For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆಯನ್ನು ನೋಡಿ ಕಲಿ: ಕಂಗನಾ ಗೆ ರಮ್ಯಾ ಸಲಹೆ

  |

  ಬಾಲಿವುಡ್‌ ನಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದು ಎರಡೇ ವಿಷಯ ಒಂದು ಕಂಗನಾ ಮತ್ತೊಂದು ಡ್ರಗ್ಸ್. ಸುಶಾಂತ್ ಸಾವು ಮೆಲ್ಲಗೆ ನೇಪತ್ಯಕ್ಕೆ ಸರಿಯುತ್ತಿದೆ.

  ಕಂಗನಾ ಹಾಗೂ ಡ್ರಗ್ಸ್ ಎರಡೂ ವಿಷಯಗಳ ಬಗ್ಗೆ ಬಾಲಿವುಡ್ ಸೇರಿದಂತೆ ದೇಶದೆಲ್ಲೆಡೆ ಚರ್ಚೆ ಆಗುತ್ತಿದೆ. ಈ ಚರ್ಚೆಗೆ ಸ್ಯಾಂಡಲ್‌ವುಡ್ ನಟಿ, ರಾಜಕಾರಣಿ ರಮ್ಯಾ ಸಹ ಧುಮುಕಿದ್ದಾರೆ.

  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮೌನವಾಗಿದ್ದ ರಮ್ಯ, ಇಂದು ಕಂಗನಾ ಗೆ ಡ್ರಗ್ಸ್ ವಿವಾದದ ಕುರಿತು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಸಲಹೆಗಳ ಮಧ್ಯೆ ಬಾಲಿವುಡ್‌ನ ಟಾಪ್ ನಾಯಕ ನಟಿ ದೀಪಿಕಾ ಪಡುಕೋಣೆಯನ್ನು ನೋಡಿ ಕಲಿ ಎಂದಿದ್ದಾರೆ. ಆದರೆ ನಟಿ ರಮ್ಯಾ ಹೀಗೇಕೆಂದರು?

  ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ: ರಮ್ಯಾ

  ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ: ರಮ್ಯಾ

  ಬಾಲಿವುಡ್‌ನ ಡ್ರಗ್ಸ್‌ ವ್ಯಸನಿಗಳ ಪಟ್ಟಿಯನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದ ಕಂಗನಾ ಗೆ ರಮ್ಯಾ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಾಕ್ಷ್ಯಗಳಿದ್ದರೆ ಪೊಲೀಸರಿಗೆ ಕೊಡಿ, ಇಲ್ಲವೇ ವ್ಯಸನಿಗಳನ್ನು ವ್ಯಸನದಿಂದ ಹೊರತರುವ ಕೆಲಸ ಮಾಡಿ, ಅದನ್ನು ಬಿಟ್ಟಿ ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ ಎಂದಿದ್ದಾರೆ ರಮ್ಯಾ.

  'ದೀಪಿಕಾ ಪಡುಕೋಣೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ'

  'ದೀಪಿಕಾ ಪಡುಕೋಣೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ'

  ಇದೇ ಸರಣಿ ಟ್ವೀಟ್‌ನಲ್ಲಿ ದೀಪಿಕಾ ಪಡುಕೋಣೆಯ ಹೆಸರು ಉಲ್ಲೇಖಿಸಿರುವ ರಮ್ಯಾ, 'ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆ, ಮಾನಸಿಕ ಆರೋಗ್ಯ ಕುರಿತಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಸ್ವತಃ ಆಕೆ ಎದುರಿಸಿದ ಖಿನ್ನತೆ ಹಾಗೂ ಅದರಿಂದ ಹೊರಬಂದ ಬಗ್ಗೆ ಬಹಿರಂಗವಾಗಿ ಆಕೆ ಮಾತನಾಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ' ಎಂದಿದ್ದಾರೆ.

  ದೀಪಿಕಾ ಪಡುಕೋಣೆಯನ್ನು ನೋಡಿ ಕಲಿಯಿರಿ: ರಮ್ಯಾ

  ದೀಪಿಕಾ ಪಡುಕೋಣೆಯನ್ನು ನೋಡಿ ಕಲಿಯಿರಿ: ರಮ್ಯಾ

  ಮುಂದುವರೆದು, ದೀಪಿಕಾ ಪಡುಕೋಣೆ, ಮಾನಸಿಕ ಆರೋಗ್ಯದ ಜಾಗೃತಿ ಹಾಗೂ ಖಿನ್ನತೆಗೆ ಒಳಪಟ್ಟಿರುವವರ ಸಹಾಯಕ್ಕೆಂದು ಸಂಘ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಅದು ಲಕ್ಷಾಂತರ ಮಂದಿಗೆ ಸಹಾಯ ಮಾಡುತ್ತಿದೆ. ನೀವು ಅವರನ್ನು ನೋಡಿ ಕಲಿಯಿರಿ ಎಂದಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  'ಡ್ರಗ್ಸ್ ವ್ಯಸನಿ ಆಗಿದ್ದೆ ಎಂದು ಒಪ್ಪಿಕೊಂಡು ಧೈರ್ಯ ತೋರಿಸಿದ್ದೀರಿ'

  'ಡ್ರಗ್ಸ್ ವ್ಯಸನಿ ಆಗಿದ್ದೆ ಎಂದು ಒಪ್ಪಿಕೊಂಡು ಧೈರ್ಯ ತೋರಿಸಿದ್ದೀರಿ'

  ಸಂಜಯ್ ದತ್ ಹೆಸರನ್ನೂ ಉಲ್ಲೇಖಿಸಿರುವ ಅವರು, 'ನಾನೂ (ಕಂಗನಾ) ಸಹ ಡ್ರಗ್ಸ್ ವ್ಯಸನಿ ಆಗಿದ್ದೆ ಎಂದು ವಿಡಿಯೋ ಒಂದರಲ್ಲಿ ಹೇಳಿದ್ದಿರಿ. ನೀವು ಧೈರ್ಯ ತೋರಿದ್ದೀರಿ. ನಿಮ್ಮ ಆ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸಿ, ನಟ ಸಂಜಯ್ ದತ್ ಆ ಕೆಲಸವನ್ನು ಮಾಡಿದ್ದಾರೆ ಎಂದು ಸಂಜಯ್ ದತ್ ಅನ್ನು ಹೆಸರಿಸಿದ್ದಾರೆ.

  English summary
  Actress Ramya tweeted to Kangana Ranaut that learn from Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X