ ಜಗದೀಶ್ ಸಮಾಜ, ಚಿತ್ರರಂಗದ ವಿರುದ್ಧ ಹರಿಹಾಯ್ದಿದ್ದಾರೆ. ವಿಡಿಯೋ ಮೂಲಕ ಆಕ್ರೋಶ ಹೊರಹಾಕಿರುವ ಜಗದೀಶ್ ಹಿಂದೂ ಹಿಂದೂ ಎಂದು ಬೆಂಕಿ ಇಟ್ಟುಕೊಳ್ಳುವವರು ಇಂದು ಎಲ್ಲೋಗಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

    ತಪ್ಪು ಮಾಡುವುದು ಸಹಜ

    ತಪ್ಪು ಮಾಡುವುದು ಸಹಜ

    "ಕರ್ನಾಟಕದಲ್ಲಿ ಕಷ್ಟ ಬಂದಾಗ ಸಮುದಾಯ, ಸಂಘ, ಸರ್ಕಾರ, ಜಾತಿ, ಧರ್ಮ ಸಹಾಯ ಮಾಡುತ್ತೆ ಅಂತ ನಂಬಿಕೆ ಇದೆ. ಆದರೆ ಇವತ್ತು ನಟಿ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ನೋಡಿದಾಗ ಎಲ್ಲಾ ಸುಳ್ಳು ಎನಿಸುತ್ತದೆ. ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ. ಒಂದು ಹೆಣ್ಣು ನಟಿಯಾಗಿ ಮನರಂಜನೆ ನೀಡಿ ಕಾರಣಾಂತರಗಳಿಂದ ಕಷ್ಟ ಬಂದಿರುತ್ತದೆ. ಕೋಪದಲ್ಲಿ ಏನಾದರು ಹೇಳಿರಬಹುದು. ಹಾಗಂದ ಮಾತ್ರಕ್ಕೆ ಇವತ್ತಿನ ಆ ಕೆಟ್ಟ ಪರಿಸ್ಥಿತಿಯಲ್ಲಿ ನಾವುಗಳು ಆಕೆಯನ್ನು ಒಂಟಿಯಾಗಿ ಬಿಟ್ಟರೆ ನಾವು ಕನ್ನಡಿಗರಾಗಿ ಮಾನವಿಯಾತೆ ಇರುವ ಮನುಷ್ಯರಾಗುತ್ತೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.

    ಹಿಂದೂ..ಹಿಂದೂ ಎನ್ನುವವರೆಲ್ಲಾ ಎಲ್ ಹೋಗಿದ್ದೀರಾ?

    ಹಿಂದೂ..ಹಿಂದೂ ಎನ್ನುವವರೆಲ್ಲಾ ಎಲ್ ಹೋಗಿದ್ದೀರಾ?

    "ಒಂದು ಟ್ರಸ್ಟ್ ಲಿಂಗಾಯುತ ಸಂಪ್ರದಾಯದ ಪ್ರಕಾರ ಆಕೆಯ ತಾಯಿ ಅಂತ್ಯಸಂಸ್ಕಾರ ಮಾಡಿದ್ರು. ನಾವುಗಳೆಲ್ಲ ಕಟುಕರಾಗಲು ಸಾಧ್ಯನಾ. ನನಗೂ ಗೊತ್ತಿರಲಿಲ್ಲ. ನನ್ನ ಸ್ನೇಹಿತೆ ಅವರ ವಿಡಿಯೋ ಕಳುಹಿಸಿದರು. ಅವರು ಕೂಡ ಮರುಕ ವ್ಯಕ್ತ ಪಡಿಸಿದ್ರು. ಎಲ್ಲರೂ ಈ ರೀತಿ ಆಗಿ ಬಿಟ್ಟರೆ ಅವರ ಕಥೆ ಏನಾಗಬಹುದು. ಆಕೆಯೂ ಒಬ್ಬಳು ಹಿಂದೂ ಹೆಣ್ಣು ಮಗಳಲ್ಲವಾ. ಲಿಂಗಾಯತ ಹೆಣ್ಣು. ಜಾತಿ, ಧರ್ಮ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಯಿತಾ. ರಾಜಕೀಯದಿಂದ ನಾಲ್ಕು ಜನರ ಕಣ್ಣೀರು ಒರೆಸಿಲ್ಲ ಎಂದರೆ ಆ ಜಾತಿ, ಧರ್ಮ ಸರ್ಕಾರ ಸಮುದಾಯ ಇದ್ದರೆ ಎಷ್ಟು ಬಿಟ್ಟರೆ ಎಷ್ಟು. ನಮ್ಮ ಹಿಂದೂಗಳು ಎಂದು ಬಡ್ಕೋತ್ತೀರಾ..ವಿಜಯಲಕ್ಷ್ಮಿ ಹಿಂದೂ ಅಲ್ಲವಾ, ಲಿಂಗಾಯತರು ಅವರು. ಈಗ ಹಿಂದೂಗಳೆಲ್ಲಾ ಎಲ್ಲಿ ಹೋಗಿದ್ದೀರಾ" ಎಂದಿದ್ದಾರೆ.

    ಆಕೆ ಏನ್ ಕೊಲೆ ಮಾಡಿದ್ದಾಳಾ..?

    ಆಕೆ ಏನ್ ಕೊಲೆ ಮಾಡಿದ್ದಾಳಾ..?

    "ಆಕೆ ಏನೆ ತಪ್ಪು ಮಾಡಿರಬಹುದು. ಏನು ಕೊಲೆ ಮಾಡಿದ್ದಾರಾ?.. ಅಥವಾ ರೇಪ್ ಮಾಡಿ, ಸಹಾಯ ತೆಗೆದುಕೊಂಡು ಬಚ್ಚಿಟ್ಟುಕೊಂಡಿದ್ದಾರಾ?..ಏನು ಇಲ್ಲ ತಾನೆ. ರೇಪ್ ಮಾಡಿದವರು, ಬ್ಲೂ ಫಿಲ್ಮ್ ನೋಡಿದವರು ಎಲ್ಲರೂ ಚೆನ್ನಾಗೇ ಇದ್ದಾರೆ. ಎಲ್ಲರಿಗೂ ಉತ್ತಮ ಸೌಕರ್ಯ ಸಿಗ್ತಿದೆ. ಮಾನವೀಯ ಮೌಲ್ಯಗಳನ್ನು ಮರಿಯಬಾರದು" ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರರಂಗದ ವಿರುದ್ಧ ವಕೀಲ್ ಸಾಬ್ ಗರಂ

    ಚಿತ್ರರಂಗದ ವಿರುದ್ಧ ವಕೀಲ್ ಸಾಬ್ ಗರಂ

    "ಫಿಲ್ಮ್ ಇಂಡಸ್ಟ್ರಿ ಎಲ್ ಹೋಯ್ತು. ನೀವೆಲ್ಲ ಹೀರೋಗಳು ಸಿನಿಮಾದಲ್ಲಿ ಕಂಡ್ರೆಲೇ. ನೀವು ಜನಸಾಮಾನ್ಯರ ಮಾನವೀಯತೆಗೆ ಹೀರೋ ಆಗಲು ಸಾಧ್ಯನೇ ಇಲ್ಲ. ದೊಡ್ಡ ದೊಡ್ಡ ಡೈಲಾಗ್ ಹೊಡೆಯುವಂತ ಫಿಲ್ಮ್ ಇಂಡಿಸ್ಟ್ರಿ ಎಲ್ ಹೋಯ್ತು. ನಾಯಕಿಯರು, ನಟಯರು ಎಲ್ಲಾ ಎಲ್ ಹೋದ್ರಿ..ಬರಿ ಮೇಕಪ್ ಮಾಡಿಕೊಂಡು ಮನರಂಜನೆ ನೀಡುವುದು ಅಷ್ಟೆನಾ. ಕಷ್ಟಕ್ಕೆ ಆಗದೆ ಇರುವ ಹೀರೋಗಳು ನೀವು ಹೀರೋನಾ" ಎಂದು ಚಿತ್ರರಂಗವನ್ನು ಪ್ರಶ್ನೆ ಮಾಡಿದ್ದಾರೆ.

    ನೀವೆಲ್ಲ ಸಮಾಜ ಘಾತುಕರು

    ನೀವೆಲ್ಲ ಸಮಾಜ ಘಾತುಕರು

    "ಆಕೆಯ ಪರಿಸ್ಥಿತಿ ನಾಳೆ ಎಲ್ಲರಿಗೂ ಬರಬಹುದು. ಸಮಾಜದಲ್ಲಿ ಯಾವುದು ಶಾಶ್ವತ ಅಲ್ಲ. ಹಾಗಾಗಿ ಆ ಪರಿಸ್ಥಿತಿಗೆ ಬಂದ ಜನರನ್ನು ಮಾನವೀಯತೆ ನೋಡಿ. ಜಾತಿ ಧರ್ಮ ಅಂತ ಬಡಿದುಕೊಳ್ಳುವವರು ಎಲ್ಲಿ ಹೋಗಿದ್ದಾರಾ...ನೀವೆಲ್ಲ ಸಮಾಜ ಘಾತುಕರು...6 ಕೋಟಿ ಕನ್ನಡಿಗರು ಯಾರು ತಪ್ಪೆ ಮಾಡುವುದಿಲ್ಲವಾ. ನೀವು ಯಾರು ಉದ್ದಾರ ಆಗಲ್ಲ. ಯಾವ ಸಮಾಜ ಕಣ್ಣೀರು ಇಡುತ್ತಿರುವ ವ್ಯಕ್ತಿ ಪರ ನಿಲ್ಲುವುದಿಲ್ಲವೊ ಇಂಥ ಸಮಾಜ ಇದ್ರು ಅಷ್ಟೆ ಹೋದರು ಅಷ್ಟೆ" ಎಂದಿದ್ದಾರೆ.

    ಹುಚ್ಚರ ಸಮಾಜದಲ್ಲಿ ಬದುಕುತ್ತಿದ್ದೇವೆ

    ಹುಚ್ಚರ ಸಮಾಜದಲ್ಲಿ ಬದುಕುತ್ತಿದ್ದೇವೆ

    "ಸತ್ತಿರುವ ಈ ಸಮಾಜಕ್ಕೆ ನಾವು ಯಾಕೆ ಸ್ಪಂದಿಸಬೇಕು. ಎಂಥ ಹುಚ್ಚರ ಸಮಾಜದಲ್ಲಿ ಬದುಕುತ್ತಿದ್ದೇವೆ. ಬಸವಣ್ಣ, ಬುದ್ದ, ಕುವೆಂಪು, ಅಂಬೇಡ್ಕರ್ ಹುಟ್ಟಿದ ನಾಡು ಇದು. ನಮಗೂ ಇಂಥ ಪರಿಸ್ಥಿತಿ ಬರಬಹುದು. ಇಂಥ ನಾಡಲ್ಲಿ ಇಂಥ ಪರಿಸ್ಥಿತಿ ಬಂದಿರುವುದು ನಾಚಿಕೆ ಆಗುತ್ತದೆ. ಕೊಡುವವನು ದೊಡ್ಡವನಲ್ಲ, ಬೇಡುವವನು ದೊಡ್ಡವನು. ಮಾನವೀಯತೆ ಮರಿಯಬೇಡಿ" ಎಂದು ಹೇಳಿದ್ದಾರೆ.

    English summary
    Lawyer Jagadish outrage against society and film industry for ban condition of Actress Vijayalakshmi.
    Wednesday, September 29, 2021, 13:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X