ಮಣ್ಣಲ್ಲಿ ಮಣ್ಣಾದ ಕನ್ನಡ ಚಿತ್ರರಂಗದ 'ಅಮ್ಮ' ಲೀಲಾವತಿ: ಸೋಲದೇವನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ

ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿ ಅವರು ತಮ್ಮಿಷ್ಟದಂತೆ ತಮ್ಮದೇ ತೋಟದಲ್ಲಿಯೇ ಮಣ್ಣಲ್ಲಿ ಮಣ್ಣಾಗಿದ್ದಾರೆ. ಶುಕ್ರವಾರ ಸಂಜೆ (ಡಿಸೆಂಬರ್ 08) ಇಹಲೋಕ ತ್ಯಜಿಸಿದ್ದ ಅವರನ್ನು ಡಿಸೆಂಬರ್ 09ರ ಶನಿವಾರ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯ ತೋಟದಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ.

ತಮ್ಮ ನೆಚ್ಚಿನ ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ಲೀಲಾವತಿ ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದ ಭಂಟ ಸಮುದಾಯದ ಕ್ರಿಯೆಯಂತೆ ನಡೆಸಲಾಗಿದೆ. ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದ್ದಾರೆ.

Leelavathi: Actress Leelavathi Last Rituals At Nelamangalas Soladevanahalli

ಹೂವಿನ ಪಲ್ಲಕ್ಕಿಯೇರಿ ಮಣ್ಣಲ್ಲಿ ಮಣ್ಣಾದ 'ಲೀಲಮ್ಮ'

ರವೀಂದ್ರ ಕಲಾಕ್ಷೇತ್ರದಲ್ಲಿನ ಅಂತಿಮ ದರ್ಶನದ ಬಳಿಕ ಸೋಲದೇವನಹಳ್ಳಿಗೆ ಬಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನವಿಲಿನಾಕೃತಿಯ ವಿಶೇಷ ಹೂವಿನ ಪಲ್ಲಕ್ಕಿಯಲ್ಲಿ ಮಲಗಿಸಲಾಗಿತ್ತು. ಸುಮಾರು 200 ಮೀಟರ್ ಪಾರ್ಥಿವ ಶರೀರದ ಮೆರವಣಿಗೆ ಕೂಡ ಮಾಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಂತೆ ಸಕಲ ಸರ್ಕಾರಿ, ಪೊಲೀಸ್ ಗೌರವ ಸಲ್ಲಿಸಲಾಯಿತು. ನಟ ವಿನೋದ್ ರಾಜ್ ಮತ್ತು ಮೊಮ್ಮಗ ಯುವರಾಜ್ ಅನೇಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸರ್ವಸ್ವವೂ ಅಮ್ಮನೆ ಎನ್ನುತ್ತಿದ್ದ ನಟ ವಿನೋದ್ ರಾಜ್ ಅವರ ಮುಖ ನೋಡುವುದಕ್ಕೂ ಆಗದಂತಿತ್ತು. ತಾಯಿಯನ್ನು ಮಗುವಿನಂತೆ ಕಾಪಾಡಿದ ನಟನಿಗೆ ಚಿತ್ರರಂಗ, ಆಪ್ತರು ಧೈರ್ಯ ಹೇಳುತ್ತಿದ್ದರು.

ಅಂತ್ಯಕ್ರಿಯೆ ವೇಳೆ ಅನೇಕ ಗಣ್ಯರು ಮತ್ತೊಂದು ಬಾರಿ ಅಂತಿಮ ನಮನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಕೊನೆಯ ಬಾರಿ ಲೀಲಮ್ಮ ಅವರನ್ನು ಕಣ್ತುಂಬಿಕೊಳ್ಳಲು ಅನೇಕ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಮತ್ತು ಲೀಲಾವತಿ ಅವರು ಅಭಿಮಾನಿಗಳು ಸೋಲದೇವನಹಳ್ಳಿಗೆ ಆಗಮಿಸಿದ್ದರು.

ಶುಕ್ರವಾರ ನಿಧನರಾಗಿದ್ದ ಅವರ ಅವರ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಅಭಿಮಾನಿಗಳು ಅಂತಿಮ ದರ್ಶನ ಪಡೆದ ನಂತರ ಶನಿವಾರ ಮಧ್ಯಾಹ್ನ ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತು ತಂದ ಆಂಬುಲೆನ್ಸ್ ವಾಪಸ್ ನೆಲಮಂಗಲದ ಸೋಲದೇವನಹಲ್ಳಿಗೆ ತಲುಪಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ ದಾರಿಯಲ್ಲಿಯೂ ಅಭಿಮಾನಿಗಳು ಆಂಬುಲೆನ್ಸ್ ತಡೆದು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಚಿತ್ರರಂಗದ ಅಮ್ಮ 'ಲೀಲಮ್ಮ'

85 ವರ್ಷ ವಯಸ್ಸಾಗಿದ್ದ ಲೀಲಾವತಿಯವರು ಕನ್ನಡದಲ್ಲಿ 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕಿ, ತಂಗಿ, ಅಕ್ಕ, ಅಮ್ಮ ಆಗಿ ಅನೇಕ ಪಾತ್ರಗಳಲ್ಲಿ ಕನ್ನಡಿಗರನ್ನು ರಂಜಿಸಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಅವರದ್ದು. ಹಳೆಯ ಯಾವುದೇ ಕನ್ನಡ ಸಿನಿಮಾ ಎಂದರೂ ಅದು ಲೀಲಾವತಿ ಅವರ ಸಿನಿಮಾವೇ ಎಂಬಂತ ಸ್ಥಿತಿಯೀ ಇದೆ.

ನಟಿ ಲೀಲಾವತಿ ಅವರು ಬರೀ ನಟಿಯಾಗಿ ಅಷ್ಟೇ ಅಲ್ಲದೇ ಸಾಮಾಜಿಕ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಪ್ರಾಣಿಗಳ ಮೇಲೆ ಭಾರಿ ಪ್ರೀತಿ ಇಟ್ಟುಕೊಂಡಿರುವ ಅವರು, ಅವುಗಳಿಗಾಗಿ ಹೊಸ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ತಮ್ಮ ಕೊನೆಯುಸಿರು ಇರುವ ಒಳಗೆ ಪ್ರಾಣಿಗಳಿಗಾಗಿ ಆಸ್ಪತ್ರೆ ಕಟ್ಟಿಸಬೇಕು ಎಂಬ ಆಸೆ ನೆರವೇರಿದೆ. ವಯೋಸಹಜ ಕಾಯಿಲೆಯಿಂದ ನಿಧನರಾದ ಅವರು ನಟ ವಿನೋದ್ ರಾಜ್, ಸೊಸೆ ಅನು, ಮಗ ಯುವರಾಜ್ ಸೇರಿದಂತೆ ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

More from Filmibeat

English summary
Actress Leelavathi last rituals at soladevanahalli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X