»   » ಗೋಪಿ- ಗಾಂಡಲಿನ ಗೀತೆಗೆ ದಾಖಲೆ ಫೀಸು !

ಗೋಪಿ- ಗಾಂಡಲಿನ ಗೀತೆಗೆ ದಾಖಲೆ ಫೀಸು !

Posted By: Staff
Subscribe to Filmibeat Kannada

ಕಾದಂಬರಿಕಾರರಿಗೆ ಸಿಕ್ಕಿರುವ ಡಿಮ್ಯಾಂಡು ಇದೀಗ ಕವಿಯಾಬ್ಬರಿಗೂ ಸಂದಿದೆ. ಗುಂಡು- ಸಿಗರೇಟು ಹಾಡಿನಿಂದ ಹದಿಹರೆಯದವರ ಚಿತ್ತಾಪಹರಿಸಿರುವ 'ಸುಬ್ಬಾಭಟ್ಟರ ಮಗಳೆ" ಖ್ಯಾತಿಯ 'ಫೋಟೋಗ್ರಾಫರ್‌" ಬಿ.ಆರ್‌.ಲಕ್ಷ್ಮಣ ರಾವ್‌ ಅವರ 'ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು, ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು" ಜನಪ್ರಿಯ ಗೀತೆಗೆ ಅದೃಷ್ಟ ಖುಲಾಯಿಸಿದೆ.

ಡಿರಾ ಬಾಬು ನಿರ್ದೇಶಿಸುತ್ತಿರುವ ಅಮ್ಮ ಸಿನಿಮಾಕ್ಕಾಗಿ ಲಕ್ಷ್ಮಣ್‌ರಾವ್‌ರ ಗೋಪಿ ಮತ್ತು ಗಾಂಡಲಿನ ಗೀತೆ ಬಳಕೆಯಾಗುತ್ತಿದೆ. ಈ ಮೂಲಕ ಭಾವಗೀತೆ ಕ್ಷೇತ್ರದಲ್ಲಿ ಹೆಸರುವಾಸಿಯಾದ ಲಕ್ಮ್ಮಣ್‌ರಾವ್‌ ಸಿನಿಮಾಕ್ಕೂ ಕಾಲಿಡುತ್ತಿದ್ದಾರೆ, ಭರ್ಜರಿಯಾಗಿ.

ಗಾಂಡಲೀನ ಹಾಡಿಗೆ ಸಿಕ್ಕಿರುವ ಸಂಭಾವನೆ ಬರೋಬ್ಬರಿ 10 ಸಾವಿರ ರುಪಾಯಿ! ಗಾಂಧಿನಗರದ ಮೂಲಗಳ ಪ್ರಕಾರ ಇದು ಗೀತ ರಚನೆಕಾರರೊಬ್ಬರಿಗೆ ಸಲ್ಲುತ್ತಿರುವ ದಾಖಲೆ ಫೀಸು. ಅಂದಹಾಗೆ, ಈ ಗೀತೆಯನ್ನು ಜೋಕು ಹೊಡೆಯುವುದರಲ್ಲಿ ಹೆಸರು ಮಾಡಿರುವ ಸಂಭಾಷಣೆಕಾರ ಕಂ ನಟ ರಿಚರ್ಡ್‌ ಲೂಯಿಸ್‌ ಹಾಡಲಿದ್ದಾರೆ. ಕವಿಗೂ ಒಂದು ಕಾಲ ಇದೆ ಅಂದಂತಾಯಿತು.

English summary
Kannada Edition of Oneindia.in- Kannada poet B.R.Laxman Rao gets a record royalty for his poem
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada