India
  For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಮಗ ಪುನೀತ್ ಗೆ ಕ್ಷಮೆ ಕೇಳಿದ ಆಂಗ್ಲ ಪತ್ರಿಕೆ

  By Harshitha
  |

  ಡಾ.ರಾಜ್ ಕುಮಾರ್ ಸುಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಓದುವುದಕ್ಕೆ ಬರುವುದಿಲ್ಲ ಅಂತ ಖ್ಯಾತ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು.

  ನಟ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದ ಘಟನೆಯೊಂದನ್ನ ಪ್ರಸ್ತಾಪಿಸುತ್ತಾ, ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಓದೋಕೆ ಬರಲ್ಲ ಅಂತ ಗಾಸಿಪ್ ಕಾಲಂನಲ್ಲಿ ಆಂಗ್ಲ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು. [ಅಣ್ಣಾವ್ರ ಮಗ ಪುನೀತ್ ಗೆ ಕನ್ನಡ ಓದೋಕೆ ಬರಲ್ವಾ?]

  ಇದನ್ನ ಓದಿ ಕಣ್ಣು ಕೆಂಪಗೆ ಮಾಡಿಕೊಂಡ ಪುನೀತ್ ರಾಜ್ ಕುಮಾರ್ ತಕ್ಷಣ ವರದಿ ಮಾಡಿದ ಆಂಗ್ಲ ಪತ್ರಿಕೆ ಸಂಪಾದಕರಿಗೆ ಪತ್ರವನ್ನ ಬರೆದಿದ್ದರು. ಬೇಜವಾಬ್ದಾರಿ ಸುದ್ದಿ ಮಾಡಿದ ಪರಿಣಾಮ ತಮಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದರು. [ಆಂಗ್ಲ ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಸಖತ್ ಗರಂ]

  ಇದರ ಪರಿಣಾಮ ಪುನೀತ್ ರಾಜ್ ಕುಮಾರ್ ಅವರಿಗೆ ಆಂಗ್ಲ ಪತ್ರಿಕೆ ಕ್ಷಮೆ ಕೋರಿದೆ. ತಪ್ಪು ಮಾಹಿತಿಯನ್ನ ಪ್ರಕಟ ಮಾಡಿದಕ್ಕೆ ಆಂಗ್ಲ ಪತ್ರಿಕೆಯ ಸಂಪಾದಕರು ನಿನ್ನೆ ಪತ್ರಿಕೆಯಲ್ಲಿ ಕ್ಷಮೆಯಾಚಿಸಿದ್ದಾರೆ.

  puneeth rajkumar

  ಅಪ್ಪು ಆಗ್ರಹಕ್ಕೆ ಪತ್ರಿಕೆ ಸಂಪಾದಕರು ತಲೆ ಬಾಗಿದ್ದಾರೆ. ಅಲ್ಲಿಗೆ, ಸಾಮಾಜಿಕ ಜಾಲತಾಣಗಳಲ್ಲೂ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ತಣ್ಣಗಾಗಿದ್ದಾರೆ.

  English summary
  A Leading English Daily has finally apologized Kannada Actor Puneeth Rajkumar for publishing erroneous article on the Actor. The News Paper had carried an item about Puneeth Rajkumar that he doesn't know to read Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X