'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ

By Naveen

Recommended Video

NAGARAHAAVU : ನಾಗರಹಾವು ಹೊಸ ಅವತರಣಿಕೆ ನೋಡ ಮೂಕವಿಸ್ಮಿತರಾದ ಲೀಲಾವತಿ..!! | FIlmibeat Kannada

'ನಾಗರಹಾವು' ಸಿನಿಮಾ ಇದೇ ತಿಂಗಳ 20ಕ್ಕೆ ಮರು ಬಿಡುಗಡೆಯಾಗುತ್ತಿದೆ. ಹೊಸ ರೂಪದಲ್ಲಿ ಸಿನಿಮಾವನ್ನು ಈಶ್ವರಿ ಪ್ರೊಡಕ್ಷನ್ಸ್ ಮತ್ತೆ ರೀ ರಿಲೀಸ್ ಮಾಡುತ್ತಿದೆ. ಈ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ನಿನ್ನೆ 'ನಾಗರಹಾವು' ಚಿತ್ರದ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು. ಈ ವೇಳೆ ''ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ'' ಎನ್ನುತ್ತಲೇ ಹಿರಿಯ ನಟಿ ಲೀಲಾವತಿ ಮೈಕ್ ತೆಗೆದುಕೊಂಡರು. ಚಿತ್ರದ ಆ ದಿನಗಳ ಬಗ್ಗೆ ಮಾತನಾಡಿ ಅನೇಕ ವಿಷಯಗಳನ್ನು ಹಂಚಿಕೊಂಡರು. ಅವರ ಬಳಿಕ ನಟಿ ಜಯಂತಿ ಕೂಡ ಅನೇಕ ಕುತೂಹಲಕಾರಿ ಸಂಗತಿಗಳನ್ನು ಇಂದಿನ ಪೀಳಿಗೆಗೆ ತಲುಪಿಸಿದರು.

ಅಂದಹಾಗೆ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಲೀಲಾವತಿ ಹಾಗೂ ಜಯಂತಿ ಅವರ ಮಾತುಗಳು ಮುಂದಿದೆ ಓದಿ....

ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ

ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ

''ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ. ಈಗ ಸಿನಿಮಾದ ಹಾಡಗಳನ್ನು ಮತ್ತೆ ನೋಡಿ ಬೆರಗಾದೆ. ಈ ಹಿಂದೆ ಅನೇಕ ಬಾರಿ ಓಬವ್ವನ ಹಾಡನ್ನು ನೋಡಿದ್ದೇನೆ. ಆದರೆ, ಈಗ ನೋಡಿದಾಗ ಇಷ್ಟೊಂದು ಚೆನ್ನಾಗಿ ಅದನ್ನು ಮಾಡಲು ಸಾಧ್ಯನಾ ಎಂದು ಅನಿಸಿತು.'' - ಲೀಲಾವತಿ, ಹಿರಿಯ ನಟಿ

ನೂರು ದಿನ ಅಲ್ಲ ನೂರು ವರ್ಷ ಸಿನಿಮಾ ಓಡಬೇಕು

ನೂರು ದಿನ ಅಲ್ಲ ನೂರು ವರ್ಷ ಸಿನಿಮಾ ಓಡಬೇಕು

''ಇದನೆಲ್ಲ ಈಗ ನೋಡಿ, ಹಠಮಾರಿ ವಿಷ್ಣುವನ್ನು ಹೇಗೆ ಪುಟ್ಟಣ್ಣ ಆಯ್ಕೆ ಮಾಡಿದರು, ಪೊರ್ಕಿ ಪಾತ್ರಕ್ಕೆ ಅಂಬರೀಶ್ ಅವರನ್ನು ಹೇಗೆ ಕರೆತಂದರು? ಎನ್ನಿಸುತ್ತದೆ. ರವಿಚಂದ್ರನ್ ಹಾಗೂ ಅವರ ತಮ್ಮ ಸೇರಿ ಮತ್ತೆ ಈ ಸಿನಿಮಾಗೆ ಹೊಸ ರೂಪ ನೀಡಿದ್ದಾರೆ. ಇದನ್ನು ಕನ್ನಡಿಗರು ನೋಡಿ. ಈ ಸಿನಿಮಾ ಚೆನ್ನಾಗಿ ಓಡಬೇಕು. ನೂರು ದಿನ ಅಲ್ಲ ನೂರು ವರ್ಷ ಸಿನಿಮಾ ಓಡಬೇಕು.'' - ಲೀಲಾವತಿ, ಹಿರಿಯ ನಟಿ

ಓಬವ್ವನ ಹಾಡನ್ನು ನೆನೆದ ಜಯಂತಿ

ಓಬವ್ವನ ಹಾಡನ್ನು ನೆನೆದ ಜಯಂತಿ

''ನಾಗರಹಾವು ಸಿನಿಮಾ ಮಾಡಿ 45 ವರ್ಷ ಆಯ್ತು ಎಂದು ರವಿಚಂದ್ರನ್ ಹೇಳಿದರು. ಅಷ್ಟು ವರ್ಷ ಆಗಿದ್ದರು ಈಗ ನೋಡುತ್ತಿದ್ದರೆ ಮೈ ಜುಮ್ ಎನಿಸುತ್ತದೆ. ಹಾಡು, ಡೈಲಾಗ್ ಗಳಲ್ಲಿ ಸೌಂಡ್ ತುಂಬ ಚೆನ್ನಾಗಿದೆ. ನನ್ನ ಹಾಡು ಕೂಡ ತುಂಬ ಚೆನ್ನಾಗಿದೆ. ಓಬವ್ವನ ಹಾಡನ್ನು ಪುಟ್ಟಣ್ಣ ಚಾಲೆಂಜ್ ನಿಂದ ಮಾಡಿದ್ದರು.'' - ಜಯಂತಿ, ಹಿರಿಯ ನಟಿ

ಕಲ್ಪನಾ ಬಿಟ್ಟ ಪಾತ್ರವನ್ನು ನಾನು ಮಾಡಿದೆ

ಕಲ್ಪನಾ ಬಿಟ್ಟ ಪಾತ್ರವನ್ನು ನಾನು ಮಾಡಿದೆ

''ಪುಟ್ಟಣ್ಣ ಮೊದಲು ಓಬವ್ವನ ಹಾಡಿಗಾಗಿ ಕಲ್ಪನಾ ಅವರನ್ನು ಕೇಳಿದ್ದರು. ಕಲ್ಪನಾ ಕಷ್ಟ ಸಣ್ಣ ಪಾತ್ರವನ್ನು ಯಾರು ಮಾಡುತ್ತಾರೆ ಎಂದಾಗ ನನ್ನ ಬಳಿ ಬಂದರು. ನಮ್ಮ ಮನೆಗೆ ಪುಟ್ಟಣ್ಣ ಹಾಗೂ ವೀರಸ್ವಾಮಿ ಅಣ್ಣ ಬಂದು ಚಿತ್ರದ ಹಾಡಿನಲ್ಲಿ ನಟಿಸುತ್ತಿರಾ ಎಂದು ಹೇಳಿದರು. ನಾನು ಅದು ಚಾಲೆಂಜಿಂಗ್ ಆಗಿದೆ ಅಂತ ಸ್ವೀಕರಿದೆ.'' - ಜಯಂತಿ, ಹಿರಿಯ ನಟಿ

ಈಶ್ವರಿ ಪ್ರೊಡಕ್ಷನ್ಸ್ ನಿಂದ ಮತ್ತೆ ಶೀಲ್ಡ್ ತೆಗೆದುಕೊಳ್ಳಬೇಕು

ಈಶ್ವರಿ ಪ್ರೊಡಕ್ಷನ್ಸ್ ನಿಂದ ಮತ್ತೆ ಶೀಲ್ಡ್ ತೆಗೆದುಕೊಳ್ಳಬೇಕು

''7.1 ಸೌಂಡ್ ನಲ್ಲಿ ಈಗ ಈ ಹಾಡು ಕೇಳಿದರೆ ನಾನೇನಾ ಈ ಹಾಡಿನಲ್ಲಿ ನಟಿಸಿರುವುದು ಎನಿಸಿತ್ತದೆ. ಅಷ್ಟೊಂದು ಚೆನ್ನಾಗಿ ಹಾಡು ಬಂದಿದೆ. ಈ ರೀತಿಯ ಸಿನಿಮಾಗಳು ಮತ್ತೆ ಬಂದಿರುವುದರಿಂದ ನೂರು ದಿನ ಓಡಬೇಕು. ಮತ್ತೆ ನಾವು ಈಶ್ವರಿ ಪ್ರೊಡಕ್ಷನ್ಸ್ ನಿಂದ ಶೀಲ್ಡ್ ತೆಗೆದುಕೊಳ್ಳಬೇಕು ಎನ್ನುವ ಆಸೆ ಇದೆ.'' - ಜಯಂತಿ, ಹಿರಿಯ ನಟಿ

ಸಿನಿಮಾವನ್ನು ನೋಡಿ ಸಕ್ಸಸ್ ಮಾಡಿ

ಸಿನಿಮಾವನ್ನು ನೋಡಿ ಸಕ್ಸಸ್ ಮಾಡಿ

''ಇಂದು ಕುಟುಂಬ ಸಮೇತ ನೋಡುವ ಸಿನಿಮಾ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಈ ಸಿನಿಮಾ ಎಲ್ಲರೂ ನೋಡುವಂತಹ ಸಿನಿಮಾ. ಹಾಗಾಗಿ ತಾವೆಲ್ಲರು ಈ ಸಿನಿಮಾವನ್ನು ನೋಡಿ ಸಕ್ಸಸ್ ಮಾಡಿ. ರವಿಚಂದ್ರನ್ ಮತ್ತು ಬಾಲಾಜಿ ಅವರಿಗೆ ನನ್ನ ಕಡೆಯಿಂದ ಶುಭ ಕೋರುತ್ತೇನೆ.'' - ಜಯಂತಿ, ಹಿರಿಯ ನಟಿ

More from Filmibeat

English summary
Kannada senior actress Leelavathi and Jayanthi spoke about 'Nagarahaavu' kannada movie. The movie will re releasing on july 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X